ಹೆಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಂತೆ ಆಗಾಗ ಬಣ್ಣಬದಲಾಯಿಸುತ್ತಾರೆ: ಬಿ.ಸಿ. ಪಾಟೀಲ್

ಕುಮಾರಸ್ವಾಮಿ ಒಂದು ವರ್ಷ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಸಂದರ್ಭದಲ್ಲಿ ಆರೋಪಿಸುತ್ತಿರುವುದೇಕೆ?

Last Updated : Sep 8, 2020, 11:17 AM IST
  • ಕುಮಾರಸ್ವಾಮಿ ಒಂದು ವರ್ಷ ಸುಮ್ಮನಿದ್ದಿದ್ದು ಏಕೆ?
  • ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಸಂದರ್ಭದಲ್ಲಿ ಆರೋಪಿಸುತ್ತಿರುವುದೇಕೆ?
  • ಮೈತ್ರಿ ಸರ್ಕಾರದ ನಿಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ?
ಹೆಚ್.ಡಿ.ಕುಮಾರಸ್ವಾಮಿ ಊಸರವಳ್ಳಿಯಂತೆ ಆಗಾಗ ಬಣ್ಣಬದಲಾಯಿಸುತ್ತಾರೆ: ಬಿ.ಸಿ. ಪಾಟೀಲ್ title=

ಮಂಡ್ಯ: ಡ್ರಗ್ಸ್ ಮಾಫಿಯಾ ಹಣದಿಂದಲೇ ಮೈತ್ರಿ ಸರ್ಕಾರ ಪತನವಾಯಿತೆಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ (BC Patil) ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಒಂದು ವರ್ಷ ಸುಮ್ಮನಿದ್ದಿದ್ದು ಏಕೆ? ಡ್ರಗ್ಸ್ ವಿಚಾರ ಸುದ್ದಿಯಲ್ಲಿರುವ ಸಂದರ್ಭದಲ್ಲಿ ಆರೋಪಿಸುತ್ತಿರುವುದೇಕೆ? ಮೈತ್ರಿ ಸರ್ಕಾರದ ನಿಶೆಯಿಂದ ಹೊರಬರಲು ಕುಮಾರಸ್ವಾಮಿಗೆ ಒಂದು ವರ್ಷ ಬೇಕಾಯಿತೇ? ಮೈತ್ರಿ ಸರ್ಕಾರ ಅಸ್ಥಿರಗೊಂಡಾಗ ಏಕೆ ಕುಮಾರಸ್ವಾಮಿ ಹೇಳಲಿಲ್ಲ. ಕುಮಾರಸ್ವಾಮಿ ಆಗಾಗ ಊಸರವಳ್ಳಿಯಂತೆ ಬಣ್ಣಬದಲಾಯಿಸುತ್ತಿರುತ್ತಾರೆ. ಮುಖ್ಯಮಂತ್ರಿಯಾಗಿದ್ದವರು ಅವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೈಸೂರಿನಲ್ಲಿ ಪ್ರಗತಿಪರಿಶೀಲನಾ ಸಭೆಗೆ ತೆರಳುವ ಮುನ್ನ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್, ವಿಪಕ್ಷಗಳ ಊಹಾಪೋಹದ ಆರೋಪಗಳಿಗೆಲ್ಲ ಉತ್ತರಿಸಬೇಕಾಗಿಲ್ಲ. ಡ್ರಗ್ಸ್ ದಂಧೆಯಲ್ಲಿ ಪಾಲ್ಗೊಂಡವರು ಯಾರೇ ಇರಲೀ ಸರ್ಕಾರ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿದೆ ಎಂದರು. ತಾವು ಮೈಸೂರಿಗೆ ಭೇಟಿ ನೀಡುತ್ತಿದ್ದು, ಅಲ್ಲಿನ ಕೃಷಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದಾಗಿ ಹೇಳಿದರು.

ರಸಗೊಬ್ಬರವಾಗಲಿ, ಯೂರಿಯಾದ ಕೊರತೆಯಾಗಲಿ ಇಲ್ಲ. ಕೆಲವೆಡೆ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಅಂತವರ ವಿರುದ್ಧ ಕ್ರಮವನ್ನೂ ಜರುಗಿಸಿ ಪರವಾನಿಗೆ ರದ್ದುಮಾಡಲಾಗುತ್ತಿದೆ. ರೈತರಿಗಾಗಲಿ ಕೃಷಿಚಟುವಟಿಕೆಗಳಿಗಾಗಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚು ಬಿತ್ತನೆಯಾಗಿದೆ. ಮಂಡ್ಯ ಸೇರಿದಂತೆ ಸುತ್ತಮುತ್ತಲ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆಗೂ ಪ್ರಗತಿಪರಿಶೀಲನಾ ಸಭೆ ನಡೆಸಿ ಮಾಹಿತಿ ಪಡೆಯಲಾಗುವುದು ಎಂದು ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.

ಡ್ರಗ್ಸ್ ಧಂಧೆಯಿಂದ ಸಮ್ಮಿಶ್ರ ಸರ್ಕಾರ ಕೆಡವಿದ ವಿಚಾರ: ಮಾಜಿ ಸಿಎಂ ಎಚ್‌ಡಿಕೆಗೆ ಸಚಿವ ಸುಧಾಕರ್ ಸವಾಲು

ಮೈಸೂರಿನಲ್ಲಿ ಮಾತನಾಡಿದ ಅವರು, ಕೃಷಿಕನಾಗಿ ಅನುಭವಹೊಂದಿರುವ ತಮಗೆ ರೈತರೊಂದಿಗೆ ಇನ್ನಷ್ಟು ಬೆರೆತು ಅವರೊಂದಿಗಿದ್ದಾಗ ಕೃಷಿ ಅಭಿವೃದ್ಧಿಗೆ ಹೊಸಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ರೈತರಿಗೆ (Farmers) ಆತ್ಮವಿಶ್ವಾಸ ಮೂಡಿಸುವುದೇ ತಮ್ಮ ರೈತ ವಾಸ್ತವ್ಯದ ಉದ್ದೇಶ ಎಂದರು‌.

ರೈತ ವಾಸ್ತವ್ಯ ಈ ಹಿಂದೆಯೇ ಮಾಡಬೇಕಾಗಿತ್ತಾದರೂ COVID-19 ಮತ್ತು ಲಾಕ್ಡೌನ್‌ನಿಂದಾಗಿ ಅದು ಸಾಧ್ಯವಾಗಲಿಲ್ಲ. ಆಗ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುವತ್ತು ಜಿಲ್ಲೆಗಳಲ್ಲಿ ಮುವತ್ತು ದಿನಗಳ ಕಾಲ ಪ್ರವಾಸ ಕೈಗೊಂಡು ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗೆ ತೊಂದರೆ ರೀತಿಯ ತೊಂದರೆಯಾಗದಂತೆ ಲಾಕ್ಡೌನ್‌ನಿಂದ ವಿನಾಯಿತಿ ನೀಡಲಾಯಿತು. ಪರಿಣಾಮ ಈ ಬಾರಿ COVID-19 ಸಂಕಷ್ಟದಲ್ಲಿಯೂ ಕೃಷಿ ಚಟುವಟಿಕೆ ಸರಾಗವಾಗಿ ನಡೆದು ಬಿತ್ತನೆ ಹೆಚ್ಚುವಂತಾಗಿದೆ. ಕೃಷಿಯತ್ತ ಹೆಚ್ಚು ಗಮನ ಕೇಂದ್ರೀಕೃತವಾಗಿದೆ. ಈಗ ಕೊರೊನಾ ಸೋಂಕು ಕಡಿಮೆಯಾದ ಬಳಿಕ ರೈತ ವಾಸ್ತವ್ಯಕ್ಕೆ ಮುಂದಾಗಿದ್ದು, ರೈತರೊಂದಿಗಿನ ವಾಸ್ತವ್ಯದ ಅನುಭವ ಇನ್ನಷ್ಟು ಹೊಸಹೆಜ್ಜೆಗಳಿಗೆ ದಿಕ್ಸೂಚಿಯಾಗಲಿದೆ ಎಂದರು.

ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದ ಬಿಜೆಪಿ ಕಾರ್ಯಕರ್ತ: ಬಿಜೆಪಿ ಕುಮ್ಮಕ್ಕಿನಿಂದಲೇ ನಡೆಯುತ್ತಿದೆಯಾ ಡ್ರಗ್ಸ್ ಧಂಧೆ?

ತಮ್ಮೊಂದಿಗೆ ಕೃಷಿ ಅಧಿಕಾರಿಗಳೂ ಸಹ ವಾಸ್ತವ್ಯದಲ್ಲಿ ಇರಲಿದ್ದು, ಸಾಧ್ಯವಾದಷ್ಟು ಸ್ಥಳದಲ್ಲಿಯೇ ಬಗೆಹರಿಸಬಹುದಾದ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದು ಬಳಿಕವೂ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಅಧಿವೇಶನದಲ್ಲಿ ವಿಪಕ್ಷಗಳು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ತಾವು ಸೇರಿದಂತೆ ಸರ್ಕಾರ ಸಿದ್ಧವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡ್ರಗ್ಸ್ (Drugs) ಹಾವಳಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿನಿಮಾ ಕ್ಷೇತ್ರವೆನ್ನುವುದು ಗಾಜಿನಮನೆಯಿದ್ದಂತೆ. ನಟನಟಿಯರಿಗೆ ಅನುಯಾಯಿಗಳು ಹೆಚ್ಚುಮಂದಿ ಇರುತ್ತಾರೆ. ತಾವು ಸಹ ಸಿನಿಮಾರಂಗದಲ್ಲಿಯೇ ಇದ್ದವರು. ತಮ್ಮ ಕಾಲದಲ್ಲಿ ಡ್ರಗ್ಸ್ ಎಂಬುದು ಸಿನಿರಂಗದಲ್ಲಿ ಇರಲಿಲ್ಲ. ಆದರೀಗ ಆರೋಪ ಕೇಳಿಬಂದಿದೆ. ಯಾರೋ ಮಾಡಿದ ತಪ್ಪಿಗೆ ಇಡೀ ಸಿನಿಮಾರಂಗವನ್ನು ಉದ್ದೇಶಿಸುವುದು ಸರಿಯಲ್ಲ. ರಾಜಕೀಯದವರಾಗಲೀ ಸಿನಿಮಾದವರಾಗಲೀ ಅಥವಾ ಇನ್ಯಾರೇ ಆಗಲೀ, ತಪ್ಪು ಮಾಡಿದರೆ ಅದು ತಪ್ಪೇ. ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಬಿ.ಸಿ. ಪಾಟೀಲ್ ಪುನರುಚ್ಚರಿಸಿದರು.

Trending News