BS Yediyurappa: 'ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್‌ಡೌನ್ ಇಲ್ಲ'

ಕೊರೋನಾ ಹರಡುವುದನ್ನು ತಡೆಯಲು ರಾಜ್ಯದ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನ ಅನುಸರಿಸಬೇಕು

Last Updated : Apr 13, 2021, 12:35 PM IST
  • ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚಾ ಗುತ್ತಿವೆ
  • ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್‌ಡೌನ್ ವಿಧಿಸುವ ಪ್ರಶ್ನೆಯೇ ಇಲ್ಲ
  • ಸಿಎಂ ಬಿ.ಎಸ್.ಯಡಿಯುರಪ್ಪ
BS Yediyurappa: 'ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್‌ಡೌನ್ ಇಲ್ಲ' title=

ಬೀದರ್: ದೇಶಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚಾ ಗುತ್ತಿವೆ ಆದ್ರೆ, ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಲಾಕ್‌ಡೌನ್ ವಿಧಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ  ಸಿಎಂ ಯಡಿಯುರಪ್ಪ(BS Yediyurappa), ಕೊರೋನಾ ಹರಡುವುದನ್ನು ತಡೆಯಲು ರಾಜ್ಯದ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನ ಅನುಸರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ- Govt Office Timings Change: ಉತ್ತರ ಕರ್ನಾಟಕದ 9 ಜಿಲ್ಲೆಗಳ ಸರ್ಕಾರಿ ಕಚೇರಿಗಳಲ್ಲಿ ಸಮಯ ಬದಲಾವಣೆ!

"ಕೊರೋನಾ ಪರಿಸ್ಥಿತಿಗೆ ಸಂಬಂಧಿಸಿದಂತೆ ಏಪ್ರಿಲ್ 18 ರಂದು ಸರ್ವಪಕ್ಷಗಳ ಸಭೆ ಕರೆದಿದ್ದೇನೆ. ರಾಜ್ಯದಲ್ಲಿ ಸಧ್ಯ ಲಾಕ್‌ಡೌನ್(Lockdown) ಮಾಡುವುದಿಲ್ಲ. ತಾಂತ್ರಿಕ ಸಲಹಾ ಸಮಿತಿಯು ಮೇ 2 ರವರೆಗೆ ಇಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಲಿವೆ ಎಂದು ಸೂಚಿಸಿದೆ. ಆದ್ದರಿಂದ ಜನರು ಕೊರೋನಾಗೆ ಸಂಬಂಧಿಸಿದಂತೆ ಸರ್ಕಾರ ಸೂಚಿಸಿದ ಮಾರ್ಗಸೂಚಿಗಳನ್ನ ಅನುಸರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ- Bus Strike: 6 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ : ಇಂದು ಕುಟುಂಬ ಸಮೇತ ಬೀದಿಗಿಳಿದ ಸಿಬ್ಬಂದಿ!

ಕರೋನವೈರಸ್(Coronavirus) ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಏಪ್ರಿಲ್ 20 ರವರೆಗೆ ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ತುಮಕುರು, ಉಡುಪಿ ಮತ್ತು ಮಣಿಪಾಲದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ 'ಕರೋನಾ ಕರ್ಫ್ಯೂ' (ನೈಟ್ ಕರ್ಫ್ಯೂ) ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ- BS Yediyurappa: 'ರಾಜ್ಯದಲ್ಲಿ ಅಗತ್ಯವಿದ್ದ ಏರಿಯಾಗಳಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತೆ'

ಕೊರೋನಾ ಪ್ರಕರಣಗಳ ಸಂಖ್ಯೆ ಶೀಘ್ರದಲ್ಲೇ ಕಡಿಮೆಯಾಗದಿದ್ದರೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ನೈಟ್ ಕರ್ಫ್ಯೂ(Night Curfew) ವಿಧಿಸಲಾಗುವುದು ಎಂದು ಸಿಎಂ ಸೋಮವಾರ ಹೇಳಿದ್ದಾರೆ.

ಇದನ್ನೂ ಓದಿ- Ramesh Jarkiholi CD Case: ರಮೇಶ್ ಜಾರಕಿಹೊಳೆ ಸಿಡಿ ಕೇಸ್ ಗೆ ಬ್ಲಾಸ್ಟಿಂಗ್ ಟ್ವಿಸ್ಟ್..!

ಕರ್ನಾಟಕದಲ್ಲಿ ಸೋಮವಾರ 9,579 ಹೊಸ ಕೊರೋನಾ ಪ್ರಕರಣಗಳು ಕಂಡು ಬಂದಿದ್ದು, 2,767 ಡಿಶ್ಚಾರ್ಜ್ ಮಾಡಲಾಗಿದೆ, ಮತ್ತು 52 ಜನ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿವೆ. ಇದರೊಂದಿಗೆ, ರಾಜ್ಯದಲ್ಲಿ ಒಟ್ಟು ಕರೋನವೈರಸ್ ಸಂಖ್ಯೆ 10,74,869 ಕ್ಕೆ ತಲುಪಿದೆ. ಪ್ರಸ್ತುತ, ರಾಜ್ಯದಲ್ಲಿ 75,985 ಸಕ್ರಿಯ ಪ್ರಕರಣಗಳಿವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News