ಒಂದು ಭೂಮಿ ಒಂದು ಮನೆ: ಆನ್ ಲೈನ್ ಕಾರ್ಯಕ್ರಮ

  ಡಬ್ಲೂ.ಡಬ್ಲೂ.ಎಫ್. ಇಂಡಿಯಾ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ 1ರಿಂದ 8ನೇ  ತರಗತಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಒಂದು ಭೂಮಿ ಒಂದು ಮನೆ ಎಂಬ ಆನ್‍ಲೈನ್ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

Last Updated : Sep 26, 2020, 01:08 AM IST
ಒಂದು ಭೂಮಿ ಒಂದು ಮನೆ: ಆನ್ ಲೈನ್ ಕಾರ್ಯಕ್ರಮ title=
ಸಾಂದರ್ಭಿಕ ಚಿತ್ರ

ಹಾಸನ:  ಡಬ್ಲೂ.ಡಬ್ಲೂ.ಎಫ್. ಇಂಡಿಯಾ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ರಾಜ್ಯದ 1ರಿಂದ 8ನೇ  ತರಗತಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಬಗ್ಗೆ ಒಂದು ಭೂಮಿ ಒಂದು ಮನೆ ಎಂಬ ಆನ್‍ಲೈನ್ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ಗೂಗಲ್ ಜಾಲತಾಣದಲ್ಲಿ ಲಿಂಕ್ ಬಳಸಿ ನೊಂದಣಿ ಮಾಡಿಕೊಂಡು ಸೆಪ್ಟೆಂಬರ್‍ನಿಂದ ನವೆಂಬರ್‍ವರೆಗೆ ಪ್ರತಿ ವಾರ ಅರ್ಧ ಗಂಟೆ ನಡೆಯುವ ಕಾರ್ಯಕ್ರಮವನ್ನು ದೀಕ್ಷಾ ಅಥವಾ ಫೇಸ್ ಬುಕ್‍ನಲ್ಲಿಯೂ ವೀಕ್ಷಿಸಬಹುದು.

ಕಾರ್ಯಕ್ರಮದ ನಂತರ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿ ಫೀಡ್‍ಬ್ಯಾಕ್ ನೀಡಬೇಕಾಗುತ್ತದೆ. ಶಿಕ್ಷಕರ ಅಥವಾ ಪೋಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ. ಭಾಗವಹಿಸಿದ ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಡಿಜಿಟಲ್ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ದೂ.ಸಂ: 9448857122, 9845402299ಅನ್ನು ಸಂಪರ್ಕಿಸಬಹುದಾಗಿದೆ.

Trending News