Apps Banned: ಸರ್ಕಾರದ ದೊಡ್ಡ ಕ್ರಮ, 54 ಚೀನೀ ಅಪ್ಲಿಕೇಶನ್‌ಗಳ ನಿಷೇಧ

Apps Banned: ದೇಶದ ಭದ್ರತಾ ವ್ಯವಸ್ಥೆಗೆ ಧಕ್ಕೆ ತರಬಹುದು ಎಂಬ ಕಾರಣಕ್ಕೆ ಭಾರತದಲ್ಲಿ ಚೀನಾದ 54 ಆ್ಯಪ್‌ಗಳನ್ನು ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.

Written by - Yashaswini V | Last Updated : Feb 14, 2022, 11:31 AM IST
  • ಸರ್ಕಾರದ ಮಹತ್ವದ ನಿರ್ಧಾರ
  • 54 ಚೈನೀಸ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಸರ್ಕಾರ
  • Garena Free Fire ಮತ್ತು AppLock ನಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ
Apps Banned: ಸರ್ಕಾರದ ದೊಡ್ಡ ಕ್ರಮ, 54 ಚೀನೀ ಅಪ್ಲಿಕೇಶನ್‌ಗಳ ನಿಷೇಧ title=
Government's big action, 54 Chinese apps banned

Apps Banned:  ಭಾರತ ಸರ್ಕಾರವು ಶೀಘ್ರದಲ್ಲೇ 54 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಿದೆ ಎಂದು ಸುದ್ದಿ ಸಂಸ್ಥೆ ANI ಇತ್ತೀಚೆಗೆ ಟ್ವಿಟರ್‌ನಲ್ಲಿ ಟ್ವೀಟ್ ಮೂಲಕ ತಿಳಿಸಿದೆ. ಈ ಆ್ಯಪ್‌ಗಳು ದೇಶದ ಭದ್ರತೆಗೆ ಧಕ್ಕೆ ತರಬಹುದು ಎಂಬ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಇವುಗಳನ್ನು ನಿಷೇಧಿಸುವ ಆದೇಶ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಅಪ್ಲಿಕೇಶನ್‌ಗಳು AppLock ಮತ್ತು Garena Free Fire ನಂತಹ ಅನೇಕ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಒಳಗೊಂಡಿವೆ.

ಇದನ್ನೂ ಓದಿ- Valentine’s Day: ಪ್ರೇಮಿಗಳ ದಿನದಂದು ಸ್ಮಾರ್ಟ್‌ಫೋನ್‌ಗಳ ಮೇಲೆ ಪಡೆಯಿರಿ ಭಾರೀ ಡಿಸ್ಕೌಂಟ್

ಸರ್ಕಾರ ಈ ಆ್ಯಪ್‌ಗಳನ್ನು ನಿಷೇಧಿಸಿದೆ:
ಚೀನಾದ 54 ಆ್ಯಪ್‌ಗಳನ್ನು (Chinese Apps Banned) ಸರ್ಕಾರ ನಿಷೇಧಿಸುತ್ತಿದೆ ಎಂದು ಕೆಲ ಸಮಯದ ಹಿಂದೆ ಟ್ವೀಟ್ ಮಾಡುವ ಮೂಲಕ ಎಎನ್‌ಐ ಈ ಮಾಹಿತಿಯನ್ನು ನೀಡಿದೆ. ಇದರ ಹಿಂದಿರುವ ಕಾರಣ ದೇಶದ ಭದ್ರತೆಗೆ ಸಂಬಂಧಿಸಿದ್ದು ಎನ್ನಲಾಗಿದೆ. ಚೀನಾ ಮತ್ತು ಭಾರತದ ನಡುವಿನ ಬಿಗಿಯಾದ ಪರಿಸ್ಥಿತಿಯಲ್ಲಿ, ಈ 54 ಚೀನೀ ಅಪ್ಲಿಕೇಶನ್‌ಗಳು ದೇಶದ ಭದ್ರತೆಗೆ ಅಪಾಯವನ್ನುಂಟುಮಾಡಬಹುದು ಮತ್ತು ಆದ್ದರಿಂದ ಅವುಗಳನ್ನು ನಿಷೇಧಿಸುವ ಅಗತ್ಯವಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ- ISRO: PSLV-C52 ಯಶಸ್ವಿ ಉಡಾವಣೆ

ಗರೆನಾ ಫ್ರೀ ಫೈರ್ ಅನ್ನು ಸಹ ನಿಷೇಧಿಸಲಾಗಿದೆ:
ಫೆಬ್ರವರಿ 12 ರಿಂದ ಗೂಗಲ್ ಪ್ಲೇ ಸ್ಟೋರ್ (Google Store) ಮತ್ತು ಆಪ್ ಸ್ಟೋರ್‌ನಲ್ಲಿ ಮೊಬೈಲ್ ಗೇಮ್ ಗರೆನಾ ಫ್ರೀ ಫೈರ್ ಸಹ ಕಾಣಿಸುತ್ತಿಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ, ಇದರರ್ಥ ಈ ಆಟವನ್ನು ಸರ್ಕಾರವೂ ನಿಷೇಧಿಸಿದೆ. ಪ್ರಸ್ತುತ, ಪಟ್ಟಿಯಲ್ಲಿ ಹೆಸರಿಸಲಾದ ಅಪ್ಲಿಕೇಶನ್‌ಗಳಲ್ಲಿ ಈ ಆಟದ ಹೆಸರು ಗೋಚರಿಸುವುದಿಲ್ಲ, ಆದರೆ ಡೌನ್‌ಲೋಡ್ ಮಾಡುವ ಪ್ಲ್ಯಾಟ್‌ಫಾರ್ಮ್‌ಗಳಿಂದ ಅದನ್ನು ತೆಗೆದುಹಾಕಲು ಇದು ಕಾರಣವಾಗಿರಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News