ಮಾದಪ್ಪನ‌ ದೀಪಾವಳಿ ತೇರು ಸಂಪನ್ನ: ಡ್ರೋಣ್ ನಲ್ಲಿ ವೈಭವ ಸೆರೆ!!

ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬೆಳಗ್ಗೆ 9.15ಕ್ಕೆ ರಥಕ್ಕೆ ಚಾಲನೆ ಕೊಟ್ಟದ್ದೇ ತಡ ಉಘೇ ಮಾದಪ್ಪ, ಮಾಯಕಾರ ಮಾದಪ್ಪ ಎಂಬ ಲಕ್ಷಾಂತರ ಧ್ವನಿಗಳ ಜಯಘೋಷ ಮಾರ್ದನಿಸಿತು.‌ ಅಧಿಕಾರಿಗಳು

Written by - Yashaswini V | Last Updated : Oct 26, 2022, 01:34 PM IST
  • ಕಳೆದ 4 ದಿನಗಳಿಂದ ಲಕ್ಷ- ಲಕ್ಷ ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ ಪಡೆದಿದ್ದಾರೆ.
  • ರಥೋತ್ಸವ ದಿನವಾದ ಇಂದು ಸಹ ರಾಜ್ಯದ ಮೂಲೆ - ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸಿದ್ದರು
  • ಈ ವೈಭವದ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಾದಪ್ಪನ‌ ದೀಪಾವಳಿ ತೇರು ಸಂಪನ್ನ: ಡ್ರೋಣ್ ನಲ್ಲಿ ವೈಭವ ಸೆರೆ!!  title=
Madappa Jatre

ಚಾಮರಾಜನಗರ: ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ರಥೋತ್ಸವ ಇಂದು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.

 ಮಲೆಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬೆಳಗ್ಗೆ 9.15ಕ್ಕೆ ರಥಕ್ಕೆ ಚಾಲನೆ ಕೊಟ್ಟದ್ದೇ ತಡ ಉಘೇ ಮಾದಪ್ಪ, ಮಾಯಕಾರ ಮಾದಪ್ಪ ಎಂಬ ಲಕ್ಷಾಂತರ ಧ್ವನಿಗಳ ಜಯಘೋಷ ಮಾರ್ದನಿಸಿತು.‌ ಅಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉತ್ಸಾಹದಿಂದ ರಥ ಎಳೆದು ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿದರು.

ಇದನ್ನೂ ಓದಿ- ದೀಪಾವಳಿ‌ ಸಂಭ್ರಮ: ಮಾದಪ್ಪನ ಬೆಟ್ಟದಲ್ಲಿ ಹಾಲರವಿ ಉತ್ಸವದ ಸಡಗರ

ಕಳೆದ 4 ದಿನಗಳಿಂದ ಲಕ್ಷ- ಲಕ್ಷ ಮಂದಿ ಭಕ್ತರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮಿ ದರ್ಶನ ಪಡೆದಿದ್ದಾರೆ. ರಥೋತ್ಸವ ದಿನವಾದ ಇಂದು ಸಹ ರಾಜ್ಯದ ಮೂಲೆ - ಮೂಲೆಗಳಿಂದ ಲಕ್ಷಾಂತರ ಮಂದಿ ಭಕ್ತಾದಿಗಳು ಆಗಮಿಸಿದ್ದು, ಈ ವೈಭವದ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ- ಹಳ್ಳಕ್ಕೆ ಇಳಿದ ಮಲೆಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಬಸ್: 25 ಮಂದಿಗೆ ಗಾಯ

ಎರಡೂವರೆ ಲಕ್ಷಕ್ಕೂ ಹೆಚ್ಚು ಮಾರಾಟವಾದ ಲಾಡು:
ಇನ್ನು ದೀಪಾವಳಿ ಜಾತ್ರೆ ಹಿನ್ನಲೆಯಲ್ಲಿ  ಕಳೆದ 2 ದಿನದಿಂದ ಎರಡೂವರೆ ಲಕ್ಷಕ್ಕೂ ಹೆಚ್ಚು  ಮಲೆ ಮಹದೇಶ್ವರನ ಲಾಡು ಪ್ರಸಾದ  ಮಾರಾಟವಾಗಿದೆ ಎಂದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News