ಸಿಎಂ ಎರಡು ರಾಜಧಾನಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ

ರಾಜ್ಯದಲ್ಲಿ ಎರಡು ಮೂರು ರಾಜಧಾನಿ ಮಾಡುವುದರಿಂದ ರಾಜ್ಯದ ಸಂಪೂರ್ಣ ಅಭಿವೃದ್ಧಿ ಅಸಾಧ್ಯ. ಇಡೀ ರಾಜ್ಯದ ಸಮಾನ ಅಭಿವೃದ್ಧಿ ಆದ ಮೇಲೆ ಎರಡನೇ ರಾಜ್ಯದ ಚಿಂತನೆ ನಡೆಸಬೇಕು ಎಂದು ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

Last Updated : Aug 1, 2018, 06:38 PM IST
ಸಿಎಂ ಎರಡು ರಾಜಧಾನಿ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ title=

ಬೆಂಗಳೂರು: ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವುದರಿಂದ ಇಡೀ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಬೆಂಗಳೂರಿನಲ್ಲಿ ಮಾತನಾಡುತ್ತ ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡಲು ಚಿಂತನೆ ನಡೆಸಿರುವುದಾಗಿ ಹೇಳಿಕೆ ನೀಡಿದ್ದರು. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಎರಡು ಮೂರು ರಾಜಧಾನಿ ಮಾಡುವುದರಿಂದ ರಾಜ್ಯದ ಸಂಪೂರ್ಣ ಅಭಿವೃದ್ಧಿ ಅಸಾಧ್ಯ. ಇಡೀ ರಾಜ್ಯದ ಸಮಾನ ಅಭಿವೃದ್ಧಿ ಆದ ಮೇಲೆ ಎರಡನೇ ರಾಜ್ಯದ ಚಿಂತನೆ ನಡೆಸಬೇಕು. ಆದರೆ ಇನ್ನೂ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯನ್ನೇ ಕಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವ ಆಧಾರದ ಮೇಲೆ ಬೆಳಗಾವಿಯನ್ನು 2ನೇ ರಾಜಧಾನಿ ಮಾಡಲು ಮುಖ್ಯಮಂತ್ರಿಗಳು ಆಲೋಚಿಸುತ್ತಿದ್ದಾರೋ ತಿಳಿದಿಲ್ಲ ಎಂದು ಹೇಳಿದ್ದಾರೆ.

ಅಧಿಕೃತ ಎರಡನೇ ರಾಜಧಾನಿ ಘೋಷಣೆಗೆ ಸಿಎಂ ಕುಮಾರಸ್ವಾಮಿ ಸಿದ್ಧತೆ!

ಮುಂದುವರೆದು ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಖಂಡ ಕರ್ನಾಟಕ ಏಕೀಕರಣಕ್ಕಾಗಿ ಸಾಕಷ್ಟು ಹೋರಾಟ ಮಾಡಲಾಗಿತ್ತು. ಅದೆಷ್ಟೋ ಮಂದಿ ಈ ಹೋರಾಟದಲ್ಲಿ ಜೀವವನ್ನೇ ತೆತ್ತಿದ್ದಾರೆ. ಆದರೆ ಇದೀಗ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತಿರುವವರು ಕರ್ನಾಟಕ ಏಕೀಕರಣದ ಇತಿಹಾಸ ತಿಳಿದುಕೊಳ್ಳಲಿ. ರಾಜಕೀಯ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯ ಹೋರಾಟ ಮಾಡುವುದನ್ನು ಬಿಟ್ಟು, ಆ ಭಾಗದ ಅಭಿವೃದ್ಧಿಗಾಗಿ ಹೋರಾಟ ಮಾಡಲಿ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿ ನನ್ನ ಜವಾಬ್ದಾರಿ: ಸಿಎಂ ಕುಮಾರಸ್ವಾಮಿ

ಉತ್ತರ ಕರ್ನಾಟಕ ಭಾಗದ ಹೋರಾಟಗಾರರ ನಿಯೋಗದ ಜೊತೆ ಸಭೆ ಮಂಗಳವಾರ ಸಭೆ ನಡೆಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡಲು , ಮಂಗಳೂರನ್ನು ವಾಣಿಜ್ಯ ರಾಜಧಾನಿಯಾಗಿ ಮಾಡಲು ಚಿಂತನೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. 

Trending News