27 ವರ್ಷಗಳ ಬಳಿಕ ದೀಪಾವಳಿ ಹಬ್ಬದ ದಿನ ಸೂರ್ಯಗ್ರಹಣ .! ನಿಮ್ಮ ನಗರದಲ್ಲಿ ಗ್ರಹಣ ಗೋಚರ ಸಮಯ ಯಾವುದು ?

 ಗ್ರಹಣ ಗೋಚರ ಸಮಯ ಎಲ್ಲಾ ನಗರಗಳಲ್ಲಿಯೂ ಒಂದೇ ರೀತಿ ಇರುವುದಿಲ್ಲ.  ನಗರಕ್ಕನುಗುನವಾಗಿ ಈ ಸಮಯ ಭಿನ್ನವಾಗಿರುತ್ತದೆ. 

Written by - Ranjitha R K | Last Updated : Oct 25, 2022, 09:11 AM IST
  • 27 ವರ್ಷಗಳ ಬಳಿಕ ದೀಪಾವಳಿ ಹಬ್ಬದ ದಿನ ಸೂರ್ಯಗ್ರಹಣ
  • ಜ್ಯೋತಿಷ್ಯದಲ್ಲಿ ಈ ಗ್ರಹಣಕ್ಕೆ ವಿಶೇಷ ಮಹತ್ವ
  • ನಿಮ್ಮ ನಗರದಲ್ಲಿ ಗ್ರಹಣ ಗೋಚರ ಸಮಯ ಯಾವುದು ?
 27 ವರ್ಷಗಳ ಬಳಿಕ ದೀಪಾವಳಿ ಹಬ್ಬದ ದಿನ ಸೂರ್ಯಗ್ರಹಣ .!  ನಿಮ್ಮ ನಗರದಲ್ಲಿ ಗ್ರಹಣ ಗೋಚರ ಸಮಯ ಯಾವುದು ? title=
surya grahana karnataka (file photo)

ಬೆಂಗಳೂರು : ದೀಪಾವಳಿ ಅಮಾವಾಸ್ಯಯಂದೇ ಭಾಗಶಃ ಸೂರ್ಯಗ್ರಹಣ ಗೋಚರಿಸುತ್ತಿದೆ. 27 ವರ್ಷಗಳ ಬಳಿಕ ದೀಪಾವಳಿ ಹಬ್ಬದ ದಿನ ಸೂರ್ಯಗ್ರಹಣ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯದಲ್ಲಿ ಈ ಗ್ರಹಣಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಇಂದು ಸಂಜೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. 

 ಗ್ರಹಣ ಗೋಚರ ಸಮಯ ಎಲ್ಲಾ ನಗರಗಳಲ್ಲಿಯೂ ಒಂದೇ ರೀತಿ ಇರುವುದಿಲ್ಲ.  ನಗರಕ್ಕನುಗುನವಾಗಿ ಈ ಸಮಯ ಭಿನ್ನವಾಗಿರುತ್ತದೆ. ಬೆಂಗಳೂರಿನಲ್ಲೂ ಸಂಜೆ 5.12ಕ್ಕೆ ಗ್ರಹಣ ಆರಂಭವಾಗಲಿದ್ದು, ಸಂಜೆ 5.49ಕ್ಕೆ ಗರಿಷ್ಠ ಮಟ್ಟವನ್ನು ತಲುಪಿ, 5.55ರ ವೇಳೆಗೆ ಗ್ರಹಣ ಅಂತ್ಯವಾಗಲಿದೆ. 
 
ಇದನ್ನೂ ಓದಿ :  ಭಾರತದ ಈ ನಗರದಿಂದ ಪ್ರಾರಂಭವಾಗುತ್ತದೆ ಸೂರ್ಯಗ್ರಹಣ.! ವೀಕ್ಷಿಸುವಾಗ ನೆನಪಿನಲ್ಲಿರಲಿ ಈ ಅಂಶಗಳು

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕಾಣುವ ಪಾರ್ಶ್ವ ಸೂರ್ಯ ಗ್ರಹಣದ ವಿವರ:
ಬೆಂಗಳೂರು- 10.09% - ಸಂಜೆ 5:12 ಗಂಟೆಗೆ ಗ್ರಹಣ ಪ್ರಾರಂಭ
ಮೈಸೂರು- 9.5%- ಸಂಜೆ 5:13 ಗಂಟೆಗೆ ಪ್ರಾರಂಭ
ಧಾರವಾಡ- 16.09%- ಸಂಜೆ 5:01 ಗಂಟೆಗೆ ಪ್ರಾರಂಭ
ರಾಯಚೂರು- 16.67%- ಸಂಜೆ 5:01 ಗಂಟೆಗೆ ಪ್ರಾರಂಭ
ಬಳ್ಳಾರಿ- 14.64%- ಸಂಜೆ 5:04 ಗಂಟೆಗೆ ಪ್ರಾರಂಭ
ಬಾಗಲಕೋಟೆ- 17.33%- ಸಂಜೆ 5:00 ಗಂಟೆಗೆ ಪ್ರಾರಂಭ
ಮಂಗಳೂರು- 10.91%- ಸಂಜೆ 5:10 ಗಂಟೆಗೆ ಪ್ರಾರಂಭ
ಕಾರವಾರ- 15.15%- ಸಂಜೆ 5:03 ಗಂಟೆಗೆ ಪ್ರಾರಂಭ

ಇದನ್ನೂ ಓದಿ : ಸೂರ್ಯ ಗ್ರಹಣದಲ್ಲಿ ಆಹಾರದಲ್ಲಿ ಹಾಕಲು ತುಳಸಿ ಕೀಳುವುದು 'ಮಹಾ ಪಾಪ'

ಮೊದಲೇ ಹೇಳಿದ ಹಾಗೆ ಕೇತು ಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಈ ಗ್ರಹಣಕ್ಕೆ ಜ್ಯೋತಿಷ್ಯದಲ್ಲಿ ಮಹತ್ವ ಇದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಇನ್ನು ಸೂರ್ಯ ಗ್ರಹಣ ವೀಕ್ಷಿಸುವಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News