ವಿಜಯಪುರ: ಒಬ್ಬ ಸ್ಟ್ರಾಂಗ್ ಕರ್ನಾಟಕಕ್ಕೆ ಹೋಮ್ ಮಿನಿಸ್ಟರ್ ಬೇಕಾಗಿದೆ. ಬೇಕಾದ್ರೆ ಟಿವಿ ಪೇಪರ್ ನಲ್ಲಿ ಹಾಕಿ ಒಬ್ಬ ಒಳ್ಳೆ ಗೃಹ ಮಂತ್ರಿ ಬೇಕಾಗಿದ್ದಾರೆ ಅಂತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಜಯಪುರದಲ್ಲಿ ಈ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹುಬ್ಬಳ್ಳಿ ಗಲಭೆ ವಿಚಾರವಾಗಿ ಅಸಮಾಧಾನ ಹೊರಹಾಕಿದ್ದಾರೆ. ಉತ್ತರ ಪ್ರದೇಶದಲ್ಲಿ ಐದು ವರ್ಷದಲ್ಲಿ ಯಾವುದೇ ಗಲಾಟೆ ಆಗಿಲ್ಲ. ಗುಜರಾತ್ ನಲ್ಲಿ ಒಂದು ಘಟನೆ ಬಿಟ್ರೆ ಬಿಜೆಪಿ 20 ವರ್ಷ ಆಡಳಿತದಲ್ಲಿದೆ ಎಲ್ಲಿ ಗಲಾಟೆ ಆಗಿದೆ. ಮನೆ ಮನೆಯ ಸರ್ಚ್ ಆಪರೇಷನ್ ಆಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಇದುವರೆಗಿನ ಅತಿ ದೊಡ್ಡ ಧೂಮಕೇತು
ಗಲಭೆಯಲ್ಲಿ ಕೆಲವೊಂದು ಶಕ್ತಿಗಳು ಕೆಲಸ ಮಾಡುತ್ತಿವೆ. ಮೆರವಣಿಗೆ ಹೋಗುವ ಮೊದಲು ಮನೆಯ, ಅಂಗಡಿಯ ಮೇಲೆ ಸರ್ಚ್ ಮಾಡಬೇಕು. ಇನ್ಮೇಲೆ ಓನ್ಲಿ ಆ್ಯಕ್ಷನ್ ಆಗಬೇಕು ಅಷ್ಟೇ. ಬರೀ ಕಥೆ ಹೇಳುವ ಕೆಲಸ ಆಗಬಾರದು. ಕಾಂಗ್ರೆಸ್ ನವರು ಕುಮ್ಮಕ್ಕು ಕೊಟ್ಟಿದ್ದಾರೆ ಅಂತ ಕಥೆ ಹೇಳೋದು ಬೇಡ ಎಂದರು.
ಬಿಜೆಪಿ ಅಧಿಕಾರದಲ್ಲಿ ಇದೆ. ನೀವೇನು ಮಾಡ್ತೀರಾ ಅಂತ ಜನತೆ ಕೇಳ್ತಾರೆ. ಅದಕ್ಕಾಗಿ ಬರೀ ಆ್ಯಕ್ಷನ್ ಆಗಬೇಕು. ಯಾವ ಎಂಎಲ್ಎ ಅಡ್ಡ ಬರುತ್ತಾರೆ ಅವರನ್ನು ಒಳಗೆ ಹಾಕ್ರಿ. ಡಿಜೆ ಹಳ್ಳಿಯಲ್ಲಿ ಕೇಸ್ನಲ್ಲಿ ಶಾಸಕ ಜಮೀರ ಅಹ್ಮದ್ ಮೇಲೆ ಆ್ಯಕ್ಷನ್ ಮಾಡಿದ್ರೆ ಬರೋಬ್ಬರಿ ಆಗ್ತಿತ್ತು. ನೀವೂ ಆಗ ಮಾಡ್ಲಿಲ್ಲ. ಒಳಗೆ ಎಲ್ಲವೂ ಹೊಂದಾಣಿಕೆ ಇದೆ ಎಂದು ಸ್ವಪಕ್ಷೀಯ ವಿರುದ್ಧ ಕಿಡಿಕಾರಿದರು.
ಇದನ್ನೂ ಓದಿ: KGF Chapter 3: ಕೆಜಿಎಫ್ ಚಾಪ್ಟರ್ 3 ಚಿತ್ರದ ಪ್ರೀ ಪ್ರೊಡಕ್ಷನ್ ಕಾರ್ಯಕ್ಕೆ ಚಾಲನೆ...!
ನಮ್ಮ ಪಕ್ಷದಲ್ಲೂ ಬದಲಾವಣೆ ಮಾಡ್ಕೋಬೇಕು. ಕರ್ನಾಟಕದ ಹಿತದೃಷ್ಟಿಯಿಂದ ಆ್ಯಕ್ಷನ್ ಆಗಬೇಕು. ಜಮೀರ್ ಅಹಮದ್ ಖಾನ್ ನೊಂದಿಗೆ ಬಿಜೆಪಿಯವರು ಹಲ್ಲು ಕಿಸಿಯುತ್ತ ಕುಳಿತಿರುವುದನ್ನು ಜನ ಫೇಸ್ಬುಕ್ನಲ್ಲಿ ನೋಡಿದ್ದಾರೆ ಎಂದು ಆರೋಪಿಸಿದರು. ರಾಷ್ಟ್ರೀಯ ಅಧ್ಯಕ್ಷರು ಸಿಎಂಗೆ ಖಡಕ್ ಆಕ್ಷನ್ ತೆಗೆದುಕೊಳ್ಳಲು ಸೂಚನೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.