Murugesh Nirani : 'ಕೊಟ್ಟ ಕಾಣಿಕೆಯನ್ನು ಹಿಂಪಡೆಯುವಂತಹ ಸಣ್ಣ ಮನುಷ್ಯ ನಾನಲ್ಲ'

ನಮ್ಮಂಥವರು  ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು ಮಠದ ಮೇಲಿನ ಗೌರವದಿಂದ ಕಾಣಿಕೆಗಳನ್ನು ಭಕ್ತಿ ರೂಪದಲ್ಲಿ ಕೊಟ್ಟಿದ್ದೇನೆ. ಇದು ನನಗೆ  ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಭಕ್ತಿಭಾವದಿಂದ ಕೊಟ್ಟ ಕಾಣಿಕೆಯನ್ನು ಪ್ರಚಾರಕ್ಕಾಗಿ ಪಡೆಯುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದರು. 

Written by - Channabasava A Kashinakunti | Last Updated : Feb 4, 2022, 01:34 PM IST
  • ಕಾಣಿಕೆ ಹಿಂಪಡೆಯುವಷ್ಟು ಸಣ್ಣ ಮನುಷ್ಯ ನಾನಲ್ಲ.
  • ಭಕ್ತರ ಆಶಯದಂತೆ 3ನೇ ಪೀಠ ರಚನೆಯಾದರೆ ತಪ್ಪೇನಿಲ್ಲ.
  • ಸಮುದಾಯದ ಅಭಿಪ್ರಾಯವನ್ನು ಗೌರವವಿಸುವುದು ನನ್ನ ಕರ್ತವ್ಯ.
Murugesh Nirani : 'ಕೊಟ್ಟ ಕಾಣಿಕೆಯನ್ನು ಹಿಂಪಡೆಯುವಂತಹ ಸಣ್ಣ ಮನುಷ್ಯ ನಾನಲ್ಲ' title=

ಮೈಸೂರು : ಕೊಟ್ಟ ವ್ಯಕ್ತಿಯೂ ಶಾಶ್ವತವಲ್ಲ, ಪೀಠ ಮಾತ್ರ ಶಾಶ್ವತ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ. 

ನಗರದಲ್ಲಿ ಕೂಡಲಸಂಗಮ ಮಠದ ಶ್ರೀಗಳು ಮಠಕ್ಕೆ ನೀಡಿರುವ ದಾನದ ಕಾಣಿಕೆಗಳನ್ನು ಹಿಂತಿರುಗಿಸಲಾಗುವುದು ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ನಿರಾಣಿ(Murugesh Nirani), ನಾನು ಪೀಠಕ್ಕೆ ಕೊಟ್ಟಿದ್ದೇನೆ ಹೊರತು ಯಾವುದೇ ಒಬ್ಬ ವ್ಯಕ್ತಿಗೆ ಕೊಟ್ಟಿಲ್ಲ. ಕೊಟ್ಟಿರುವ ವ್ಯಕ್ತಿಯೂ ಶಾಶ್ವತವಾಗಿರುವುದಿಲ್ಲ, ಆದರೆ ಮಠ ಮಾತ್ರ ಶಾಶ್ವತವಾಗಿರುತ್ತದೆ ಎಂದು ನಿರಾಣಿ ವ್ಯಾಖ್ಯಾನಿಸಿದರು. 

ಇದನ್ನೂ ಓದಿ : Arecanut Price: ಇಂದಿನ ರಾಶಿ ಅಡಿಕೆ ಧಾರಣೆ ಎಷ್ಟಿದೆ ತಿಳಿದುಕೊಳ್ಳಿರಿ

ನಮ್ಮಂಥವರು  ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು ಮಠದ ಮೇಲಿನ ಗೌರವದಿಂದ ಕಾಣಿಕೆಗಳನ್ನು ಭಕ್ತಿ ರೂಪದಲ್ಲಿ ಕೊಟ್ಟಿದ್ದೇನೆ. ಇದು ನನಗೆ  ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಭಕ್ತಿಭಾವದಿಂದ ಕೊಟ್ಟ ಕಾಣಿಕೆಯನ್ನು ಪ್ರಚಾರಕ್ಕಾಗಿ ಪಡೆಯುವ ವ್ಯಕ್ತಿ ನಾನಲ್ಲ ಎಂದು ಸ್ಪಷ್ಟಪಡಿಸಿದರು. 

ನಮ್ಮ ಇಡೀ ಕುಟುಂಬವೇ ಸಮಾಜದಲ್ಲಿರುವ ಎಲ್ಲ ಮಠಗಳನ್ನು(Mutts) ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದೇವೆ. ಎಂಥ ಸಂದರ್ಭದಲ್ಲೂ ಕೂಡ ಯಾರನ್ನು ಅಗೌರವದಿಂದ ಕಂಡಿಲ್ಲ ಎಂದು ಸ್ಪಷ್ಟಪಡಿಸಿದರು. 

ಮಠಗಳಿಗೆ ಕೊಟ್ಟ ಕಾಣಿಕೆಯನ್ನು ಹಿಂಪಡೆಯುವಂತಹ ಸಣ್ಣ ಮನುಷ್ಯ ನಾನಲ್ಲ. ಅಂತಹ ಕೆಳಮಟ್ಟಕ್ಕೂ ನಾನು ಹೋಗುವುದಿಲ್ಲ. ಶ್ರೀಗಳು ಯಾಕೆ ಈ ರೀತಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು. 

ಕಳೆದ ಹಲವಾರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿರುವ ನಾವು ನಾಡಿನ ಎಲ್ಲ ಮಠಗಳನ್ನು ಗೌರವದಿಂದ ನಡೆದುಕೊಂಡು ಬಂದಿದ್ದೇವೆ. ನನ್ನ ಕುಟುಂಬದ ಸದಸ್ಯರು ಕೂಡ ಇದೇ ಭಾವನೆಯನ್ನು ಇಟ್ಟುಕೊಂಡಿದ್ದಾರೆ ಎಂದರು. 

ಇದನ್ನೂ ಓದಿ : Basavaraj Bommai Cabinet Reshuffel: ಸಿಎಂ ದೆಹಲಿ ಪ್ರವಾಸ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಸೇರಲು ಲಾಬಿ ಶುರು!

ಕೂಡಲಸಂಗಮ ಮಠದ ಶ್ರೀಗಳಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ(Jayamruthyunjaya Swamiji) ಬಗ್ಗೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವವಿದೆ. ಶ್ರೀಗಳು ನಮ್ಮ ಸಮುದಾಯದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತಿದ್ದೇವೆ. ಅವರಿಗೆ ನನ್ನ ಬಗ್ಗೆ ತಪ್ಪು ಸಂದೇಶ ಮೂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಪಂಚಮಶಾಲಿ ಸಮುದಾಯವನ್ನು ಜಯ ಮೃತ್ಯುಂಜಯ ಸ್ವಾಮೀಜಿಯವರು ಸಂಘಟಿಸಲು ಎಷ್ಟು ಹೋರಾಟ ನಡೆಸುತ್ತಿದ್ದಾರೆ ಎಂಬ ಅರಿವು ನನಗಿದೆ. ಅವರನ್ನು ಎಂಥ ಸಂದರ್ಭದಲ್ಲೂ ಕೂಡ ಅಗೌರವದಿಂದ ಕಂಡಿಲ್ಲ. ಅವರ ನಿಸ್ವಾರ್ಥ ಸೇವೆ ಬಗ್ಗೆ ನನಗೆ   ಈಗಲೂ ಹೆಮ್ಮೆಯಿದೆ. ಆದರೆ ಕೆಲವರಿಂದ ತಪ್ಪು ಸಂದೇಶ ಮೂಡಿದೆ ಎಂದರು. 

ಒಂದು ವೇಳೆ ನಾನು ಏನಾದರೂ ತಪ್ಪು ಮಾಡಿದರೆ ಜಯಮೃತ್ಯುಂಜಯ ಸ್ವಾಮೀಜಿಗಳು ನನಗೆ ಶಿಕ್ಷೆ ನೀಡಲಿ. ಖಂಡಿತವಾಗಿ ನಾನು ಒಬ್ಬ ಭಕ್ತನಾಗಿ ಶ್ರದ್ದೆಯಿಂದ ಸ್ವೀಕರಿಸುತ್ತೇನೆ. ಆದರೆ ನನ್ನ ಬಗ್ಗೆ ಅನಗತ್ಯವಾಗಿ ತಪ್ಪು ಸಂದೇಶವನ್ನು ನೀಡಬೇಡಿ ಎಂದು ಮನವಿ ಮಾಡಿದರು. 

ಪೀಠ ರಚನೆಯಾದರೆ ತಪ್ಪೇನು?:

ಪಂಚಮಸಾಲಿ ಸಮುದಾಯದ ಮೂರನೇ ಪೀಠ ರಚನೆಯಾದರೆ ತಪ್ಪೇನೂ ಇಲ್ಲ. ನನಗೂ ಈ ಮಠಕ್ಕೂ ಯಾವುದೇ ಸಂಬಂಧವೂ ಇಲ್ಲ. ನಾನು ಪೀಠ ರಚನೆ ಮಾಡುವಂತೆ ಎಲ್ಲಿಯೂ ಹೋಗಿಲ್ಲ. 
ಪ್ರಸ್ತುತ ನಾನು ಜವಾಬ್ದಾರಿಯುತ ಸಚಿವನಾಗಿ ಇಲಾಖೆ ಕಡೆ ಗಮನಹರಿಸಿದ್ದೇನೆ ಎಂದು ತಮ್ಮ ಮೇಲಿನ ಆರೋಪಗಳಿಗೆಸ ಸ್ಪಷ್ಟನೆ ನೀಡಿದರು.

ಮೂರನೇ ಪೀಠವನ್ನು ಭಕ್ತರು ಸೇರಿಕೊಂಡು ರಚನೆ ಮಾಡುತ್ತಿದ್ದಾರೆ. ಇದಕ್ಕೆ ಪದಾಕಾರಿಗಳು ಬೆಂಬಲ ಸೂಚಿಸಿದ್ದಾರೆ. ನಾನು ಯಾರಿಗೂ ಮಠ ರಚನೆ ಮಾಡುವಂತೆ ಬೆಂಬಲ ಕೊಡುತ್ತಿಲ್ಲ. ಭಕ್ತರ ಇಚ್ಛೆಯಂತೆ ಮಠ ಸ್ಥಾಪನೆಯದರೆ ತಪ್ಪೇನು ಎಂದು ನಿರಾಣಿ ಪ್ರಶ್ನಿಸಿದರು. 

ಇದನ್ನೂ ಓದಿ : ಅತಿಥಿ ಉಪನ್ಯಾಸಕರ ಬಿಕ್ಕಟ್ಟು ಪರಿಹರಿಸಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಪಂಚಮಸಾ ಸಮುದಾಯಕ್ಕೆ ಪ್ರಸ್ತುತ ಎರಡು ಮಠಗಳಿವೆ. ಒಂದು ಕೂಡಲಸಂಗಮ(Kudalasangama)ದಲ್ಲಿದ್ದರೆ ಮತ್ತೊಂದು ಹರಿಹರ ಪೀಠದಲ್ಲಿದೆ. ಭಕ್ತರು ಹೋಗಿಬರಲು ಮತ್ತೊಂದು ಮಠದ  ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ. ಬೇಡ ಎನ್ನಲು ನಾನ್ಯಾರು ಎಂದು ಪ್ರಶ್ನಿಸಿದರು. 

ಮೂರನೇ ಪೀಠ ರಚನೆಗೆ ಹರಿಹರ ಪೀಠದ ಶ್ರೀ ವಚನಾನಂದ ಶ್ರೀಗಳು ಕೂಡ ಬೆಂಬಲ ಸೂಚಿಸಿದ್ದಾರೆ. ಭಕ್ತರಿಗೆ ಶ್ರೀಗಳು ಹತ್ತಿರದಿಂದ ಸಿಗುವುದಾದರೆ ತಪ್ಪೇನಿಲ್ಲ. ಮದುವೆ ಸೇರಿದಂತೆ ಅನೇಕ ಸಮಾರಂಭಗಳಿಗೆ ಆಶೀರ್ವದಿಸಲು ಹೋಗಬೇಕಾಗುತ್ತದೆ. ಅವರ ಅಶಯದಂತೆ ರಚನೆಯಾದರೆ ಇದಕ್ಕೆ ರಾಜಕೀಯ ಬಣ್ಣ ಬೆರೆಸುವುದು ಬೇಡ ಎಂದರು. 

ಎಲ್ಲರ ಆಶಯದಂತೆ ಒಬ್ಬ ಭಕ್ತನಾಗಿ ನಾನು ನಡೆದುಕೊಳ್ಳಬೇಕು. ಸಮುದಾಯದ ಇಚ್ಛೆಯನ್ನು ನಾನು ಕೂಡ ಗೌರವಿಸಬೇಕು. ಅದೇ ಕಾರಣಕ್ಕಾಗಿ ನನ್ನ ರಾಜಕೀಯಕ್ಕೆ ಅಡ್ಡಗಾಲು ಹಾಕುವುದು ಸರಿಯಲ್ಲ ಎಂದು ವಿಷಾದಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News