ಬೆಂಗಳೂರು: ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ಕೆಎಸ್ಆರ್ಟಿಸಿ ಬಸ್ಗಳು ನಿಧಾನವಾಗಿ ಸಂಚಾರವನ್ನು ಆರಂಭಿಸಿವೆ. ರಾಜ್ಯಾದ್ಯಂತ ಕೆಲವು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭವಾಗಿದ್ದು, ದೂರದೂರುಗಳಿಗೆ ತೆರಳುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.
ಹಾಗೇ, ಬೆಂಗಳೂರಿನಲ್ಲಿ ಕೂಡ ಇಂದು ಕೆಲವು ಬಿಎಂಟಿಸಿ(BMTC) ಬಸ್ಗಳು ಸಂಚಾರ ನಡೆಸತೊಡಗಿವೆ. ಬಿಎಂಟಿಸಿ ಬಸ್ಗಳ ಚಾಲಕರು, ಕಂಡಕ್ಟರ್ಗೆ ಮುಷ್ಕರ ನಿರತರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಬೆಳಗ್ಗೆ ಪೊಲೀಸ್ ವಾಹನಗಳ ಭದ್ರತೆಯೊಂದಿಗೆ ಬಿಎಂಟಿಸಿ ಬಸ್ಗಳು ಸಂಚಾರ ಆರಂಭಿಸಿವೆ.
ಸಾರಿಗೆ ನೌಕರರ ಹೋರಾಟ: ಬೇಡಿಕೆಗಳ ಈಡೇರಿಕೆಗೆ ನಾಳೆ ಮಹತ್ವದ ಸಭೆ ಕರೆದ ಸಿಎಂ ಬಿಎಸ್ ವೈ!
ರಾಜ್ಯಾದ್ಯಂತ ನಿಧಾನಗತಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭವಾಗಿವೆ. ಇಂದು ಮುಂಜಾನೆಯಿಂದ ವಿವಿಧ ಊರುಗಳಿಗೆ ಕೆಎಸ್ಆರ್ಟಿಸಿಯ ಒಟ್ಟು 66 ಬಸ್ಗಳು ಸೇವೆ ಆರಂಭಿಸಿವೆ. ಮಂಗಳೂರಿಗೆ 61 ಬಸ್, ಪುತ್ತೂರಿಗೆ 1, ಶಿವಮೊಗ್ಗಕ್ಕೆ 2 ಬಸ್ ಆರಂಭವಾಗಿದೆ ಎಂದು ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ. ಇಂದು ಮುಂಜಾನೆ ಬೆಂಗಳೂರಿನ ಮೆಜೆಸ್ಟಿಕ್ನಿಂದ ಎಜಿಎಸ್ ಲೇಔಟ್ ಕಡೆಗೆ ಸಂಚರಿಸುವ 45D ಸಂಖ್ಯೆಯ ಬಸ್ ಸಂಚಾರ ಆರಂಭಿಸಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಬಸ್ ಸಂಚಾರ ಆರಂಭಿಸಿದೆ. ಮತ್ತೊಂದು ಬಸ್ ಎಜಿಎಸ್ ಲೇಔಟ್ ನಿಂದ ಮೆಜೆಸ್ಟಿಕ್ಗೆ ಆಗಮಿಸಿದೆ. 7-8 ಪ್ರಯಾಣಿಕರನ್ನು ಹೊತ್ತು ಸಾಗಿದ ಬಿಎಂಟಿಸಿ ಬಸ್ಗೆ ಸಾರಿಗೆ ಇಲಾಖೆಯಿಂದ ಎಸ್ಕಾರ್ಟ್ ವ್ಯವಸ್ಥೆ ಕಲ್ಪಿಸಲಾಯಿತು.
'ಸೋಮವಾರದಿಂದ ಸರ್ಕಾರಿ ಬಸ್ ದರದಲ್ಲಿ ರಾಜ್ಯದಲ್ಲಿ ರಸ್ತೆಗಿಳಿಯಲಿವೆ ಖಾಸಗಿ ಬಸ್'
ಎಜಿಎಸ್ ಲೇಔಟ್ನ ಡಿಪೋದಿಂದ ಬಸ್ ಹೊರ ಬರುವಾಗ ಯಾರೂ ತಡೆಯಲಿಲ್ಲ. ಪೊಲೀಸರು ಸ್ವಲ್ಪ ದೂರ ಎಸ್ಕಾರ್ಟ್ ಮಾಡಿದರು. ಮಾರ್ಗ ಮಧ್ಯದಲ್ಲಿ ಯಾರೂ ತಡೆದಿಲ್ಲ. ಜನರು ಕೂಡ ಬರುತ್ತಿದ್ದಾರೆ. ಸಾರಿಗೆ ನೌಕರರಿಗೆ ಒಳ್ಳೆಯದಾಗಲಿ ಅಂತ ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ನಡುವೆ ಡ್ಯೂಟಿ ಕೂಡ ಮುಖ್ಯ. ಜನರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಬಸ್ ಸಂಚಾರ ಆರಂಭಿಸಿದ್ದೇವೆ ಎಂದು ಬಿಎಂಟಿಸಿ ಬಸ್ ಕಂಡಕ್ಟರ್ ಹೇಳಿದ್ದಾರೆ.
ಸಚಿವ ಲಕ್ಷ್ಮಣ ಸವದಿಗೆ ಕರೆ ಮಾಡಿದ ಮಾಜಿ ಸಿಎಂ: ಯಾಕೆ ಗೊತ್ತಾ?
ಬೆಳಗ್ಗೆಯಿಂದ ಸಂಚಾರ ಆರಂಭಿಸಿರುವ ಮತ್ತೊಂದು ಬಿಎಂಟಿಸಿ ಬಸ್ಗೂ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದಿಂದ ಮೆಜೆಸ್ಟಿಕ್ಗೆ ಬಂದ ಬಿಎಂಟಿಸಿ ಬಸ್ ಹಿಂದೆ ಸಾರಿಗೆ ಇಲಾಖೆಯ ಜೀಪ್ನಿಂದ ಎಸ್ಕಾರ್ಟ್ ಆಗಮಿಸಿತು. ಬೆಂಗಳೂರಿನಲ್ಲಿ ನಿಧಾನವಾಗಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗುತ್ತಿದೆ.
ಗ್ರಾ.ಪಂ. ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ್ರೆ ಸದ್ಯಸತ್ವ ಅಸಿಂಧು..!?