"ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ"

ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

Written by - Zee Kannada News Desk | Last Updated : Jan 21, 2022, 09:37 PM IST
  • ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
"ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ" title=

ಬೆಂಗಳೂರು: ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

ಕೂಡಲ ಸಂಗಮ ಸ್ವಾಮೀಜಿ ನಮ್ಮ ಸಮುದಾಯದ ಪರವಾಗಿ ಹೋರಾಟ ಮಾಡಿದ್ದಾರೆ ಸಮುದಾಯದ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ.ಅವರ ಮಟ್ಟಕ್ಕೆ ಯಾವ ಪೀಠ ಬರುವುದಿಲ್ಲ.ಹರಿಹರ ಹಾಗೂ 3 ನೇ ಪೀಠ ನಿರಾಣಿ ಪೀಠಗಳು.ಕೂಡಲ ಸಂಗಮ ಪೀಠ ಮಾತ್ರ ಪಂಚಮಸಾಲಿ ಸಮುದಾಯದ ಪೀಠ, ಬ್ಲೇಜರ್ ಗಳು, ಎಂಜಿ ರೋಡಿನಲ್ಲಿ ಮಾರಾಟಕ್ಕಿವೆ.ಸೂರ್ಯ ಚಂದ್ರ ಇರುವವರೆಗೂ ನಿರಾಣಿ ಸಿಎಂ ಆಗುವುದಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ : Gold price today : ಚಿನ್ನಾಭರಣ ಪ್ರಿಯರ ಗಮನಕ್ಕೆ : ಇಂದು ಮತ್ತೆ ಚಿನ್ನ - ಬೆಳ್ಳಿ ಬೆಲೆ ಏರಿಕೆ

ಇದೆ ವೇಳೆ ವಿಕೇಂದ್ ಕರ್ಪ್ಯೂ ಅಂತ್ಯಗೊಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ "ವೀಕೆಂಡ್ ಕರ್ಪ್ಯೂ ತೆರವು ಮಾಡಿದ್ದಕ್ಕೆ ಸಿಎಂ ಹಾಗೂ ಸಚಿವರಿಗೆ ಅಭಿನಂದನೆ. ಕೊರೊನಾ ವಾರಾಂತ್ಯದಲ್ಲಿ ಮಾತ್ರ ಬರುವುದಿಲ್ಲ. ಇದನ್ನು ಕೆಲವರು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರು. ಸರ್ಕಾರದ ಕಾನೂನು ಪ್ರಕಾರ ಕೊರೊನಾ ರಾತ್ರಿ ಅಡ್ಡಾಡಬಾರದು.ಕಾಂಗ್ರೆಸ್ ಪಾದಯಾತ್ರೆಗೆ ಮೊದಲೆ ಅವಕಾಶ ಕೊಡಬಾರದಿತ್ತು. ಒಂದು ವೇಳೆ ಕಾಂಗ್ರೆಸ್ ನವರು ಪಾದಯಾತ್ರೆ ಇನ್ನೂ ಮುಂದುವರೆಸಿದ್ದರೆ ಯಾರೂ ಇರುತ್ತಿರಲಿಲ್ಲ.ಅವರೆಲ್ಲಾ ದೇವರ ಹತ್ತಿರ ಹೋಗುತ್ತಿದ್ದರು ಎಂದು ಟೀಕಿಸಿದರು.

ಇದನ್ನೂ ಓದಿ: ಯಾರೋ ಮಿಸ್ ಗೈಡ್ ಮಾಡಿದ್ದಾರೆ, ಯಾವ ಗಲಾಟೆನೂ ಇಲ್ಲ, ಏನು ಇಲ್ಲ: ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ನಮಗೆ ದಿಲ್ಲಿಗಿ ಹೋಗುವ ಚಟ ಇದೆ  ಹಳೆಯ ಸ್ನೇಹಿತರಿದ್ದಾರೆ. ಅವರೊಂದಿಗೆ ಭೇಟಿ ಮಾಡಿ ಬರುತ್ತೇವೆ. ಸಂಪುಟ ಪುನಾರಚನೆ ಯಾವಾಗಾದರೂ ಮಾಡಲಿ ಒಳ್ಳೆಯ ಆಡಳಿತ ನೀಡಲಿ ಎಂದು ಅವರು ಹೇಳಿದರು.

ವಿಜಯೇಂದ್ರ ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ.ವಿಜಯೇಂದ್ರ ಅಂತ ದೊಡ್ಡ ನಾಯಕರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿಯಲ್ಲ.ಯುಗಾದಿ ಹೊತ್ತಿಗೆ ಬದಲಾವಣೆ ಆಗುತ್ತದೆ. ಬದಲಾವಣೆ ಜಗದ ನಿಯಮ. ಬದಲಾವಣೆ ಆಗದಿದ್ದರೆ ಅದನ್ನು  ಯುಗಾದಿ ಸಂಕ್ರಮಣ ಅಂತ ಯಾಕೆ ಕರೆಯಬೇಕು ಎಂದು ಅವರು ಕುಟುಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News