Property Tax : ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ : ಆಸ್ತಿ ತೆರಿಗೆ ಪಾವತಿ ದಿನಾಂಕ ವಿಸ್ತರಣೆ!

ಆಸ್ತಿ ತೆರಿಗೆ ಪಾವತಿಗೆ ಅಂತಿಮ ದಿನವನ್ನು ಜೂನ್ 30 ಕ್ಕೆ ವಿಸ್ತರಣೆ

Last Updated : Jun 24, 2021, 12:03 PM IST
  • ಆಸ್ತಿ ತೆರಿಗೆದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ
  • ಆಸ್ತಿ ತೆರಿಗೆ ಪಾವತಿಗೆ ಅಂತಿಮ ದಿನವನ್ನು ಜೂನ್ 30 ಕ್ಕೆ ವಿಸ್ತರಣೆ
  • ಮೇ 30 ರೊಳಗೆ ಪಾವತಿಸಿದರೆ ಸರ್ಕಾರ ಶೇ. 5 ರಷ್ಟು ರಿಯಾಯ್ತಿ
 Property Tax : ತೆರಿಗೆ ಪಾವತಿದಾರರಿಗೆ ಸಿಹಿ ಸುದ್ದಿ : ಆಸ್ತಿ ತೆರಿಗೆ ಪಾವತಿ ದಿನಾಂಕ ವಿಸ್ತರಣೆ! title=

ಬೆಂಗಳೂರು : ಆಸ್ತಿ ತೆರಿಗೆದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜ್ಯದ ಎಲ್ಲ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ಅಂತಿಮ ದಿನವನ್ನು ಜೂನ್ 30 ಕ್ಕೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಆಸ್ತಿ ತೆರಿಗೆ(Property Tax)ಯನ್ನು ಮೇ 30 ರೊಳಗೆ ಪಾವತಿಸಿದರೆ ಸರ್ಕಾರ ಶೇ. 5 ರಷ್ಟು ರಿಯಾಯ್ತಿ ಘೋಷಿಸಿತ್ತು. ಇದೀಗ ಈ ರಿಯಾಯ್ತಿ ಜೂನ್ 30 ರವರೆಗೂ ಲಭ್ಯವಾಗಲಿದೆ. ಅನಂತರ ಆಸ್ತಿ ತೆರಿಗೆ ಪಾವತಿಸಿದರೆ ಶೇ. 2 ರಷ್ಟುಉ ದಂಡ ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : Vegetable Price Hike : ರಾಜ್ಯದ ಜನತೆಗೆ ಬಿಗ್ ಶಾಕ್ : ತರಕಾರಿಗಳ ಬೆಲೆ ಏರಿಕೆ!

ಬೆಂಗಳೂರು ಮಹಾನಗರ ಪಾಲಿಕೆ(BBMP) ಹೊರತುಪಡಿಸಿ ರಾಜ್ಯದ ಇತರ ಎಲ್ಲಾ ಪಾಲಿಕೆಗಳು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ಜೂನ್ 30 ರವರೆಗೆ ಅವಕಾಶ ನೀಡಿದೆ.

ಇದನ್ನೂ ಓದಿ : SSLC Exam 2021 : ಶಿಕ್ಷಣ ಇಲಾಖೆಯಿಂದ 'SSLC ಪರೀಕ್ಷೆಗೆ 'ಮಾರ್ಗಸೂಚಿ ಬಿಡುಗಡೆ' : ಇಲ್ಲಿದೆ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News