ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ ಎಂಬ ಹೇಳಿಕೆಗೆ ಕೆಂಡ ಕಾರಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, 40% ಕಮೀಷನ್ ಆರೋಪ ನಮ್ಮ ಸರ್ಕಾರದ ಮೇಲೆ ಮಾಡಿದ್ರಾ ಗುತ್ತಿಗೆದಾರರು? ನಮ್ಮ ಸರ್ಕಾರದ ಮೇಲೆ ಪತ್ರ ಬರೆದಿದ್ದರಾ..?.ಯಾವ ಆಧಾರದಲ್ಲಿ ಇವ್ರು ಹೀಗೆ ಹೇಳ್ತಿದ್ದಾರೆ ಗೊತ್ತಿಲ್ಲ, ಎಂದರು.
ಚಿಕ್ಕಬಳ್ಳಾಪುರದ ಸುಧಾಕರ್ಗೆ ರಾಜಕೀಯ ಜನ್ಮ ಕೊಟ್ಟಿದ್ದು ಕಾಂಗ್ರೆಸ್.. ಸುಧಾಕರ್ ಡಾಕ್ಟರ್ ಓದಿದ್ದಾನಾ.. ಕಾಪಿ ಮಾಡಿದ್ದಾನೋ ಗೊತ್ತಿಲ್ಲ ಎಂದು ಚಿಕ್ಕಬಳ್ಳಾಪುರ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಭ್ರಷ್ಟ ಮಂತ್ರಿ ಅಂತ ಇದ್ರೆ ಅದು ಸುಧಾಕರ್ ಮಾತ್ರ ಎಂದಿದ್ದಾರೆ.
ಸುಧಾಕರ್ಗೆ ಆಪರೇಷನ್ ಕಮಲಕ್ಕೊಳಗಾಗಬೇಡ ಅಂತಾ ಮಧ್ಯರಾತ್ರಿ ನಾನು ಪರಿಪರಿಯಾಗಿ ಹೇಳಿದೆ. ಆದ್ರೆ ಬೆಳಗ್ಗೆನೇ ಬಾಂಬೆಗೆ ಹೋಗ್ಬಿಟ್ಟ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.. ಭ್ರಷ್ಟಾಚಾರ ಆರೋಪದ ಬಗ್ಗೆ ನಿಮಗೆ ಏನಾದ್ರು ಧಮ್ಮು, ತಾಕತ್ ಇದ್ರೆ ತನಿಖೆ ನಡೆಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಅವಳಿ ಶಿಶು ಬಾಣಂತಿ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವೀಟ್!
ಒಂದು ಜೀವಕ್ಕಿಂತ ನಿಮಗೆ ನಿಯಮವೇ ಮುಖ್ಯವಾಯ್ತಾ... ಟ್ವೀಟ್ ಮಾಡಿ ಸಿಎಂ, ಸಚಿವ ಸುಧಾಕರ್ಗೆ ರಾಜ್ಯ ಕಾಂಗ್ರೆಸ್ ಪ್ರಶ್ನೆ
ಕರ್ನಾಟಕದ ಪತ್ರಿಕಾ ಮಿತ್ರರು ವಿಶೇಷವಾದ ಗೌರವ ಹೊಂದಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಜನೋಪಯೋಗಿ ಕೆಲಸಗಳನ್ನು ಮಾಡಿ ಜನಪ್ರಿಯತೆ ಪಡೆಯುತ್ತಿದೆ. ಇದನ್ನು ಸಹಿಸದ ಕಾಂಗ್ರೆಸ್, ಬಿಜೆಪಿ ಸರ್ಕಾರ ಹಾಗೂ ಪತ್ರಕರ್ತರ ಗೌರವ ಹಾಳು ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Omicron Is Not A Severe Variant - ಕರ್ನಾಟಕ ಆರೋಗ್ಯ ಸಚಿವ (Karnataka Health Minister) ಡಾ. ಕೆ ಸುಧಾಕರ್ (Dr. K.Sudhakar) ಅವರು ಕೊರೊನಾ ಹೊಸ ರೂಪಾಂತರಿ 'ಓಮಿಕ್ರಾನ್; ಕುರಿತು ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ (South Africa) ವೃತ್ತಿಪರ ವೈದ್ಯರಾಗಿರುವ ತನ್ನ ಸ್ನೇಹಿತನೊಂದಿಗೆ ತಾವು ಓಮಿಕ್ರಾನ್ ಕುರಿತು ಚರ್ಚೆ ನಡೆಸಿರುವುದಾಗಿ ಅವರು ಹೇಳಿದ್ದಾರೆ.
ಕೋವಿಡ್ 2ನೇ ಅಲೆಯ ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ ಬೇಕಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಲೋಪ ಕಂಡುಬಂದರೆ ಆಯಾ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು.
ಮಂಗಳವಾರ ಕಿಮ್ಸ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಸಚಿವ ಡಾ. ಕೆ. ಸುಧಾಕರ್, ಆಕ್ಸಿಜನ್ ಸೇರಿದಂತೆ ರೋಗಿಗಳ ಚಿಕಿತ್ಸೆಗೆ ಲಭ್ಯವಿರುವ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆಕ್ಸಿಜನ್ ಗೆ ಬೇಡಿಕೆ ಹೆಚ್ಚಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.