ಬೆಳಗಾವಿ: 'ಆರ್‌ಎಸ್‌ಎಸ್‌ಗೂ ನಮಗೂ ಯಾವುದೇ ಸಂಬಂಧವಿಲ್ಲ. ಜಲಸಂಪನ್ಮೂಲ ಸಚಿವ, ಸಹೋದರ ರಮೇಶ ಜಾರಕಿಹೊಳಿ ಕಪ್ಪು ಟೋಪಿ ಮತ್ತು ಖಾಕಿ ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದು ನೋಡಿಲ್ಲ. ಮುಸ್ಲಿಂ ಟೋಪಿ ಹಾಕಿದ್ದನ್ನು ಮಾತ್ರ ನೋಡಿದ್ದೇನೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
'ನಾನು ಜನಸಂಘದವನು. ಕರಿ ಟೋಪಿ, ಖಾಕಿ ಬಣ್ಣದ ಹಾಫ್ ಪ್ಯಾಂಟ್ ಹಾಕಿಕೊಳ್ಳುತ್ತಿದ್ದೆ' ಎಂಬ ರಮೇಶ ಜಾರಕಿಹೊಳಿ(Ramesh Jarkiholi) ಹೇಳಿಕೆಗೆ ಇಲ್ಲಿ ಇಂದು ಪ್ರತಿಕ್ರಿಯಿಸಿದ ಸತೀಶ, 'ನಮ್ಮ ತಂದೆ ಅವರ ಸ್ನೇಹಿತ ಪತ್ರಾವಳಿ ಎನ್ನುವವರು ಆರ್‌ಎಸ್‌ಎಸ್‌ನಲ್ಲಿದ್ದರು. ತಂದೆ, ವೈಯಕ್ತಿಕ ಬಾಂಧವ್ಯದಿಂದ ಅವರ ಬಳಿ ಹೋಗಿ ಕೂರುತ್ತಿದ್ದರು. ಅದನ್ನೇ ರಮೇಶ ಆರ್‌ಎಸ್‌ಎಸ್ ಎಂದು ಬಿಂಬಿಸುತ್ತಿದ್ದಾರೆ. 30 ವರ್ಷಗಳಲ್ಲಿ ರಮೇಶ ಆರ್‌ಎಸ್‌ಎಸ್ ಮೂಲದ ಬಗ್ಗೆ ಹೇಳಿರಲೇ ಇಲ್ಲ. ಈಗ ಹೇಳಿಕೆ ಕೊಟ್ಟಿರುವುದು ಆಶ್ಚರ್ಯ ತಂದಿದೆ' ಎಂದು ತಿಳಿಸಿದರು.
H Vishwanath: ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬೀಸಿದ 'ಬಿಜೆಪಿ ಎಂಎಲ್ ಸಿ'
ರಮೇಶ ಮುಸ್ಲಿಮರು ಧರಿಸುವ ಟೋಪಿ ಹಾಕಿದ್ದ ಫೋಟೊ ಪ್ರದರ್ಶಿಸಿದರು: 'ನಾವು ಯಾವತ್ತೂ ಆರ್‌ಎಸ್‌ಎಸ್ ಭಾಗವಾಗಿರಲಿಲ್ಲ. ರಮೇಶ ಹಿಂದಿನಿಂದಲೂ ಮುಸ್ಲಿಮರ ಪರ ಇದ್ದು ಹೋರಾಡಿದವರು. ಮುಂದೆಯೂ ಹೀಗೆಯೇ ಇರುತ್ತಾರೆ ಎಂಬ ವಿಶ್ವಾಸವಿದೆ. ಬಿಜೆಪಿಯಲ್ಲಿದ್ದರೂ ಮುಸ್ಲಿಮರು, ಶೋಷಿತರ ಪರವಾಗಿ ಇರಬೇಕು. ಹಿಂದಿನ ಹೋರಾಟ, ಇತಿಹಾಸ ಮರೆಯಬಾರದು. ಸಿದ್ಧಾಂತಗಳನ್ನು ಬದಲಿಸಬಾರದು' ಎಂದು ಕೋರಿದರು.
Siddaramaiah: 'ಬಿಜೆಪಿ ಸರ್ಕಾರ ಪಾಪದ ಕೂಸು, ಅನೈತಿಕವಾಗಿ ರಚನೆಯಾಗಿದೆ'
'ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಈ ತಿಂಗಳ ಅಂತ್ಯದಲ್ಲಿ ಘೋಷಣೆಯಾಗುವ ನಿರೀಕ್ಷೆ ಇದೆ. ಮುಂದಿನ ತಿಂಗಳ ಅಂತ್ಯದೊಳಗೆ ಚುನಾವಣೆ ಮುಗಿಯಲೇಬೇಕಿದೆ. ನಮ್ಮ ಅಭ್ಯರ್ಥಿ ಬಗ್ಗೆ ಇನ್ನೂ ಚರ್ಚೆ ಹಂತದಲ್ಲಿದೆ. ನಾವು ಸಲ್ಲಿಸುವ ಹೆಸರು ಅಂತಿಮವಾಗುತ್ತದೆ. ನಾನೇ ನಿಲ್ಲಬೇಕು ಎಂಬ ಒತ್ತಡವೇನಿಲ್ಲ' ಎಂದು ಪ್ರತಿಕ್ರಿಯಿಸಿದರು.
JDS: ‘ಪಂಚರತ್ನ’ ಅಸ್ತ್ರದೊಂದಿಗೆ ಪಕ್ಷ ಸಂಘಟನೆಗೆ ಮುಂದಾದ HDK..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.