ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಗೆಲುವು; ಇದು ದೇವೇಗೌಡರ ಗೆಲುವು ಎಂದ ಶಿವರಾಮೇಗೌಡ

22 ವರ್ಷದ ಅಧಿಕಾರವಿಲ್ಲದ ನನ್ನ ವನವಾಸ ಈಗ ಅಂತ್ಯಕಂಡಿದೆ. ಎಲ್ಲ ನಾಯಕರು ಸೇರಿ ನನಗೆ ಅಧಿಕಾರ ಕೊಡಿಸಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದ್ದಾರೆ. 

Last Updated : Nov 6, 2018, 02:51 PM IST
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಗೆಲುವು; ಇದು ದೇವೇಗೌಡರ ಗೆಲುವು ಎಂದ ಶಿವರಾಮೇಗೌಡ title=

ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವನೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. 

ಮಂಡ್ಯ ಉಪಚುನಾವಣೆಯಲ್ಲಿ ಬರೋಬ್ಬರಿ 5,69,347 ಹೆಚ್ಚು ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು, ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಅವರು 244404 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಈ ಮೂಲಕ 3,24,943 ಮತಗಳ ಅಂತರದಲ್ಲಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ. 

ಗೆಲುವಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್.ಆರ್.ಶಿವರಾಮೇಗೌಡ ಅವರು, ತಮ್ಮ ಜಯವನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರಿಗೆ ಅರ್ಪಿಸಿದ್ದಾರೆ. "ನನ್ನ ಗೆಲುವಿಗೆ ಸಹಕರಿಸಿದ ಎಲ್ಲ ಶಾಸಕರಿಗೂ ನಾನು ಕೃತಜ್ಱತೆ ಅರ್ಪಿಸುತ್ತೇನೆ. 22 ವರ್ಷದ ಅಧಿಕಾರವಿಲ್ಲದ ನನ್ನ ವನವಾಸ ಈಗ ಅಂತ್ಯಕಂಡಿದೆ. ಎಲ್ಲ ನಾಯಕರು ಸೇರಿ ನನಗೆ ಅಧಿಕಾರ ಕೊಡಿಸಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಪಕ್ಷದ ವರಿಷ್ಠರು ಏನು ಕೆಲಸ ಹೇಳುತ್ತಾರೋ ಆ ಕೆಲಸವನ್ನು ಮಾಡುತ್ತೇನೆ. ದೀಪಾವಳಿ ಹಬ್ಬದ ದಿನ ನನಗೆ ಸಿಹಿ ನೀಡಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುತ್ತೇನೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳದೆ ಜನ ಸೇವೆ ಮಾಡುತ್ತೇನೆ" ಎಂದಿದ್ದಾರೆ.
 

Trending News