Mandya: ‘ಕಾಂತಾರ’ ನೋಡಿ ಥಿಯೇಟರ್‌ನಿಂದ ಹೊರ ಬರುವಾಗ ವ್ಯಕ್ತಿ ಸಾವು..!

ಸ್ನೇಹಿತರ ಜೊತೆ ಮಾರ್ನಿಂಗ್ ಶೋಗೆ ಹೋಗಿದ್ದ ರಾಜಶೇಖರ್ ಎಂಬುವರಿಗೆ ಸಿನಿಮಾ ನೋಡಿ ಹೊರ ಬರುವಾಗ ಹೃದಯಾಘಾತವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Written by - Zee Kannada News Desk | Last Updated : Oct 24, 2022, 08:30 PM IST
  • ‘ಕಾಂತಾರ’ ಸಿನಿಮಾ ನೋಡಿ ಥಿಯೇಟರ್‍ನಿಂದ ಹೊರಬರುವಾಗಿ ಹೃದಯಾಘಾತದಿಂದ ವ್ಯಕ್ತಿ ಸಾವು
  • ಮಂಡ್ಯದ ನಾಗಮಂಗಲದ ವೆಂಕಟೇಶ್ವರ ಥಿಯೇಟರ್‍ನಲ್ಲಿ ‘ಕಾಂತಾರ’ ಸಿನಿಮಾ ವೀಕ್ಷಿಸಿದ್ದ ರಾಜಶೇಖರ್
  • ಸ್ನೇಹಿತರ ಜೊತೆಗೆ ಸೋಮವಾರ ಮಾರ್ನಿಂಗ್ ಶೋಗೆ ಹೋಗಿದ್ದ ರಾಜಶೇಖರ್
Mandya: ‘ಕಾಂತಾರ’ ನೋಡಿ ಥಿಯೇಟರ್‌ನಿಂದ ಹೊರ ಬರುವಾಗ ವ್ಯಕ್ತಿ ಸಾವು..! title=
‘ಕಾಂತಾರ’ ವೀಕ್ಷಿಸಿದ ವ್ಯಕ್ತಿ ಸಾವು!

ಮಂಡ್ಯ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ನೋಡಿ ಥಿಯೇಟರ್‍ನಿಂದ ಹೊರ ಬರುವಾಗ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯದ ನಾಗಮಂಗಲದಲ್ಲಿ ತುರುವೇಕೆರೆ ಮೂಲದ ಕುಣಿಕೆನಹಳ್ಳಿ ಗ್ರಾಮದ ರಾಜಶೇಖರ್ ಸಾವನ್ನಪ್ಪಿದ್ದಾರೆ. ಸೋಮವಾರ ನಾಗಮಂಗಲದ ವೆಂಕಟೇಶ್ವರ ಥಿಯೇಟರ್‍ನಲ್ಲಿ ರಾಜಶೇಖರ್ ‘ಕಾಂತಾರ’ ಸಿನಿಮಾ ವೀಕ್ಷಿಸಿದ್ದರು.

ಇದನ್ನೂ ಓದಿ: Kantara: ‘ಕಾಂತಾರ’ ನೋಡಿ ತುಂಬಾ ಹೆಮ್ಮೆಯಾಗುತ್ತಿದೆ ಎಂದ ನಟಿ ಪೂಜಾ ಹೆಗ್ಡೆ

ಸ್ನೇಹಿತರ ಜೊತೆ ಮಾರ್ನಿಂಗ್ ಶೋಗೆ ಹೋಗಿದ್ದ ರಾಜಶೇಖರ್ ಗೆ ಸಿನಿಮಾ ನೋಡಿ ಹೊರ ಬರುವಾಗ ಹೃದಯಾಘಾತವಾಗಿದೆ. ಹಠಾತ್ ಹೃದಯಾಘಾತದಿಂದ ರಾಜಶೇಖರ್ ಥಿಯೇಟರ್ ಬಳಿಯೇ ಕೊನೆಯುಸಿರೆಳೆದಿದ್ದಾರೆ. ಮೃತ ರಾಜಶೇಖರ್ ಅವರು ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡ್ತಿದ್ದರು.

ಪ್ಯಾನ್ ಇಂಡಿಯಾ ಸಿನಿಮಾ ‘ಕಾಂತಾರ’ ಬಿಡುಗಡೆಯಾದ 5 ಭಾಷೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದ ಈ ಸಿನಿಮಾ ಇಂದಿಗೂ ಸಹ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 100 ಕೋಟಿ ರೂ. ಕ್ಲಬ್ ಸೇರಿರುವ ‘ಕಾಂತಾರ’ ಸಿನಿಮಾವನ್ನು ಭಾರತೀಯ ಚಿತ್ರರಂಗದ ಸ್ಟಾರ್ ನಟ-ನಟಿಯರು, ನಿರ್ದೇಶಕರು ಮತ್ತು ಗಣ್ಯರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ʼಪುನೀತ್‌ ಪರ್ವʼಕ್ಕೆ ʼದರ್ಶನ್‌-ಸುದೀಪ್‌ʼ ಬಂದಿಲ್ಲ : ಇಬ್ಬರಿಗೂ ಅಪ್ಪು ಮೇಲೆ ಅಪಾರ ಪ್ರೀತಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News