ಬೆಂಗಳೂರಿನಲ್ಲಿ ಯುದ್ಧ ವಿಮಾನ ಪತನ; ಓರ್ವ ಪೈಲೆಟ್ ಸಾವು

ಇಂದು ಬೆಳಿಗ್ಗೆ 11.20ರ ಸಮಯದಲ್ಲಿ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಓರ್ವ ಪೈಲೆಟ್ ಸಾವನ್ನಪ್ಪಿದ್ದಾರೆ.

Last Updated : Feb 1, 2019, 12:10 PM IST
ಬೆಂಗಳೂರಿನಲ್ಲಿ ಯುದ್ಧ ವಿಮಾನ ಪತನ; ಓರ್ವ ಪೈಲೆಟ್ ಸಾವು title=

ಬೆಂಗಳೂರು: ಇಲ್ಲಿನ HAL ವಿಮಾನ ನಿಲ್ದಾಣದ ಬಳಿ ಭಾರತೀಯ ಯುದ್ಧ ವಿಮಾನ ಮಿರಾಜ್ 2000 ಶುಕ್ರವಾರ ಪತನಗೊಂಡಿದೆ. ಈ ತರಬೇತಿ ವಿಮಾನದಲ್ಲಿ ಇಬ್ಬರು ಪೈಲೆಟ್ ಗಳು ಇದ್ದರು ಎನ್ನಲಾಗಿದೆ. 

ಇಂದು ಬೆಳಿಗ್ಗೆ 11.20ರ ಸಮಯದಲ್ಲಿ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದ್ದು, ಓರ್ವ ಪೈಲೆಟ್ ಸಾವನ್ನಪ್ಪಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮತ್ತೋರ್ವ ಪೈಲೆಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Trending News