ಕಾಂಗ್ರೆಸ್ ನಿಂದ ಅಪರೇಷನ್: ಸ್ವ ಪಕ್ಷದ ಸದಸ್ಯನ ಮನೆ ಮುಂದೆ ಬಿಜೆಪಿ ಪ್ರೊಟೆಸ್ಟ್

ಸೆ.4 ರಂದು ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಬಿಜೆಪಿ ಸದಸ್ಯ ಕಾಂಗ್ರೆಸ್ ಗೆ ಬೆಂಬಲ ಕೊಡುತ್ತಿರುವ ವಿಚಾರ ತಿಳಿದು ಮಾಜಿ ಶಾಸಕ ನಿರಂಜನಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಪುರಸಭಾ ಸದಸ್ಯ ಕಿರಣ್ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

Written by - Yashaswini V | Last Updated : Sep 3, 2024, 05:53 PM IST
  • ಪುರಸಭೆಯ‌ ನಾಲ್ವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಪಕ್ಷಾಂತರ
  • ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಪಕ್ಷಾಂತರವಾಗಿರುವ ಮಾಹಿತಿ ತಿಳಿದು ಆಕ್ರೋಶಗೊಂಡ ಬಿಜೆಪಿಗರು
ಕಾಂಗ್ರೆಸ್ ನಿಂದ ಅಪರೇಷನ್:  ಸ್ವ ಪಕ್ಷದ ಸದಸ್ಯನ ಮನೆ ಮುಂದೆ ಬಿಜೆಪಿ ಪ್ರೊಟೆಸ್ಟ್ title=

ಚಾಮರಾಜನಗರ: ಸ್ಥಳೀಯ ಸಂಸ್ಥೆಗಳ ಚುಕ್ಕಾಣಿ ಗುದ್ದಾಟ ತಾರಕಕ್ಕೇರಿದ್ದು ಆಪರೇಷನ್, ರಿವರ್ಸ್ ಆಪರೇಷನ್ ನಲ್ಲಿ  ಪಕ್ಷಗಳು ತೊಡಗಿವೆ. ಗುಂಡ್ಲುಪೇಟೆ ಪುರಸಭೆಯಲ್ಲಿ ಅಧಿಕಾರ ಹಿಡಿಯುವ ಉಮೇದಿನಲ್ಲಿದ್ದ ಬಿಜೆಪಿಗೆ ಸ್ವಪಕ್ಷದವರ ಪಕ್ಷಾಂತರ ತಲೆ ನೋವು ತರಿಸಿದೆ‌.

ಸೆ.4 ರಂದು ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆಯಲಿದ್ದು ಬಿಜೆಪಿ ಸದಸ್ಯ ಕಾಂಗ್ರೆಸ್ ಗೆ ಬೆಂಬಲ ಕೊಡುತ್ತಿರುವ ವಿಚಾರ ತಿಳಿದು ಮಾಜಿ ಶಾಸಕ ನಿರಂಜನಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ನೇತೃತ್ವದಲ್ಲಿ ಪುರಸಭಾ ಸದಸ್ಯ ಕಿರಣ್ ಮನೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ- ಚಾಮುಂಡಿಬೆಟ್ಟ ಪ್ರದೇಶದಲ್ಲಿ ಅಪರಾಧ ತಡೆಗೆ ಟಾಸ್ಕ್ ಫೋರ್ಸ್ ರಚನೆ

ಪುರಸಭೆಯ‌ ನಾಲ್ವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಪಕ್ಷಾಂತರವಾಗಿರುವ ಮಾಹಿತಿ ತಿಳಿದು ಆಕ್ರೋಶಗೊಂಡ  ಬಿಜೆಪಿಗರು ಸದಸ್ಯ ಕಿರಣ್ ಮನೆಮುಂದೆ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ- ಗೌರಿ-ಗಣೇಶ ಹಬ್ಬಕ್ಕಾಗಿ ಊರಿಗೆ ಹೋಗುವವರಿಗೆ KSRTC ಗುಡ್ ನ್ಯೂಸ್, ಟಿಕೆಟ್ ಬುಕ್ಕಿಂಗ್‌ನಲ್ಲೂ ರಿಯಾಯಿತಿ 

ಬಿಜೆಪಿ ಚಿಹ್ನೆಯಡಿ ಗೆದ್ದಿದ್ದ ಕಿರಣ್, ಹೀನಾ ಕೌಸರ್, ರಾಣಿ ಲಕ್ಷ್ಮೀದೇವಿ ಹಾಗೂ ರಮೇಶ್ ಕೈ ಪಕ್ಷದ ಕಡೆ ಮುಖ ಮಾಡಿದ್ದು ಕಿರಣ್ ಮತ್ತು  ಹೀನಾ ಕೌಸರ್ ಪತಿ ನವೀದ್ ಅವರು ಕಾಂಗ್ರೆಸ್ ಸದಸ್ಯರ ಜೊತೆ ಪ್ರವಾಸಕ್ಕೆ ತೆರಳಿದ ಮಾಹಿತಿ ಪಡೆದ ಬಿಜೆಪಿ ಮುಖಂಡರು  ಕಾಂಗ್ರೆಸ್ ಗೆ ಪಕ್ಷಾಂತರವಾಗಿರುವ ನಾಲ್ಕು ಮಂದಿ ಸದಸ್ಯರು ಹಾಗೂ ಶಾಸಕ ಹೆಚ್ .ಎಂ.ಗಣೇಶ್ ಪ್ರಸಾದ್ ವಿರುದ್ಧ ಧಿಕ್ಕಾರ ಘೋಷಣೆಯನ್ನು ‌ಆಕ್ರೋಶ ಹೊರಹಾಕಿ ಸದಸ್ಯರ ಪ್ರತಿಕೃತಿ ದಹನ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News