ಸಂವಿಧಾನದ ಮೌಲ್ಯಗಳನ್ನು ಸಾರಿದ ವಿವಾಹ

ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದಲ್ಲಿಂದು ಸಂವಿಧಾನದ ಮೌಲ್ಯಗಳನ್ನು ಸಾರುವ ಮದುವೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮಕ್ಕೆ ಭಾವಸಂಗಮ ವಿವಾಹ ವೇದಿಕೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ,ಲಡಾಯಿ ಪ್ರಕಾಶನ,ದಲಿತ ಕಲಾ‌ ಮಂಡಳಿ ಗದಗ ನಂತಹ ಸಂಘಟನೆಗಳು ಸಾಕ್ಷಿಯಾದವು.

Written by - Zee Kannada News Desk | Last Updated : Jun 20, 2021, 07:34 PM IST
  • ಈ ಕಾರ್ಯಕ್ರಮಕ್ಕೆ ಭಾವಸಂಗಮ ವಿವಾಹ ವೇದಿಕೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ,ಲಡಾಯಿ ಪ್ರಕಾಶನ,ದಲಿತ ಕಲಾ‌ ಮಂಡಳಿ ಗದಗ ನಂತಹ ಸಂಘಟನೆಗಳು ಸಾಕ್ಷಿಯಾದವು.
  • ಸಂವಿಧಾನ ಪುಸ್ತಕ ಮತ್ತು ಹಣತೆಯನ್ನು ಸಾಕ್ಷಿಯನ್ನಾಗಿರಿಸಿ ವಧುವವರು ಮದುವೆ ಪ್ರಮಾಣವಚನ ಸ್ವೀಕರಿಸಿದರು.
  • ಬುದ್ಧವಂದನೆ, ಬಸವಾದಿ ಶರಣರ ವಚನ ಪಠಣವು ಸಹ ನಡೆದು, ಸಂವಿಧಾನದ ಪೂರ್ವ ಪೀಠಿಕೆಯನ್ನು ವಧುವರರಾದಿಯಾಗಿ ವಿವಾಹದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಓದಿಸಲಾಯಿತು.
 ಸಂವಿಧಾನದ ಮೌಲ್ಯಗಳನ್ನು ಸಾರಿದ ವಿವಾಹ title=

ಗದಗ: ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದಲ್ಲಿಂದು ಸಂವಿಧಾನದ ಮೌಲ್ಯಗಳನ್ನು ಸಾರುವ ಮದುವೆ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮಕ್ಕೆ ಭಾವಸಂಗಮ ವಿವಾಹ ವೇದಿಕೆ,ಕರ್ನಾಟಕ ದಲಿತ ಸಂಘರ್ಷ ಸಮಿತಿ,ಲಡಾಯಿ ಪ್ರಕಾಶನ,ದಲಿತ ಕಲಾ‌ ಮಂಡಳಿ ಗದಗ ನಂತಹ ಸಂಘಟನೆಗಳು ಸಾಕ್ಷಿಯಾದವು.

ಪ್ರಗತಿಪರ ಹೋರಾಟದಲ್ಲಿ ಸಕ್ರಿಯರಾಗಿರುವ ಶರಣು ಪೂಜಾರ ಅವರ ಸಹೋದರ ಕರಿಯಪ್ಪ ಪೂಜಾರ ಮತ್ತು ಲಕ್ಷ್ಮೀ ಕರಿಯಣ್ಣವರ ಈ ವಧುವರರು ಮೊದಲಿಗೆ ಕುಟುಂಬ ಸದಸ್ಯರೊಂದಿಗೆ ವೇದಿಕೆಯ ಮುಂಭಾಗದಲ್ಲಿ ಅರಿವಿನ ಮತ್ತು ಬೆಳಕಿನ ಸಂಕೇತವಾಗಿರುವ ಹಣತೆಯನ್ನ ಹಚ್ಚುವುದರ ಮೂಲಕ ಮದುವೆಗೆ ಚಾಲನೆ ನೀಡಲಾಯಿತು.

ಬುದ್ಧವಂದನೆ, ಬಸವಾದಿ ಶರಣರ ವಚನ ಪಠಣವು ಸಹ ನಡೆದು, ಸಂವಿಧಾನ (Indian Constitution) ದ ಪೂರ್ವ ಪೀಠಿಕೆಯನ್ನು  ವಧುವರರಾದಿಯಾಗಿ ವಿವಾಹದಲ್ಲಿ ಪಾಲ್ಗೊಂಡಿರುವ ಎಲ್ಲರಿಗೂ ಓದಿಸಲಾಯಿತು.ಈ ಓದುವಿಕೆಯನ್ನು ಹಿರಿಯ ದಲಿತ ನಾಯಕರಾದ ಮಾರ್ತಾಂಡಪ್ಪ ಹಾದಿಮನಿ ನಡೆಸಿಕೊಟ್ಟರು.ವೇದಿಕೆಯಲ್ಲಿ ವಧುವರರು ಸಮಾನತೆಯ ಸಂಕೇತವಾಗಿರುವ ನೀಲಿ ಶಾಲನ್ನು ಪರಸ್ಪರ ವಿನಿಮಯ ಮಾಡಿಕೊಂಡು ವೇದಿಕೆಯಲ್ಲಿದ್ದ ಅತಿಥಿಗಳಿಗೂ ಹಾಕಿದರು.

ಇದನ್ನೂ ಓದಿ: ಜನವರಿ 26 ನ್ನು ಸಂವಿಧಾನ ಸಂರಕ್ಷಣಾ ದಿನವೆಂದು ಘೋಷಿಸಲಿರುವ ಕ್ಯಾಥೋಲಿಕ್ ಚರ್ಚ್

ಸಂವಿಧಾನ ಪುಸ್ತಕ ಮತ್ತು ಹಣತೆಯನ್ನು ಸಾಕ್ಷಿಯನ್ನಾಗಿರಿಸಿ ವಧುವವರು ಮದುವೆ ಪ್ರಮಾಣವಚನ ಸ್ವೀಕರಿಸಿದರು.ಪ್ರಮಾಣ ವಚನವನ್ನು ಬಸವಾನುಯಾಯಿ, ಲಿಂಗಾಯತ ಮಹಾಸಭಾದ ಮುಖಂಡ ಶೇಖಣ್ಣ ಕವಳಿಕಾಯಿ ಭೋಧನೆ ಮಾಡಿದರು.ಹಿರಿಯರಾದ ಬಿ.ಎ.ಕೆಂಚರೆಡ್ಡಿ, ಅಶೋಕ ಬರಗುಂಡಿ,ರವೀಂದ್ರ ಹೊನವಾಡ ಅವರು ವಧುವರರಿಗೆ  ಶುಭಾಶಯ ನುಡಿಗಳನ್ನಾಡಿದರು. ಬಸವರಾಜ ಸೂಳಿಭಾವಿಯವರು ಮದುವೆಯ ಸರಳತೆ ಮತ್ತು ವಿಧಾನಗಳನ್ನ ತಿಳಿಸಿದರು. ದಲಿತ ಕಲಾಮಂಡಳಿಯಿಂದ ಹಾಡುಗಳು ಮತ್ತು ಕಾರ್ಯಕ್ರಮ ನಿರ್ವಹಣೆ ನಡೆಯಿತು.

ಇದನ್ನೂ ಓದಿ: ಜ.26 ರಿಂದ ಮಹಾರಾಷ್ಟ್ರದ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದು ಕಡ್ಡಾಯ

ಬುದ್ಧ,ಬಸವ,ಡಾ.ಅಂಬೇಡ್ಕರ್ ತತ್ವಾದರ್ಶದ ಸಮಾರಂಭದಲ್ಲಿ ಮರುಳ ಸಿದ್ಧೇಶ್ವರ ಸ್ವಾಮಿ,ಪ್ರಕಾಶ ಹೊಸಳ್ಳಿ,ಎಚ್.ಕೆ.ತಾಳಿ,ಶಿವಪ್ಪ ಮಾದರ,ರೇಣವ್ವ ಹಾದಿಮನಿ,ನಿರ್ಮಲಾ ಕರಿಯಣ್ಣವರ,ಹಿರಿಯಪ್ಪ ಹಲಗಿ,ಶರೀಫ ಬಿಳಿಯಲಿ,ರಾಮಚಂದ್ರ ಹಂಸನೂರ,ಮುತ್ತು ಬಿಳಿಯಲಿ,ಗುರುಲಿಂಗಯ್ಯ ಓದಸುಮಠ,ಕೆ.ಎಸ್.ಸಾಲಿಮಠ,ಬಸವರಾಜ ಕೊಟಗಿ,ಮಂಜು ಹೂಗಾರ,ವೀರಪ್ಪ ತೆಗ್ಗಿಮನಿ,ಯಶೋಧಾ ಪೂಜಾರ,ಪರಶು ಹಾಗೂ ಅನಿಲ ಕಾಳೆ,ರಮೇಶ ಕೋಳೂರ ಮತ್ತೀತರರು ಉಪಸ್ಥಿತರಿದ್ದರು.

-ರವೀಂದ್ರ ಹೊನವಾಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News