"ಕೋವಿಡ್ ಗಾಳಿ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು": ಕೋಡಿಹಳ್ಳಿ ಶ್ರೀ ಭವಿಷ್ಯ

ಒಂದೂವರೆ ವರ್ಷದಲ್ಲಿ ಕೊರೊನಾ ಹೋಗತ್ತೆ ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗತ್ತೆ. ಭಯಂಕರ, ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತೆ, ಅಷ್ಟೊಂದು ನೋವನ್ನ ಕೊಡುತ್ತೆ ಎಂದು ಬಳ್ಳಾರಿಯಲ್ಲಿ ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. 

Written by - Chetana Devarmani | Last Updated : Jun 11, 2022, 02:45 PM IST
  • ಕೋವಿಡ್ ಗಾಳಿ ಮೇಲೆ ಬರಬಹುದು
  • ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು
  • ಬಳ್ಳಾರಿಯಲ್ಲಿ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು
"ಕೋವಿಡ್ ಗಾಳಿ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು": ಕೋಡಿಹಳ್ಳಿ ಶ್ರೀ ಭವಿಷ್ಯ  title=
ಕೋಡಿಹಳ್ಳಿ ಶ್ರೀಗಳು 

ಬಳ್ಳಾರಿ: ಒಂದೂವರೆ ವರ್ಷದಲ್ಲಿ ಕೊರೊನಾ ಹೋಗತ್ತೆ ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗತ್ತೆ. ಭಯಂಕರ, ಜಗತ್ತಿನಾದ್ಯಂತ ಕುಡಿಯೋಕೆ ನೀರಿಲ್ಲದ ಹಾಗೆ ಆಗುತ್ತೆ, ಅಷ್ಟೊಂದು ನೋವನ್ನ ಕೊಡುತ್ತೆ ಎಂದು ಬಳ್ಳಾರಿಯಲ್ಲಿ ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. 

ಇದನ್ನೂ ಓದಿ: ರಾಜ್ಯದ ಜನರೇ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ- ಡಿ.ಕೆ.ಶಿವಕುಮಾರ್

ಮೂರು ತಿಂಗಳ ಹಿಂದೆ ಹೇಳಿದ್ದೆ ಮತ್ತೆ ಕೋವಿಡ್ ಬರುತ್ತೆ ಅಂತಾ. ಕೋವಿಡ್ ಬಗ್ಗೆ ಭಯ ಪಡೋ ಅವಶ್ಯಕತೆ ಇಲ್ಲ. ಒಂದೂವರೆ ವರ್ಷದಲ್ಲಿ ಸಂಪೂರ್ಣವಾಗಿ ಜಗತ್ತಿನಾದ್ಯಂತ ಕೋವಿಡ್ ಬಿಡುಗಡೆಯಾಗತ್ತೆ. ಕೋವಿಡ್ ವಿಶೇಷ ಅಂದ್ರೆ ಮನುಷ್ಯ ಕಷ್ಟ ಬಂದಾಗ ದೇವರು, ಧರ್ಮ ಅಂತಾನೆ, ಪ್ರಾರ್ಥನೆ‌ ಮಾಡ್ತಾನೆ. ಆದರೆ ಕೋವಿಡ್ ಕಾಯಿಲೆ ಬಂದು ದೇವರನ್ನೇ ಹಿಡಿದುಕೊಂಡು, ದೇವಸ್ಥಾನಗಳ ಬಾಗಿಲು ಹಾಕಿಸಿತು. ಆ ನಂತರ ಜನರ ಮೇಲೆ ಬಂತು, ನೀರಿನ ಮೇಲೆ, ಭೂಮಿ ಮೇಲೆ ಬಂತು. ಒಂದೂವರೆ ವರ್ಷದಲ್ಲಿ ಹೋಗತ್ತೆ ಆದರೇ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗತ್ತೆ. ಈಗ ಕೋವಿಡ್ ಗಾಳಿ ಮೇಲೆ ಬರಬಹುದು, ಉಸಿರಾಟದ ತೊಂದರೆಯಾಗಿ ಜನ ಬಿದ್ದು ಸಾಯಬಹುದು ಎಂದಿದ್ದಾರೆ. 

"ರಾಜಕೀಯ ಅಸ್ಥಿರ": 

ರಾಜಕೀಯ ಅಸ್ತಿರ ಅಂತ ಹೇಳಿದ್ದೆ. ಗುಂಪು ಆಗ್ತಾವೆ ಅಂತ ಹೇಳಿದ್ದೆ ಅದನ್ನ ಕಂಡುಕೊಂಡಿದ್ದೀರಿ. ನಾನು ಭಾರತ ದೇಶದಲ್ಲಿ ಇಂದು ಅವಘಡ ಆಗತ್ತೆ ಎಂದಿದ್ದೆ. ಈಗ ಪ್ರಾರಂಭವಾಗಿದೆ. ಪೈಗಂಬರರನ್ನ ಅವಹೇಳನ‌ ಮಾಡಿ, ಜಗತ್ತಿನಾದ್ಯಂತ ಶುರುವಾಗಿದೆ. ಮುಂದೆ ಇದರಿಂದ ಅಪಾಯ ಇದೆ ಎಂದು ಹೇಳಿದ್ದಾರೆ.

ಮಳೆ ಬಗ್ಗೆ ಕೋಡಿಹಳ್ಳಿ ಶ್ರೀಗಳ ಭವಿಷ್ಯ:

ಈ ಹಿಂದೆ ನಾನು ಹೇಳಿದ್ದೆ ಕೆಡಾಮಂಡಲ ಆಗುತ್ತೆ ಅಂತ. ಮಲೆನಾಡು ಬಯಲಾಗುತ್ತೆ, ಬಯಲು ಮಲೆನಾಡಗುತ್ತೆ ಅಂತ ಹೇಳಿದ್ದೆ. ಈಗ ಎಲ್ಲ ಕಡೆ ನೀರು ಬರ್ತಿದೆ. ಮುಂಗಾರು ಮಳೆ ಇನ್ನೂ ಜಾಸ್ತಿ ಆಗುವ ಲಕ್ಷಣ ಕಾಣ್ತಾ ಇದೆ. ಈ ಬಾರಿ ಅಕಾಲಿಕ ಮಳೆ ಆಗುವ ಲಕ್ಷಣನೂ ಇದೆ. ತೊಂದರೆ ಇಲ್ಲ, ಮಳೆ ಹಾವಳಿ ಜಾಸ್ತಿ ಇದೆ. ದೊಡ್ಡ ದೊಡ್ಡ ನಗರಗಳಿಗೆ ತೊಂದರೆಯಾಗುತ್ತದೆ ಎಂದಿದ್ದಾರೆ. 

ಇದನ್ನೂ ಓದಿ: ರಾಜ್ಯದ ಜನರೇ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೆಸೆಯುತ್ತಾರೆ- ಡಿ.ಕೆ.ಶಿವಕುಮಾರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News