ST Somashekar : ಅಮಿತ್ ಶಾ - ಸಿಎಂ ಚರ್ಚಿಸಿ APMC ಕಾಯ್ದೆ ವಾಪಸ್ : ಸಚಿವ ಸೋಮಶೇಖರ್ 

ರಾಜ್ಯದಲ್ಲಿ 67 ಲಕ್ಷ ರೈತರಿದ್ದು ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ 26 ಲಕ್ಷ ರೈತರು ಬಂದಿದ್ದಾರೆ. ಈ ವರ್ಷ ಶೇ 30 ಲಕ್ಷ ರೈತರಿಗೆ 20 ಸಾವಿರ ಕೋಟಿ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ 3 ಲಕ್ಷ ರೈತರಿಗೆ ಸಾಲ ನೀಡಲು ಯೋಜಿಸಲಾಗಿದೆ ಎಂದರು.

Written by - RACHAPPA SUTTUR | Last Updated : Mar 28, 2022, 11:22 PM IST
ST Somashekar : ಅಮಿತ್ ಶಾ - ಸಿಎಂ ಚರ್ಚಿಸಿ APMC ಕಾಯ್ದೆ ವಾಪಸ್ : ಸಚಿವ ಸೋಮಶೇಖರ್  title=

ವಿಧಾನಸಭೆ : ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವಂತೆ  ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಯನ್ನು ವಾಪಸ್‍ ಪಡೆಯುವ ಕುರಿತು ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‍ ಶಾ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಸೋಮಶೇಖರ್(ST Somashekar), ರಾಜ್ಯದಲ್ಲಿ 67 ಲಕ್ಷ ರೈತರಿದ್ದು ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ 26 ಲಕ್ಷ ರೈತರು ಬಂದಿದ್ದಾರೆ. ಈ ವರ್ಷ ಶೇ 30 ಲಕ್ಷ ರೈತರಿಗೆ 20 ಸಾವಿರ ಕೋಟಿ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸದಾಗಿ 3 ಲಕ್ಷ ರೈತರಿಗೆ ಸಾಲ ನೀಡಲು ಯೋಜಿಸಲಾಗಿದೆ ಎಂದರು.

ಇದನ್ನೂ ಓದಿ : KCET 2022 Time Table : ಜೂನ್ 16, 17, 18 ರಂದು ಸಿಇಟಿ ಪರೀಕ್ಷೆ : ಸಚಿವ ಅಶ್ವತ್ಥನಾರಾಯಣ 

ಕೊವಿಡ್‍ ಹಿನ್ನೆಲೆಯಲ್ಲಿ ರೈತರು ಮತ್ತು ಸ್ವಸಹಾಯ ಗುಂಪುಗಳಿಗೆ 6 ಲಕ್ಷ ರೈತರಿಗೆ ಪರಿಹಾರ ವಿತರಿಸಲಾಗಿದೆ. 44 ಲಕ್ಷ ಆಶಾ ಕಾರ್ಯಕತೆ‍‍ಯರಿಗೆ 3 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ 5000 ಟನ್‍ ಹಾಲಿನ ಪುಡಿಯನ್ನು ಎಲ್ಲ ಹಾಲು ಒಕ್ಕೂಟಗಳಿಂದ ಖರೀದಿ ಮಾಡಿ ಒಕ್ಕೂಟಗಳಿಗೆ ನೆರವು ನೀಡಲಾಯಿತು. ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಕೋಟಿ ಲೀಟರ್‍ 28 ದಿನಗಳ ಕಾಲ ಉಚಿತ ಹಾಲು ನೀಡಲಾಯಿತು ಎಂದು ಹೇಳಿದರು.

ಕ್ಷೀರ ಸಮೃದ್ಧಿ ಯೊಜನೆ(Ksheera Samriddhi Yojana)ಯನ್ನು ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿದೆ. ರಾಜ್ಯದಲ್ಲಿ 14 ಹಾಲು ಒಕ್ಕೂಟಗಳಿವೆ. ಹಾವೇರಿ ಹಾಗೂ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ಮಾಡಲು ತೀರ್ಮಾನಿಸಲಾಗಿದೆ. ಹಾವೇರಿ ಒಕ್ಕೂಟ ರಚನೆಗೆ ಆದೇಶ ನೀಡಲಾಗಿದೆ. ಚಿಕ್ಕಬಳ್ಳಾಪುರ ಒಕ್ಕೂಟ ರಚನೆಗೆ ಕೋರ್ಟ್‍ನಿಂದ ತಕರಾರು ಇರುವುದರಿಂದ ಬಾಕಿ ಉಳಿದುಕೊಂಡಿದೆ.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‍ ಯತ್ನಾಳ್‍, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ರಾಜ್ಯ ಸರ್ಕಾರವೂ ರಾಜ್ಯದಲ್ಲಿ ತಿದ್ದುಪಡಿ ಮಾಡಿರುವ ಎಪಿಎಂಸಿ ಕಾನೂನು ವಾಪಸ್‍ ಪಡೆಯುವಂತೆ ಆಗ್ರಹಿಸಿದರು.

ಪ್ರಧಾನಿಯವರು ಎಪಿಎಂಸಿ(APMC) ಬಲಪಡಿಸಲು ಒಳ್ಳೆಯ ಕಾನೂನು ತಂದಿದ್ದರು. ದುರ್ದೈವದಿಂದ ಆ ಕಾನೂನು ವಾಪಸ್‍ ಪಡೆಯಬೇಕಾಯಿತು. ರಾಜ್ಯದಲಿಯೂ ಎಪಿಎಂಸಿ ಕಾನೂನನ್ನು ವಾಪಸ್‍ ಪಡೆಯಬೇಕು. ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟ್ರು ದ್ರಾಕ್ಷಿ ಬೆಳೆಯಲಾಗುತ್ತಿದೆ. ಅದೆಲ್ಲವನ್ನು ಮಹಾರಾಷ್ಟ್ರಕ್ಕೆ ಮಾರಾಟ ಮಾಡುತ್ತಿದ್ದಾರೆ.ಇದರಿಂದ ರಾಜ್ಯದ ತೆರಿಗೆ ಮಹಾರಾಷ್ಟ್ರಕ್ಕೆ ಹೋಗುತ್ತಿದೆ.ನಮ್ಮ ರಾಜ್ಯದ ಎಪಿಎಂಸಿಗಳಿಗೆ ಅನ್ಯಾಯವಾಗುತ್ತಿದೆ ಎಂದರು.

ಇದನ್ನೂ ಓದಿ : WFH ಅವಧಿಯಲ್ಲಿ ಮ್ಯಾಟರ್ನಿಟಿ ಲೀವ್ ಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು

ಅವರ ಮನವಿಗೆ ಉತ್ತರಿಸಿದ ಸಚಿವ ಸೋಮಶೇಖರ್, ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಆಗಮಿಸುತ್ತಿದ್ದು,ಅವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಎಂಪಿಎಂಸಿ ಕಾಯ್ದೆ(APMC Act) ತಿದ್ದುಪಡಿ ವಾಪಸ್‍ ಪಡೆಯುವ ಕುರಿತು ಮುಖ್ಯಮಂತ್ರಿಗಳು ಚರ್ಚಿಸುತ್ತಾರೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.

13000 ರೈತರ ಸಾಲ ಮನ್ನಾ ಬಾಕಿ ಉಳಿದಿದ್ದು ಅವರಿಗೆ ಮತ್ತೊಂದು ಅವಕಾಶ ನೀಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರೈತರು ದಾಖಲೆಗಳನ್ನು ಒದಗಿಸಿದರೆ ಸಾಲ ಮನ್ನಾ ಮಾಡಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News