ಕಾಂಗ್ರೇಸ್ ಹೈಕಮಾಂಡ್ಗೆ ಮಹಿಳಾ ಆಕಾಂಕ್ಷಿಗಳ ಪಟ್ಟಿ ರವಾನೆ

ಆಕಾಂಕ್ಷಿಗಳ ಪಟ್ಟಿಯಲ್ಲಿ ಹಿರಿಯ ನಾಯಕರ ಮಕ್ಕಳು ಮತ್ತು ಘಟಾನುಘಟಿ ನಾಯಕಿಯರು ಸೇರಿದ್ದಾರೆ.  

Last Updated : Jan 30, 2018, 10:24 AM IST
ಕಾಂಗ್ರೇಸ್ ಹೈಕಮಾಂಡ್ಗೆ ಮಹಿಳಾ ಆಕಾಂಕ್ಷಿಗಳ ಪಟ್ಟಿ ರವಾನೆ title=

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೇಸ್ನಲ್ಲಿ ಬಾರಿ ಪೈಪೋಟಿ ಏರ್ಪಟ್ಟಿದ್ದು, 30ಕ್ಕೂ ಅಧಿಕ ಮಹಿಳಾ ಅಕಾಂಕ್ಷಿಗಳ ಪಟ್ಟಿ ಕಾಂಗ್ರೇಸ್ ಹೈಕಮಾಂಡ್ಗೆ ರವಾನೆಯಾಗಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆಯರಾದ ಗೀತಾ ಮಹಾದೇವ ಪ್ರಸಾದ್, ಉಮಾಶ್ರೀ, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಿರಿಯ ನಾಯಕರ ಮಕ್ಕಳು ಮತ್ತು ಘಟಾನುಘಟಿ ನಾಯಕಿಯರು ಸೇರಿದ್ದಾರೆ. 

ಪ್ರತಿ ಜಿಲ್ಲೆಯಲ್ಲಿ ಓರ್ವ ಮಹಿಳೆಗೆ ಟಿಕೇಟ್ ನೀಡಲು ಕಾಂಗ್ರೇಸ್ ನಿರ್ಧಾರ...
ಪ್ರತಿ ಜಿಲ್ಲೆಯಲ್ಲಿ ಓರ್ವ ಮಹಿಳೆಗೆ ಟಿಕೇಟ್ ಕೊಡಬೇಕೆಂದು ಹೈಕಮಾಂಡ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಆಂತರಿಕ ಸಮೀಕ್ಷೆ ನಡೆಸಿ ಗೆಲ್ಲುವ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡಲು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೆಪಿಸಿಸಿ ಮಹಿಳಾ ಘಟಕಕ್ಕೆ ಸೂಚನೆ ನೀಡಿದ್ದರು. ವರಿಷ್ಠರ ಸೂಚನೆಯಂತೆ ಆಂತರಿಕ ಸಮೀಕ್ಷೆ ನಡೆಸಿರುವ ಕೆಪಿಸಿಸಿ ಮಹಿಳಾ ಘಟಕ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿ ಪಟ್ಟಿಯನ್ನು ಹೈಕಮಾಂಡ್ಗೆ ರವಾನಿಸಿದೆ.

2013ರ ಚುನಾವಣೆಯಲ್ಲಿ ಕಾಂಗ್ರೇಸ್ 10 ಮಹಿಳಾ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿತ್ತು. ಅದರಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳಾಗಿದ್ದ ಶಕುಂತಲಾ ಶೆಟ್ಟಿ, ಶಾರದ ಶೆಟ್ಟಿ, ಉಮಾಶ್ರಿ ಗೆಲುವು ಸಾಧಿಸಿದ್ದರು. ಮಹದೇವ ಪ್ರಸಾದ್ ಸಾವಿನಿಂದ ತೆರೆವಾದ ಗುಂಡ್ಲುಪೇಟೆ ಕ್ಷೇತ್ರದಿಂದ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಸ್ಪರ್ಧಿಸಿ ಗೆಲುವು ಕಂಡರು. ಹಾಗಾಗಿ ಪ್ರಸ್ತುತ ಕಾಂಗ್ರೆಸ್ನಲ್ಲಿ ನಾಲ್ವರು ಮಹಿಳಾ ಶಾಸಕರಿದ್ದಾರೆ.

ಕಾಂಗ್ರೆಸ್ ಮಹಿಳಾ ಆಕಾಂಕ್ಷಿಗಳ ಪಟ್ಟಿ

  ಕ್ಷೇತ್ರ  ಆಕಾಂಕ್ಷಿ ಹೆಸರು   
1. ಬೆಳಗಾವಿ ದಕ್ಷಿಣ ಲಕ್ಷ್ಮಿ ಹೆಬ್ಬಾಳ್ಕರ್ ಕೆಪಿಸಿಸಿ ಮಹಿಳಾ ಘಟಕ
2. ತೇರದಾಳ ಉಮಾಶ್ರೀ ಹಾಲಿ ಸಚಿವೆ
3. ಗುಂಡ್ಲುಪೇಟೆ ಗೀತಾ ಮಹದೇವ ಪ್ರಸಾದ್ ಹಾಲಿ ಸಚಿವೆ
4. ಕುಮಟಾ  ಶಾರದ ಶೆಟ್ಟಿ  ಹಾಲಿ ಶಾಸಕಿ
5. ಮೂಡಿಗೆರೆ ಮೋಟಮ್ಮ ವಿಧಾನ ಪರಿಷತ್ ಸದಸ್ಯೆ
6. ಮೂಡಿಗೆರೆ ನಯನಾ ಮೋಟಮ್ಮ ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ
7. ಕೆಜಿಎಫ್ ರೂಪಾ ಶಶಿಧರ್ ಸಂಸದ ಕೆ.ಎಚ್ ಮುನಿಯಪ್ಪ ಮಗಳು
8. ಬಾಗಲಕೋಟೆ ಗಂಗಾ ಮೇಟಿ ---
9. ಕೊಳ್ಳೆಗಾಲ ಪುಷ್ಪಾ ಅಮರನಾಥ್ ಮೈಸೂರು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ
10. ಖಾನಪುರ ಅಂಜಲಿ ನಿಂಬಾಳ್ಕರ್ ಬಾಲ ಭವನ ಅಧ್ಯಕ್ಷೆ
11. ರಾಜಾಜಿನಗರ ಮಂಜುಳಾ ನಾಯ್ಡು  ---
12. ರಾಜಾಜಿನಗರ ಜಿ ಪದ್ಮಾವತಿ ---

13.

ಬೊಮ್ಮನಹಳ್ಳಿ ಕವಿತಾ ರೆಡ್ಡಿ ---
14. ಬೊಮ್ಮನಹಳ್ಳಿ ಸುಷ್ಮಾ ರಾಜಗೋಪಾಲ ರೆಡ್ಡಿ ---
15. ನೆಲಮಂಗಲ ಕಮಲಾಕ್ಷಿ ರಾಜಣ್ಣ ---
16. ಜಗಳೂರು ಪುಷ್ಪಾ ನಾಯಕ್ ---
17. ವಿರಾಜಪೇಟೆ ಸರಿತಾ ಪೂಣಚ್ಚ ---
18. ಮಡಿಕೇರಿ ಚಂದ್ರಕಲಾ ---
19. ಜಯನಗರ ಸೌಮ್ಯರೆಡ್ಡಿ ---
20. ಶಿಗ್ಗಾಂವ್ ರಾಜೇಶ್ವರಿ ಪಟೇಲ್ ---
21. ಸಾಗರ ಡಾ. ನಂದಿನಿ ---
22. ಕಡೂರು ವನಮಾಲ ದೇವರಾಜ್ ---
23. ಚಿಕ್ಕಮಗಳೂರು ಗಾಯಿತ್ರಿ ಶಾಂತಲಗೌಡ ---
24. ಬೀದರ್ ದಕ್ಷಿಣ ಮೀನಾಕ್ಷಿ ಸಂಗ್ರಾಮ್ ---
25. ಚನ್ನಪಟ್ಟಣ ಶಾರದಗೌಡ ---
26. ಶೃಂಗೇರಿ ವೀಣಾ ಚಂದ್ರೇಗೌಡ ---
27. ಶೃಂಗೇರಿ ಆರತಿ ಕೃಷ್ಣ ---
28. ಸಿಂಧಗಿ ಮಂಜುಳಾ ಗೋವರ್ಧನ್ ---
29. ತುರವೇಕೆರೆ ಗೀತಾ ರಾಜಣ್ಣ ---
30. ಚಿತ್ರದುರ್ಗ ಭಾವನಾ ---
31. ಚಿಂತಾಮಣಿ ವಾಣಿ ಕೃಷ್ಣಾರೆಡ್ಡಿ ---
32. ಹೊಳೆ ನರಸೀಪುರ ಎಸ್.ಜೆ. ಅನುಪಮ ---
33. ದಾಸರಹಳ್ಳಿ ಸೌಂದರ್ಯ ಮಂಜಪ್ಪ ---
34. ದಾಸರಹಳ್ಳಿ ಜಯಂತಿ ಭಗವಾನ್ ---

 

Trending News