ಹಾಸನ : 2000 ಕೋಟಿಗೆ ಸಿಎಂ ಪೋಸ್ಟು, 1000 ಕೋಟಿಗೆ ಮಂತ್ರಿ ಪೋಸ್ಟು. ಒಂದು ಕೋಟಿಗೆ ಯಾವ್ ಅಪಾಯಿಂಟ್ ಮೆಂಟು, 50 ಲಕ್ಷಕ್ಕೆ ಯಾವ ಅಪಾಯಿಂಟ್ ಮೆಂಟು ಅಂತಾ ಒಂದು ಪತ್ರಿಕೆಯವರು ಲಿಸ್ಟ್ ಹಾಕಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಅರಕಲಗೂಡಿನಲ್ಲಿ ಸಿಎಂ ಪೋಸ್ಟ್ ಗೆ 2500 ಕೋಟಿ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಅಪಾಯಿಂಟ್ ಮೆಂಟ್ ಗೆಷ್ಟು, ಪೋಸ್ಟಿಂಗ್ ಗೆ ಎಷ್ಟು ಅಂತಾ ಬಿಲ್ ಹಾಕಿದ್ದಾರೆ. ತಾಕತ್ ಇದ್ರೆ ಕೊಡ್ಲಿ ಅವರಿಗೆ ನೋಟೀಸ್ ನೋಡೋಣಾ ಸರ್ಕಾರದವರು. ಬಹಳ ದೊಡ್ಡ ದೊಡ್ಡ ಹಗರಣಗಳೆಲ್ಲವನ್ನೂ ಹಿಂದಿನಿಂದ ತೆಗೆದಿದ್ದಾರೆ. ಫ್ರಂಟ್ ಪೇಜ್ ಗೆ ಹಾಕಿದ್ದಾರೆ ತಾಕತ್ ಇದ್ರೆ ಕೊಡ್ಲಿ ನೋಡೋಣ ಅವರಿಗೆ ನೊಟೀಸ್ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ : ಟೆಂಡರ್ ಪೂರ್ವ ಪರಿಶೀಲನೆಗೆ ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆಯ ಸಮಿತಿ ರಚನೆ
ಅನೇಕ ಪ್ರಕರಣಗಳು ಹಳ್ಳಹಿಡಿದಿವೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಬೇರಲ್ಲ ಮುಚ್ಚಾಕಿದೆ ಅಂತಾ ಅವರು ಹೇಳಬಹುದು. ಅವರು ಇದ್ದಾರಲ್ಲಾ, ಹೋರಾಟ ಮಾಡೋದಕ್ಕೆ ಅಂತಾನೇ ಅವರದೂ ಒಂದ್ ಪಾರ್ಟಿ ಇದೆ. ಅವರ ಪಕ್ಷದ ಒಂದು ಬದ್ದತೆ ಇದೆ, ಹೋರಾಟ ಮಾಡಬೇಕು ಈ ವಿಚಾರದಲ್ಲಿ ಎಂದು ಹೇಳಿದರು.
ವಿಶ್ವತಾಯಂದಿರ ದಿನದ ಕಾರ್ಯಕ್ರಮದಲ್ಲಿ ಮಾತಾಡನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇವತ್ತು ಪವಿತ್ರವಾದ ದಿನ. ನಾನೂ ಲಕ್ಷಾಂತರ ಜನರನ್ನ ಸೇರಿಸಿ ಸಂಘಟನೆ ಮಾಡಿದ್ದೇನೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಸ್ತ್ರಿ ಶಕ್ತಿ ಸಂಘಗಳು ಬರೋದಕ್ಕೆ ನಾನು ಕಾರಣ. ಕಾಂಗ್ರೆಸ್ ಪಕ್ಷ ಹೆಣ್ಣಿನ ನಾಯಕತ್ವವನ್ನೇ ಹೊಂದಿದೆ. ಎರಡು ಭಾರಿ ಪ್ರಧಾನಿ ಹುದ್ದೆಯನ್ನ ತಿರಸ್ಕಾರ ಮಾಡಿದವರು ಈ ದೇಶದಲ್ಲಿ ಯಾರಾದ್ರೂ ಇದ್ರೆ ಅದು ಸೋನಿಯಾಗಾಂಧಿಯವರು ಎಂದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ನುಡಿದಂತೆ ನಡೆದಿದ್ದೇವೆ. ಅಂದು ಪ್ರಾಣಾಳಿಕೆಯಲ್ಲಿ ನೀಡಿದ್ದ ಎಲ್ಲವನ್ನೂ ಈಡೇರಿಸಿದ್ದೇವೆ. ಮುಂದಿನ ಕಾಂಗ್ರೆಸ್ ಪ್ರಾಣಾಳಿಕೆಯ ಒಂದು ಅಂಶವನ್ನು ಘೋಷಿಸುತ್ತಿದ್ದೇನೆ. ಸರ್ಕಾರದಿಂದ ಕೊಡೋ ಯಾವುದೇ ಫಲನುಭವ ಇರಲಿ. ಸೈಟ್, ಮನೆ ಗ್ರ್ಯಾಂಟ್, ಜಮೀನು, ಸಬ್ಸಿಡಿ ಸೇರಿ ಯಾವುದೇ ಕೊಟ್ಟರೂ ಹೆಣ್ಣುಮಕ್ಕಳ ಹೆಸರಿಗೇ ರಿಜಿಸ್ಟ್ರಾರ್ ಮಾಡುತ್ತೇವೆ. ಮುಂದೆ ಬರೋ ಕಾಂಗ್ರೆಸ್ ಸರ್ಕಾರ ಅದನ್ನ ಈಡೇರಿಸುತ್ತದೆ. ಕಾಂಗ್ರೆಸ್ ಪಕ್ಷದಿಂದ ಯಾರೇ ಸಿಎಂ ಆದರೂ ಅದನ್ನ ಈಡೇರಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : Prashanth Sambargi : 'ಮಸೀದಿಗಳ ಮೇಲಿನ ಲೌಡ್ ಸ್ಪೀಕರ್, ಹಲಾಲ್ ವಿರುದ್ಧ ನಮ್ಮ ಹೋರಾಟ ದೊಡ್ಡದಾಗಿದೆ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.