Ramesh Jarkiholi: '24 ಗಂಟೆಯಲ್ಲಿ 5 ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಕೊಡಿಸಬಲ್ಲೆ'

'ಬಿಜೆಪಿಗೆ ವಲಸೆ ಬಂದ 17 ಶಾಸಕರು ಖುಷಿಯಿಂದ ಇಲ್ಲ. ಮರಳಿ ಕಾಂಗ್ರೆಸ್ ಗೆ ಹೋಗುತ್ತಾರೆ'

Last Updated : Feb 14, 2021, 05:15 PM IST
  • ಹೊಸ ಬಾಂಬ್ ಸಿಡಿಸಿದ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ
  • ಬೇಕೆನಿಸಿದರೆ 24 ತಾಸಿನಲ್ಲಿ ಐದು ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ.
  • 'ಬಿಜೆಪಿಗೆ ವಲಸೆ ಬಂದ 17 ಶಾಸಕರು ಖುಷಿಯಿಂದ ಇಲ್ಲ. ಮರಳಿ ಕಾಂಗ್ರೆಸ್ ಗೆ ಹೋಗುತ್ತಾರೆ'
Ramesh Jarkiholi: '24 ಗಂಟೆಯಲ್ಲಿ 5 ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಕೊಡಿಸಬಲ್ಲೆ' title=

ಬೆಳಗಾವಿ: ಬೇಕೆನಿಸಿದರೆ 24 ತಾಸಿನಲ್ಲಿ ಐದು ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ನಗರದಲ್ಲಿ ಆಯೋಜಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ನೂತನ ಗ್ರಾಮ ಪಂಚಾಯತ್ ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನ ಸಮಾರಂಭದಲ್ಲಿ ಸಚಿವ ರಮೇಶ ಜಾರಕಿಹೊಳಿ(Ramesh Jarkiholi) ಮಾತನಾಡಿದರು.

JDS: 'ಶ್ರಮ ಪಟ್ಟರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸೀಟು'

ಈ ವೇಳೆ 'ಬಿಜೆಪಿಗೆ ವಲಸೆ ಬಂದ 17 ಶಾಸಕರು ಖುಷಿಯಿಂದ ಇಲ್ಲ. ಮರಳಿ ಕಾಂಗ್ರೆಸ್ ಗೆ ಹೋಗುತ್ತಾರೆ' ಎಂದು ಹೇಳುತ್ತಾರೆ. ಬೇಕೆನಿಸಿದರೆ 24 ತಾಸಿನಲ್ಲಿ ಐದು ಕಾಂಗ್ರೆಸ್(Congress) ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಹೇಳಿದ್ದಾರೆ.

Siddaramaiah: 'ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ಬಲವಂತವಾಗಿ ಹೇರಿದ್ರೆ ರಕ್ತಪಾತ'

ಕಾಂಗ್ರೆಸ್ ನ ಟಾಪ್ 1-5 ಮಟ್ಟದ ನಾಯಕರು ನಮ್ಮ ಜತೆ ಬರಲು ತಯಾರಿದ್ದಾರೆ. ಬೇಕಾದರೆ ಅಂಥವರನ್ನು ಬಿಜೆಪಿ(BJP)ಗೆ ಕೆರೆ ತರುತ್ತೇನೆ. ಅವರ ಹೆಸರು ಕೇಳಿದರೆ ಗಾಬರಿ ಆಗುತ್ತೀರಿ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

BY Vijayendra: 'ನನ್ನ ಬದುಕು ತೆರೆದ ಪುಸ್ತಕ-ಯಾರು ಬೇಕಾದ್ರೂ ನೋಡಬಹುದು'

ಈ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳಿದ ರಮೇಶ್‌ ಜಾರಕಿಹೊಳಿ, ಸಿದ್ದರಾಮಯ್ಯ(Siddaramaiah) ಈಗಲೂ ನಮ್ಮ ನಾಯಕ. ಈಗಲೂ ಅವರೊಂದಿಗೆ ಮಾತನಾಡುತ್ತೇನೆ. ಪಕ್ಷದ ವಿಚಾರಕ್ಕೆ ಬಂದಾಗ ಬಿಜೆಪಿ ನಮ್ಮ ಪಕ್ಷ ಎಂದರು.

Tik‌ Tok ಖರೀದಿಗೆ ಆಸಕ್ತಿ ತೋರಿದ ಬೆಂಗಳೂರು ಮೂಲ ಕಂಪನಿ..!

ಕಾಂಗ್ರೆಸ್‌ನಲ್ಲಿ 20 ವರ್ಷ ಶಾಸಕ(MLA)ನಾಗಿ ಇದ್ದೆ. ಅಷ್ಟೂ ವರ್ಷ ಕಾಂಗ್ರೆಸ್ ನವರು ನಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಯಲ್ಲಿ ಸ್ವತಂತ್ರವಾಗಿ ಇದ್ದೇವೆ ಎಂದು ರಮೇಶ್‌ ಜಾರಕಹೊಳಿ ಆರೋಪಿಸಿದರು.

Siddaramaiah: 'ಅಹಿಂದ ಸಮಾವೇಶದ ಬದಲು ಕಾಂಗ್ರೆಸ್ ಸಮಾವೇಶ ಮಾಡುವೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News