ಬಳ್ಳಾರಿ: ಸಾರ್ವಜನಿಕರು ತಮ್ಮಲ್ಲಿರುವ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಮತ್ತು ಪದಾರ್ಥಗಳಿದ್ದಲ್ಲಿ ಹಿಂತಿರುಗಿಸಬೇಕು ಎಂದು ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ.
ವನ್ಯಜೀವಿ (ರಕ್ಷಣಾ) ಕಾಯ್ದೆ 1972 ರ ಕಲಂ64(2) (ಎಫ್) (ಹೆಚ್) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ Wildlife (Protection) and surrender of un declared Wildlife or Animal Article, Trophy and Uncured Trophy (Karnataka) Rules, 2024 ನಿಯಮದಡಿ ದಿ.11-01-2024 ರಿಂದ ಹೊಸ ನಿಯಮವನ್ನು ಜಾರಿ ತಂದಿರುತ್ತದೆ.
ಆದ್ದರಿಂದ ಅಘೋಷಿತ ವನ್ಯಜೀವಿ, ಪ್ರಾಣಿಗಳ ಅಂಗಾಂಗಗಳ ಟ್ರೋಫಿಗಳು, ಸಂಸ್ಕರಿಸಿದ ಟ್ರೋಫಿಗಳು ಮತ್ತು ಪದಾರ್ಥಗಳಿದ್ದಲ್ಲಿ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಸರ್ಕಾರಕ್ಕೆ ಮರಳಿಸಲು 90 ದಿನಗಳ ಕಾಲಾವಕಾಶ ನೀಡಿದ್ದು, ದಿನಾಂಕ 11-01-2024 ರಿಂದ ದಿನಾಂಕ 11-04-2024 ರವರೆಗೂ ಮರಳಿಸಲು ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ: ನೋಂದಣಿಗೆ ಆಹ್ವಾನ
ಮರಳಿಸಲು ನಿಗಧಿತ-1 ನಮೂನೆಯಲ್ಲಿ ದ್ವಿ ಪ್ರತಿಯಲ್ಲಿ 100 ರೂಪಾಯಿಗಳ ನೋಟರಿಗೊಂಡ ಸ್ಟ್ಯಾಂಪ್ ಪೇಪರ್‍ನಲ್ಲಿ ಒಂದು ಅಫಿಡೆವಿಟ್‍ನ್ನು ಮಾಡಿಸಿಕೊಂಡು ಆಧ್ಯರ್ಫಿಸುತ್ತಿರುವ ವನ್ಯಜೀವಿ ಟ್ರೋಪಿಗಳನ್ನು ಅರ್ಜಿದಾರರು ತಾವು ಅದನ್ನು ಪಡೆದ ವಿಧ ಮತ್ತು ವರ್ಷದ ಬಗ್ಗೆ ನಮೂದಿಸಿ ತಮ್ಮ ವ್ಯಾಪ್ತಿಗೆ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು.
ಈ ನಿಯಮಗಳನ್ವಯ ವನ್ಯಜೀವಿ (ರಕ್ಷಣಾ) ಕಾಯಿದೆ, 1972 ಅಡಿಯಲ್ಲಿ ಈಗಾಗಲೇ ನೀಡಲಾದ ಮಾಲೀಕತ್ವದ ಪ್ರಮಾಣ ಪತ್ರ ಹೊಂದಿದ ವಸ್ತುಗಳಿಗೆ ಅನ್ವಯವಾಗುವುದಿಲ್ಲ. ಆಧ್ಯರ್ಪಿಸಿದ ವನ್ಯಜೀವಿ ವಸ್ತುಗಳ ಕುರಿತಂತೆ ಸ್ವೀಕಾರ ಮಾಡಿದ ಅಧಿಕಾರಿಯು ಸದರಿ ವಸ್ತುಗಳು ಯಾವುದೇ ಕಾಡು ಪ್ರಾಣಿಗಳ ಅಕ್ರಮ ಬೇಟೆಯಿಂದ ಬಂದಿಲ್ಲವೆಂದು ಹಾಗೂ ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ಕಾಯ್ದೆ ಬಂದ ನಂತರ ಯಾವುದೇ ಅಕ್ರಮ ಬೇಟೆಯಿಂದ ಬಂದಂತಹ ವಸ್ತುಗಳಲ್ಲವೆಂದು ವಿಚಾರಣೆ ಮುಖಾಂತರ ಖಚಿತಪಡಿಸಿಕೊಳ್ಳಬೇಕು ಎಂದೂ ತಿಳಿಸಿದ್ದಾರೆ.
ಒಂದು ವೇಳೆ ವನ್ಯಜೀವಿ (ರಕ್ಷಣೆ) ಕಾಯಿದೆ 1972 ರ ಕಾಯ್ದೆ ನಂತರ ಬೇಟೆಯಿಂದ ಪಡೆದ ವಸ್ತುಗಳಾಗಿದ್ದಲ್ಲಿ ನಿಯಮಾನುಸಾರ ಅಭ್ಯರ್ಥಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಇದು ಸುಳ್ಳು ಅಫಿಡೆವಿಟ್‍ನ್ನು ಪ್ರಾಮಾಣಿಕರಿಸಿದ ಪ್ರಕರಣವು ಎಂದು ಭಾವಿಸಲಾಗುವುದು.
ಇದನ್ನೂ ಓದಿ: ಕರ್ನಾಟಕ ಬಜೆಟ್ 2024, 15ನೇ ಬಾರಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ
ಅಧ್ಯರ್ಪಿಸಿದೆಲ್ಲಾ ವೈಲ್ಡ್ ಲೈಫ್ ಅಥವಾ ಅನಿಮಲ್ ಆರ್ಟಿಕಲ್, ಟ್ರೋಫಿ ಮತ್ತು ಅನ್ ಕ್ಯೂರ್ಡ್ ಟ್ರೋಫಿಗಳ ಎಲ್ಲಾ ವಿಚಾರಣೆಗಳನ್ನು ಅಧಿಕೃತ ಅಧಿಕಾರಿಗಳ ಮುಂದೆ ಆಧ್ಯರ್ಪಿಸಿದ ದಿನಾಂಕದಿಂದ ತೊಂಬತ್ತು ದಿನಗಳ ಒಳಗೆ ಅಥವಾ ಮೊದಲು ಪೂರ್ಣಗೊಳಿಸಬೇಕು.
ವಿಚಾರಣೆಯು ಹೇಳಿದ ಅವಧಿಯೊಳಗೆ ನಿರ್ಣಾಯಕವಾಗದಿದ್ದಲ್ಲಿ ಅಘೋಷಿತ ವನ್ಯಜೀವಿ ಅಥವಾ ಪ್ರಾಣಿಗಳ ವಸ್ತುಗಳ ಶರಣಾಗತಿಯನ್ನು ಮಾಡುವ ವ್ಯಕ್ತಿ, ಟ್ರೋಫಿ ಮತ್ತು ಅನಿಯಂತ್ರಿತ ಟ್ರೋಫಿ ಕುರಿತು ಅನುಮಾನದ ಪ್ರಯೋಜನವನ್ನು ನೀಡಬಹುದು. ನಂತರ ಯಾವುದೇ ಪುರಾವೆಗಳು ಕಂಡುಬಂದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ವೈಲ್ಡ್ ಲೈಫ್ ಅಥವಾ ಅನಿಮಲ್ ಆರ್ಟಿಕಲ್, ಟ್ರೋಫಿ ಮತ್ತು ಅನ್ ಕ್ಯೂರ್ಡ್ ಟ್ರೋಫಿಗಳನ್ನು ಆಧ್ಯರ್ಪಣಿ ಮಾಡಲು ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ:
ಬಳ್ಳಾರಿ ವಲಯ ಅರಣ್ಯಾಧಿಕಾರಿ ವಿನಯ ಕೆ.ಸಿ ಅವರ ಮೊ.7760534653, ಸಿರುಗುಪ್ಪ ವಲಯ ಅರಣ್ಯಾಧಿಕಾರಿ ತೋಷನ್‍ಕುಮಾರ್ ಅವರ ಮೊ.8762606007, ಸಂಡೂರು ಉತ್ತರ ವಲಯ ಅರಣ್ಯಾಧಿಕಾರಿ ಸೈಯದ್ ದಾದಾ ಖಲಂದರ್ ಅವರ ಮೊ.8147253742, ಸಂಡೂರು ದಕ್ಷಿಣ ವಲಯ ಅರಣ್ಯಾಧಿಕಾರಿ ಗಿರೀಶ್ ಡಿ.ಕೆ ಅವರ ಮೊ.9986274204 ಗೆ ಸಂಪರ್ಕಿಸಬಹುದು.
ಮರಳಿಸಿದ ಎಲ್ಲಾ ವೈಲ್ಡ್ ಲೈಫ್ ಅಥವಾ ಅನಿಮಲ್ ಆರ್ಟಿಕಲ್, ಟ್ರೋಫಿ ಮತ್ತು ಅನ್ ಕ್ಯೂರ್ಡ್ ಟ್ರೋಫಿಗಳು ಅಧ್ಯರ್ಪಣಿ ಮಾಡಿದ ವ್ಯಕ್ತಿಗಳು ನಿಯಮಾನುಸಾರವಾಗಿದಲ್ಲಿ ಅವುಗಳ ಸರ್ಕಾರಿ ಆಸ್ತಿಯಾಗಿರುತ್ತದೆ.
ಅವುಗಳನ್ನು DISPOSAL OF WILD ANIMAL ARTICLES RULE 2023 ರನ್ವಯ ನಿಯಮಾನುಸಾರ ವಿಲೇ ಮಾಡಲಾಗುವುದು. ವಿಚಾರಣೆಯಲ್ಲಿ ಉಳಿದಂತಹ ವನ್ಯಜೀವಿ ವಸ್ತುಗಳನ್ನು ನ್ಯಾಯವ್ಯಾಪ್ತಿಯ ನ್ಯಾಯಾಲಯಗಳ ನಿರ್ದೇಶನಗಳ ಪ್ರಕಾರ ವಿಲೇ ಮಾಡಲಾಗುವುದು. ಇತರೆ ಮಾಹಿತಿ ಬೇಕಾದಲ್ಲಿ ಕರ್ನಾಟಕ ಸರ್ಕಾರದ ಅಂತರ್ಜಾಲದ ವೆಬ್‍ಸೈಟ್ ವಿಳಾಸ https://aranya.gov.in ಗೆ ಭೇಟಿ ನೀಡಬಹುದು ಎಂದು ಬಳ್ಳಾರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.