Mandya Lok Sabha Election Result: ಸಕ್ಕರೆ ನಾಡಿನಲ್ಲಿ ಮೈತ್ರಿಕೂಟದ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಗೆಲುವು

Mandya Lokasabha Election Result 2024:  ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಬರುವ ಮಂಡ್ಯ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ ಮತ್ತು ಕೃಷ್ಣರಾಜ ಪೇಟೆ ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಮತಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕಣದಲ್ಲಿ ಇರುವುದರಿಂದ ಸಹಜವಾಗಿಯೇ ಅವರು ಗೆಲ್ಲುತ್ತಾರೋ ಇಲ್ಲವೋ ಎನ್ನುವ ತೀವ್ರವಾದ ಕುತೂಹಲವೂ ಮನೆಮಾಡಿದೆ.

Written by - Yashaswini V | Last Updated : Jun 4, 2024, 06:37 PM IST
  • ಈ ಸಲ ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಾವೇ ಅಭ್ಯರ್ಥಿಯಾಗಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿರುವವರು ‘ಸ್ಟಾರ್ ಇನ್ಫೋಟೆಕ್’ ಉದ್ಯಮಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು).
  • ಕುಮಾರಸ್ವಾಮಿ ಮೂಲತಃ ಹಾಸನದವರು ವೆಂಕಟರಮಣೇ ಗೌಡ ಮಂಡ್ಯದ ನಾಗಮಂಗಲ ತಾಲೂಕಿನವರು.
  • ಇದರಿಂದಾಗಿ ಈ ಸಲ ಮಂಡ್ಯದಲ್ಲಿ ‘ಹೊರಗಿನವರು V/s ಮಂಡ್ಯದವರು’ ಎಂಬ ಚರ್ಚೆಯೂ ನಡೆದಿತ್ತು.
Mandya Lok Sabha Election Result: ಸಕ್ಕರೆ ನಾಡಿನಲ್ಲಿ ಮೈತ್ರಿಕೂಟದ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಗೆಲುವು  title=

Mandya Lokasabha Election Result: ಕರ್ನಾಟಕದಲ್ಲಿ ಪ್ರತಿಷ್ಠೆಯ ಕಣವಾಗಿ ಸದ್ದು ಮಾಡಿದ್ದ ಮಂಡ್ಯದಲ್ಲಿ ಜೆ‌ಡಿ‌ಎಸ್ ನಾಯಕ, ಜೆ‌ಡಿ‌ಎಸ್-ಬಿ‌ಜೆ‌ಪಿ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಮಂಡ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ.  ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್‌ಡಿ ಕುಮಾರಸ್ವಾಮಿ ಒಟ್ಟು 851881 ಮತಗಳನ್ನು ಪಡೆದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇ ಗೌಡ 567261 ಮತಗಳನ್ನು ಪಡೆದಿದ್ದಾರೆ. 

ಮಂಡ್ಯ ಲೋಕಸಭಾ ಅಖಾಡದಲ್ಲಿ ಭರ್ಜರಿ ಗೆಲುವಿನ ನಗೆ ಬೀರಿರುವ  ಎಚ್‌ಡಿ ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರ ಸಾಷ್ಟಾಂಗ ನಮನಗಳು. ಈ ಗೆಲುವು ಸಕ್ಕರೆ ನಾಡಿನ ನನ್ನೆಲ್ಲಾ ತಂದೆ ತಾಯಂದಿರು, ಅಕ್ಕ ತಂಗಿಯರು, ಅಣ್ಣ ತಮ್ಮಂದಿರು ಹಾಗೂ ಜೆಡಿಎಸ್ - ಬಿಜೆಪಿ ಕಾರ್ಯಕರ್ತರು ಸೇರಿ ಸಮಸ್ತರಿಗೂ ಸಮರ್ಪಿತ ಎಂದಿದ್ದಾರೆ. 

ಜೆ‌ಡಿ‌ಎಸ್-ಬಿ‌ಜೆ‌ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನನ್ನು ಇಷ್ಟೊಂದು ಭಾರೀ ಅಂತರದಿಂದ ಗೆಲ್ಲಿಸಿದ ಎರಡೂ ಪಕ್ಷಗಳ ಎಲ್ಲಾ ನಾಯಕರು, ಕಾರ್ಯಕರ್ತರಿಗೆ ಈ ಯಶಸ್ಸು ಸಲ್ಲುತ್ತದೆ. ಸಂಘಟಿತ ಹೋರಾಟದಿಂದ ಈ ವಿಜಯ ಸಾಧ್ಯವಾಗಿದೆ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ. ಪ್ರತಿಯೊಬ್ಬರಿಗೂ ನನ್ನ ಕೃತಜ್ಞತಾಪೂರ್ವಕ ಧನ್ಯವಾದಗಳು. ಮಂಡ್ಯ ಲೋಕಸಭೆ ಕ್ಷೇತ್ರದ ಸೇವೆಗೆ ನನ್ನ ಜೀವನ ಮುಡಿಪು ಎಂದು ಕುಮಾರಸ್ವಾಮಿ ಹೇಳಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ (Mandya Loksabha Constituency) ದೇಶದ ಎರಡನೇ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಮತದಾನ ನಡೆದಿದ್ದು, 81.67% ಮತದಾನವಾಗಿತ್ತು. ಇದು ಕರ್ನಾಟಕದ ಮೊದಲ ಹಂತದ ಮತದಾನ ನಡೆದ 14 ಲೋಕಸಭಾ ಕ್ಷೇತ್ರಗಳ ಪೈಕಿಯೇ ಗರಿಷ್ಟ ಮತದಾನ ನಡೆದ ಕ್ಷೇತ್ರವಾಗಿದೆ. ಇಂದು ಮಂಗಳವಾರ (ಜೂನ್ 4) ಬೆಳಗ್ಗೆ 8 ರಿಂದ ಮಂಡ್ಯಲ್ಲಿ ಮತ ಎಣಿಕೆ ನಡೆಯಲಿದೆ. ಸಕ್ಕರೆ ನಾಡು ಎಂದೇ ಹೆಸರುವಾಸಿಯಾಗಿರುವ ಮಂಡ್ಯದಲ್ಲಿ ಫಲಿತಾಂಶ (Mandya Result) ಯಾರ ಪಾಲಿಗೆ ಸಿಹಿಯಾಗಲಿದೆ ಎನ್ನುವುದು ಮಾತ್ರ ಈಗ ಉಳಿದಿರುವ ಪ್ರಶ್ನೆ.

ಈ ಸಲ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದ್ದು ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿತ್ತು. ಹಾಲಿ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಅಭ್ಯರ್ಥಿಯಾಗಲು ಇನ್ನಿಲ್ಲದಂತೆ ಪ್ರಯತ್ನಿಸಿದ್ದರು. ಆದರೆ ಅವರ ಪ್ರಬಲ ಲಾಭಿಯ ನಡುವೆಯೂ ಕುಮಾರಸ್ವಾಮಿ ಕ್ಷೇತ್ರವನ್ನು ಜೆಡಿಎಸ್ ಗೆ ಉಳಿಸಿಕೊಂಡು ತಾವೇ ಕಣಕ್ಕಿಳಿದಿದ್ದರು. ಕುಮಾರಸ್ವಾಮಿ ಅಖಾಡಾದಲ್ಲಿ ಇದ್ದುದರಿಂದ ಹಾಗೂ ಅವರ ಎದುರು ಪ್ರಖ್ಯಾತ ಉದ್ಯಮಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) ಕಾಂಗ್ರೆಸ್ ಹುರಿಯಾಳಾಗಿ ತೀವ್ರ ಪೈಪೋಟಿ ನೀಡಿದ್ದರಿಂದ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಇಡೀ ರಾಜ್ಯದ ಗಮನ ಸೆಳೆದಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದ (Mandya Loksabha Constituency) ಚುನಾವಣೆ 2019ರಲ್ಲೂ ತೀವ್ರ ಕುತೂಹಲ ಮೂಡಿಸಿತ್ತು. ಆಗ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದರು. ಇದೇ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಹುರಿಯಾಳಾಗಿದ್ದರು. ಸುಮಲತಾ ಅಂಬರೀಶ್ ಮಂಡ್ಯದ ಸ್ವಾಭಿಮಾನ ಕಾಪಾಡಲು ಕಣಕ್ಕಿಳಿದಿದ್ದೇನೆ ಎಂದು ಹೇಳಿದ್ದರು. ಅಷ್ಟೇಯಲ್ಲ, ಕಣ್ಣೀರನ್ನೂ ಹಾಕಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದುದರಿಂದ ಇಡೀ ಸರ್ಕಾರವನ್ನೇ ನಿಯೋಜಿಸಿ ಚುನಾವಣೆ ನಡೆಸಿದ್ದರು. ಅಂತಿಮವಾಗಿ ಸುಮಲತಾ ಅಂಬರೀಶ್ 7,03,660 ಮತಗಳನ್ನು ಪಡೆದರೆ ಅವರ ಎದುರಾಳಿ ನಿಖಿಲ್ ಕುಮಾರಸ್ವಾಮಿ 5,77,784 ಮತಗಳನ್ನು ಪಡೆಯಲಷ್ಟೇ ಶಕ್ತರಾದರು. ಸುಮಲತಾ ಅಂಬರೀಶ್ 1,25,876 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ- Chikkaballapura Lok Sabha Election Result: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಗೆಲ್ಲುವವರಾರು

ಈ ಸಲ ಮಂಡ್ಯ ಲೋಕಸಭಾ ಚುನಾವಣಾ ಅಖಾಡದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಾವೇ ಅಭ್ಯರ್ಥಿಯಾಗಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿರುವವರು ‘ಸ್ಟಾರ್ ಇನ್ಫೋಟೆಕ್’ ಉದ್ಯಮಿ ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು) (Venkataramane Gowda- Star Chandru). ಕುಮಾರಸ್ವಾಮಿ ಮೂಲತಃ ಹಾಸನದವರು ವೆಂಕಟರಮಣೇ ಗೌಡ ಮಂಡ್ಯದ ನಾಗಮಂಗಲ ತಾಲೂಕಿನವರು. ಇದರಿಂದಾಗಿ ಈ ಸಲ ಮಂಡ್ಯದಲ್ಲಿ ‘ಹೊರಗಿನವರು V/s ಮಂಡ್ಯದವರು’ ಎಂಬ ಚರ್ಚೆಯೂ ನಡೆದಿತ್ತು. ಅಂತಿಮವಾಗಿ ಮಂಡ್ಯದ ಜನ ಹೊರಗಿನವರನ್ನು ಒಪ್ಪಿಕೊಳ್ಳುತ್ತಾರೋ ಅಥವಾ ಮಂಡ್ಯದ ನಾಯಕನಿಗೆ ಜೈ ಎನ್ನುತ್ತಾರೋ ಕಾದುನೋಡಬೇಕು. 

ಮತದಾನ ಪ್ರಮಾಣ:
ಇಡೀ ರಾಜ್ಯದಲ್ಲಿ ಈ ಸಲದ ಲೋಕಸಭಾ ಚುನಾವಣೆ (Loksabha Election) ಕಡಿಮೆ ಮತದಾನಕ್ಕೆ ಸಾಕ್ಷಿಯಾಗಿತ್ತು. ಆದರೆ ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಬರುವ ಮಂಡ್ಯ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ ಮತ್ತು ಕೃಷ್ಣರಾಜ ಪೇಟೆ ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಬರುವ ಕೃಷ್ಣರಾಜ ನಗರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 81.67 ರಷ್ಟು ಮತದಾನವಾಗಿ ಆಶ್ಚರ್ಯ ಮೂಡಿಸಿತ್ತು. ಮಂಡ್ಯದಲ್ಲಿ ಕಳೆದ ಬಾರಿ ಆಗಿದ್ದ ಮತದಾನದ ಪ್ರಮಾಣ ಕೇವಲ ಶೇಕಡಾ 80.41ರಷ್ಟು. ಈ ಸಲ 1.26ರಷ್ಟು ಹೆಚ್ಚು ಮತ ಚಲಾವಣೆ ಆಗಿದೆ.

ಮತ ಎಣಿಕೆ ಸ್ಥಳದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಪರ ಏಜೆಂಟ್‍ರವರು ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರ ಪ್ರವೇಶಿಸಲು ಈ ಎಲ್ಲರಿಗೂ ಪಾಸ್‍ಗಳನ್ನು ವಿತರಿಸಲಾಗಿದೆ. ಮತ ಎಣೀಕೆ ಕೇಂದ್ರದಲ್ಲಿ ಮತ ಎಣಿಕೆ ಅಧಿಕಾರಿ ಸಿಬ್ಬಂದಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಏಜೆಂಟರಿಗೆ ಮತ ಎಣಿಕೆ ಕೇಂದ್ರದಲ್ಲಿ ಹಣ ಪಾವತಿಸಿ ಉಪಹಾರ, ಕಾಫಿ, ಚಹಾ ಪಡೆಯಲು ಖಾಸಗಿ ತಾತ್ಕಾಲಿಕ ಉಪಹಾರ ಗೃಹ ತೆರೆಯಲಾಗಿದೆ. 

ಇದನ್ನೂ ಓದಿ- Chamarajanagar Lok Sabha Election Result: ಚಾಮರಾಜನಗರದಲ್ಲಿ ಯಾರಿಗೆ ಒಲಿಯಲಿದೆ ವಿಜಯಮಾಲೆ!

ಮತಎಣಿಕೆ ಕೇಂದ್ರದ ಸುತ್ತಾ ನಿಷೇಧಾಜ್ಞೆ 
ಮಂಡ್ಯ ಲೋಕಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಈಗಾಗಲೇ ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂನಲ್ಲಿ ಇಡಲಾಗಿದೆ. ಸಿ.ಆರ್.ಪಿಸಿ 1973ರ ಕಲಂ 144ರ ಪ್ರಕಾರ ಮತಎಣಿಕೆ ಕೇಂದ್ರದ ಸುತ್ತಾ 200 ಮೀ ವ್ಯಾಪ್ತಿಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ. ಸಾರ್ವಜನಿಕರ ಶಾಂತಿ, ನೆಮ್ಮದಿ ಕದಡುವ ಕಾನೂನು ಸುವ್ಯವಸ್ಥೆಗೆ ಭಂಗ ಬರಬಾರದೆಂದು ಚಾಮರಾಜನಗರ ಜಿಲ್ಲೆಯಾದ್ಯಂತ ಮೆರವಣಿಗೆ, ಸಭೆ, ಸಮಾರಂಭ, ಪಟಾಕಿ, ಸಿಡಿಸುವುದು, ಗುಂಪುಗೂಡುವುದು ನಿಷೇಧಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News