/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ರಾಜ್ಯದಲ್ಲೇ ಸದ್ದು ಮಾಡುತ್ತಿರುವ ಹಿಜಾಬ್-ಕೇಸರಿ ಶಾಲು (Karnataka Hijab Row) ಪ್ರಕರಣದಲ್ಲಿ ವಿದ್ಯಾರ್ಥಿಗಳು ಹಲವು ಕಡೆ ಕಾನೂನನ್ನು ಕೈಗೆಟ್ಟುಕೊಂಡಿರುವ ಘಟನೆಗಳು ನಡೆದಿವೆ, ಈ ನಡುವೆ ಹತ್ತು ದಿನಗಳ ಅಧಿವೇಶನದ ನಾಂದಿಯಾಗಿ ರಾಜ್ಯಪಾಲರ (Karnataka Governor) ಭಾಷಣದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಯಾವುದೇ ಉಲ್ಲೇಖವಿಲ್ಲದೆ ನಡೆದಿದೆ.

ಬಹು ವರ್ಷಗಳ ನಂತರ ರಾಜ್ಯಪಾಲರು ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ವಿಧಾನಸೌಧದ ಮುಖ್ಯ ದ್ವಾರದಿಂದ ಪ್ರವೇಶಿಸಿದರು. ವಿಧಾನಸಭೆಗೆ ಆಗಮಿಸಿ ಕನ್ನಡದಲ್ಲಿ ಭಾಷಣ ಪ್ರಾರಂಭಿಸಿದ ಇವರು ರಾಜ್ಯಪಾಲರು ಉಭಯ ಸದನಗಳನ್ನ ಉದ್ದೇಶಿಸಿ ಭಾಷಣ ಮಾಡಿ ಅಧಿವೇಶನಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: ಮಧುಬಾಲಾ ಎಂಬ ಬಾಲಿವುಡ್‌ನ ಮರ್ಲಿನ್ ಮನ್ರೋ ..!

2018 ರಿಂದ ಸತತ ಅತಿವೃಷ್ಠಿಯಾಯ್ತು, ಸಂತ್ರಸ್ತರ ರಕ್ಷಣೆಗೆ 496 ಕಾಳಜಿ ಕೇಂದ್ರ ಪ್ರಾರಂಭ ಆಗಿವೆ. 1,38,504 ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. ಹಾನಿಗೊಳಗಾದ ಮನೆಗಳಿಗೆ 10 ಸಾವಿರ ಪರಿಹಾರ ಪಾವತಿಲಾಗಿದೆ ಎಂದು ಹೇಳಿದರು. 

ಹಾನಿಯಾದ ಮನೆಗೆ 5 ಲಕ್ಷ ಪರಿಹಾರ, ಅರ್ಧ ಹಾನಿಗೆ 3 ಲಕ್ಷ, ಭಾಗಶಃ ಹಾನಿಗೆ 50 ಸಾವಿರ ಒಟ್ಟಾರೆ ಪರಿಹಾರ ನೀಡಲಾಗಿದೆ. ಈಗಾಗಲೇ 400.52 ಕೋಟಿ ನೆರವು ನೀಡಲಾಗಿದೆ ಎಂದರು.  

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು, ನೆರೆಸಂತ್ರಸ್ತರಿಗೆ ಹಣ ಇನ್ನು ಸರಿಯಾಗಿ ತಲುಪಿಲ್ಲ ಅಂತ ವರದಿಗಳು ಹೇಳಿವೆ ಎಂದರು. ರಾಜ್ಯಪಾಲರ ಬಾಯಲ್ಲಿ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಮಾತುಗಳು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬಂದವು.

ಈ ನಡುವೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಹುತೇಕ ಕಾಂಗ್ರೆಸ್ ಸದಸ್ಯರು ಕಪ್ಪು ಪಟ್ಟಿ ಧರಿಸಿ ರಾಜ್ಯಪಾಲರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದರು.

ರಾಜ್ಯಪಾಲರ ಭಾಷಣ ಬಳಿಕ ಮಾತನಾಡಿದ ಕಾಂಗ್ರೆಸ್ ಶಾಸಕ (Congress MLA) ಎಚ್.ಕೆ.ಪಾಟೀಲ್, ರಾಜ್ಯಪಾಲರ ಭಾಷಣ ರಾಜ್ಯದ ಜನತೆಗೆ ನಿರಾಶೆ ತಂದಿದೆ. ರಾಜ್ಯಪಾಲರ ಭಾಷಣದಲ್ಲಿ ಏನಿರಬೇಕು ಅದಿಲ್ಲ. ಮೂಲ ಉದ್ದೇಶವೇ ಅದರಲ್ಲಿ ಇಲ್ಲ. ರಾಜ್ಯಪಾಲರ ಭಾಷಣದಲ್ಲಿ ಹೊಸತನವಿಲ್ಲ. ರಾಜ್ಯದ ಸಾಧನೆಯ ಬಗ್ಗೆ ಏನೇನೂ ಇಲ್ಲ ಎಂದು ಹೇಳಿದರು. 

ಇದನ್ನೂ ಓದಿ: Apps Banned: ಸರ್ಕಾರದ ದೊಡ್ಡ ಕ್ರಮ, 54 ಚೀನೀ ಅಪ್ಲಿಕೇಶನ್‌ಗಳ ನಿಷೇಧ

ಅಧಿಕಾರಿಗಳು ಕೊಟ್ಟಿದ್ದನ್ನ ಕಟ್ ಆಂಡ್ ಪೇಸ್ಟ್ ಮಾಡಿದ್ದಾರೆ. ನೀರಾವರಿ ಯೋಜನೆಗಳ ಬಗ್ಗೆ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಬೇಕು. ಆಲಮಟ್ಟಿ ನೀರನ್ನ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲಿಯೂ ಅದರ ಬಗ್ಗೆ ವಿಸ್ತಾರವಾಗಿ ಹೇಳಿಲ್ಲ. ಮಹದಾಯಿ, ಮೇಕೆದಾಟು ಬಗ್ಗೆ ರಸ್ತೆಗಳಲ್ಲಿ ಚರ್ಚೆಯಾಗಿದೆ. ಆದರೆ ರಾಜ್ಯಪಾಲರ ಭಾಷಣದಲ್ಲಿ ಇಲ್ಲ. ಜನರ ಚಿಂತನೆಗಳನ್ನ ಅಲಕ್ಷಿಸಿದೆ ಎಂದು ರಾಜ್ಯಪಾಲರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
Karnataka Governor speech in Joint Session
News Source: 
Home Title: 

ಕಾನೂನು ಸುವ್ಯವಸ್ಥೆ ಬಗ್ಗೆ ಉಲ್ಲೇಖವಿಲ್ಲದೆ ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕರ ವಿರೋಧ

ಜಂಟಿ ಅಧಿವೇಶನ: ಕಾನೂನು ಸುವ್ಯವಸ್ಥೆ ಬಗ್ಗೆ ಉಲ್ಲೇಖವಿಲ್ಲದೆ ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕರ ವಿರೋಧ
Caption: 
ಥಾವರ್ ಚಂದ್ ಗೆಹ್ಲೋಟ್
Yes
Is Blog?: 
No
Tags: 
Facebook Instant Article: 
Yes
Highlights: 

ವಿಧಾನಸಭೆಯಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ರಾಜ್ಯಪಾಲರು 

ಉಭಯ ಸದನಗಳನ್ನ ಉದ್ದೇಶಿಸಿ ರಾಜ್ಯಪಾಲರ ಭಾಷಣ

ಕಾನೂನು ಸುವ್ಯವಸ್ಥೆ ಬಗ್ಗೆ ಉಲ್ಲೇಖವಿಲ್ಲದೆ ರಾಜ್ಯಪಾಲರ ಭಾಷಣ

ವಿಪಕ್ಷ ನಾಯಕರ ವಿರೋಧ

Mobile Title: 
ಕಾನೂನು ಸುವ್ಯವಸ್ಥೆ ಬಗ್ಗೆ ಉಲ್ಲೇಖವಿಲ್ಲದೆ ರಾಜ್ಯಪಾಲರ ಭಾಷಣ, ವಿಪಕ್ಷ ನಾಯಕರ ವಿರೋಧ
Zee Kannada News Desk
Prashobh Devanahalli
Publish Later: 
No
Publish At: 
Monday, February 14, 2022 - 13:53
Created By: 
Chethana Devarmani
Updated By: 
Chethana Devarmani
Published By: 
Chethana Devarmani
Request Count: 
2
Is Breaking News: 
No