ಕರಗದ ಪೂಜೆ ವೇಳೆ ಬೆಂಕಿ ಅವಘಡ, 20 ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿ 

ನಗರದಲ್ಲಿ ಕರಗದ ಪೂಜೆ ವೇಳೆ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಬೈಕುಗಳು ಸುಟ್ಟು ಭಸ್ಮವಾಗಿರುವ ದುರ್ಘಟನೆ ನಡೆದಿದೆ.

Written by - Manjunath N | Last Updated : Apr 6, 2023, 04:12 PM IST
  • ಇಂದು ರಾತ್ರಿ ಕರಗದ ಉತ್ಸವ ಇದ್ದಿದ್ದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಮಾವೇಶಗೊಂಡಿದ್ದರು.
  • ತಮ್ಮ ಹರಕೆಯನ್ನು ತೀರಿಸಲು ಭಕ್ತರು ಕರ್ಪೂರ ಹಚ್ಚುತ್ತಿದ್ದಾಗ ಬೆಂಕಿ ಹತ್ತಿ ಹತ್ತಿರದಲ್ಲಿದ್ದ ವಾಹನಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.
ಕರಗದ ಪೂಜೆ ವೇಳೆ ಬೆಂಕಿ ಅವಘಡ, 20 ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿ  title=

ಬೆಂಗಳೂರು: ನಗರದಲ್ಲಿ ಕರಗದ ಪೂಜೆ ವೇಳೆ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಬೈಕುಗಳು ಸುಟ್ಟು ಭಸ್ಮವಾಗಿರುವ ದುರ್ಘಟನೆ ನಡೆದಿದೆ.

ಪೂಜೆವೇಳೆ ದೊಡ್ಡಕರ್ಪೂರಗಳನ್ನು ಹಚ್ಚುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು ೨೦ ಕ್ಕೂ ಅಧಿಕ ಬೈಕುಗಳು ಮತ್ತು ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ಇದನ್ನೂ ಓದಿ: ಐತಿಹಾಸಿಕ ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ! ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು!

ಇಂದು ರಾತ್ರಿ ಕರಗದ ಉತ್ಸವ ಇದ್ದಿದ್ದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಮಾವೇಶಗೊಂಡಿದ್ದರು.ತಮ್ಮ  ಹರಕೆಯನ್ನು ತೀರಿಸಲು ಭಕ್ತರು ಕರ್ಪೂರ ಹಚ್ಚುತ್ತಿದ್ದಾಗ ಬೆಂಕಿ ಹತ್ತಿ ಹತ್ತಿರದಲ್ಲಿದ್ದ ವಾಹನಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.

ಇದನ್ನೂ ಓದಿ: ತುಮಕೂರಿನ ಕುಂದೂರಿನಲ್ಲಿ ಬೋನಿಗೆ ಬಿದ್ದ ಚಿರತೆ

ಈ ದುರ್ಘಟನೆ ನಂತರ ಅಗ್ನಿಶಾಮಕ ಸಿಬ್ಬಂಧಿಯು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಲು ಕಾರ್ಯಪ್ರವೃತ್ತವಾಗಿವೆ ಎನ್ನಲಾಗಿದೆ.ಆದರೆ ಇದುವರೆಗೆ ಯಾವುದೇ ಜೀವಹಾನಿಯಾಗಿರುವ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News