ಕಾವೇರಿ ಆರ್ಭಟ..! ಮೆಟ್ಟೂರು ಜಲಾಶಯ ಭರ್ತಿಗೆ ಅರ್ಧ ಅಡಿ ಬಾಕಿ

ಕಳೆದ 3-4 ವರ್ಷಗಳಿಂದಲೂ ಮೆಟ್ಟೂರು ಜಲಾಶಯ ಭರ್ತಿಯಾಗುತ್ತಿದ್ದು, 2020ರಲ್ಲಿ 6 ತಿಂಗಳ ಅವಧಿಯಲ್ಲಿ 2 ಬಾರಿ ತುಂಬಿ ತುಳುಕಿತ್ತು.

Written by - Zee Kannada News Desk | Last Updated : Jul 16, 2022, 11:54 AM IST
  • KRS ಮತ್ತು ಕಬಿನಿ ಹೊರಹರಿವಿನಿಂದ ಕಾವೇರಿ ಭೋರ್ಗರೆದು ಹರಿಯುತ್ತಿದೆ
  • ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿಯಿದೆ
  • ಹೊಗೆನಕಲ್ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಸೇರುತ್ತಿದೆ
ಕಾವೇರಿ ಆರ್ಭಟ..! ಮೆಟ್ಟೂರು ಜಲಾಶಯ ಭರ್ತಿಗೆ ಅರ್ಧ ಅಡಿ ಬಾಕಿ title=
ಮೆಟ್ಟೂರು ಜಲಾಶಯ ಭರ್ತಿ

ಚಾಮರಾಜನಗರ: KRS ಮತ್ತು ಕಬಿನಿ ಹೊರಹರಿವಿನಿಂದ ಕಾವೇರಿ ಭೋರ್ಗರೆದು ಹರಿಯುತ್ತಿದ್ದು, ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿಗೆ ಕೇವಲ ಅರ್ಧ ಅಡಿ ಬಾಕಿ ಇದೆ. ಈ ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ನೀರು ಹೊರಬಿಡಲು ಅಲ್ಲಿನ ಜಿಲ್ಲಾಡಳಿತವು ಸಜ್ಜಾಗಿದೆ.

120 ಅಡಿ ಗರಿಷ್ಠ ಮಟ್ಟ ಹೊಂದಿರುವ ಮೆಟ್ಟೂರು ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ 115 ಅಡಿ ನೀರಿದ್ದರೇ, ರಾತ್ರಿ ವೇಳೆಗೆ ಭರ್ತಿ ಸನಿಹ ತಲುಪಿದೆ. 2 ದಿನಗಳ ಅವಧಿಯಲ್ಲೇ 10 ಅಡಿಗೂ ಹೆಚ್ಚು ನೀರು ಸಂಗ್ರಹಗೊಂಡಿದ್ದು, ಹೊಗೆನಕಲ್ ಮೂಲಕ 1.20 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಸೇರುತ್ತಿದೆ.

ಇದನ್ನೂ ಓದಿ: ‘ಸಿದ್ದರಾಮೋತ್ಸವ’ದ ಆರಂಭವೇ ಹೀಗಾದರೇ, ಅಂತ್ಯ ಹೇಗಿರಬಹುದು?: ಬಿಜೆಪಿ

ಅಣೆಕಟ್ಟೆಯ ಒಳಹರಿವು 1.20 ಲಕ್ಷ ಕ್ಯೂಸೆಕ್ ಇದ್ದು, ಹೊರಹರಿವು 20 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಕಳೆದ 3-4 ವರ್ಷಗಳಿಂದಲೂ ಮೆಟ್ಟೂರು ಜಲಾಶಯ ಭರ್ತಿಯಾಗುತ್ತಿದ್ದು, 2020ರಲ್ಲಿ 6 ತಿಂಗಳ ಅವಧಿಯಲ್ಲಿ 2 ಬಾರಿ ತುಂಬಿ ತುಳುಕಿತ್ತು.

ತಮಿಳುನಾಡಿನ ಸೇಲಂ ಸೇರಿದಂತೆ ಸುತ್ತಮುತ್ತಲಿನ 12 ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಮೆಟ್ಟೂರು ಜಲಾಶಯ ಆಧಾರವಾಗಿದ್ದು, 16.4 ಲಕ್ಷ ಎಕರೆ ಪ್ರದೇಶದ ಕೃಷಿಗೆ ನೆರವಾಗಿದೆ.

ಇದನ್ನೂ ಓದಿಗೃಹಸಚಿವರಿಂದ ಪೊಲೀಸ್ ಇಲಾಖೆ ನೈತಿಕ ಸ್ಥೈರ್ಯ ಕಳೆದುಕೊಂಡಿದೆ: ಸಿದ್ದರಾಮಯ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News