ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತ ಇಂದಿಗೂ ಹೊರೆಯಾಗಿ ಕಾಡುತ್ತಿದೆ. ಬಿಜೆಪಿ ಮಾಡಿದ ಎಲ್ಲಾ ಅನ್ಯಾಯ, ಅವಾಂತರಗಳನ್ನೂ ಸರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
ಕಳೆದ 7 ತಿಂಗಳುಗಳಿಂದ ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡದ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ನಾವು ಹಾಲು ಉತ್ಪಾದಕರ ನೆರವಿಗೆ ನಿಲ್ಲುತ್ತೇವೆ. ‘ಕಳೆದ 7 ತಿಂಗಳಿಂದ ಹಾಲಿನ ಪ್ರೋತ್ಸಾಹಧನ ನೀಡದ ಬಿಜೆಪಿಗರು ಇಂದು ಗ್ಯಾರಂಟಿ ಜಾರಿಯ ಬಗ್ಗೆ ಮಾತಾಡುವುದು ನಾಚಿಕೆಗೇಡು’ ಅಂತಾ ಟೀಕಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಸ್ಟ್ರೇಲಿಯನ್ ಕಾನ್ಸುಲೇಟ್ ಕಚೇರಿ ಶೀಘ್ರ ಪ್ರಾರಂಭ
ಗ್ಯಾರಂಟಿಗಳನ್ನು ಘೋಷಿಸುವಾಗ, ಬೀದಿ ಬೀದಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸುವಾಗ ಕಾಂಗ್ರೆಸಿಗರಿಗೆ ಸಾಮಾನ್ಯ ಪ್ರಜ್ಞೆ ಇರಲಿಲ್ಲವೇ? ಅಧಿಕಾರ ಬಂದ ಬಳಿಕ "*Condition Apply"ನೊಂದಿಗೆ ಯೂ ಟರ್ನ್ ಹೊಡೆಯುತ್ತಿದೆ #ATMSarkara ಎಂದು ಟೀಕಿಸಿದ್ದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಈ ದೇಶದಲ್ಲಿ ಪ್ರತಿ ಯೋಜನೆಗಳಿಗೂ ನೀತಿ-ನಿಯಮ, ಮಾನದಂಡ ಎಲ್ಲವೂ ಇದೆ. "ದಂಡ" ಹಿಡಿಯುವ ದಂಡದ ಪಕ್ಷದವರಿಗೆ ಮಾನದಂಡಗಳ ಬಗ್ಗೆ ತಿಳಿಯವುದಾದರೂ ಹೇಗೆ!? ನಾವು ಅದಾನಿ-ಅಂಬಾನಿಗಳ ಹೊಟ್ಟೆ ತುಂಬಿಸುವವರಲ್ಲ, ನೈಜ ಬಡವರ ಉನ್ನತಿಗಾಗಿ ಕೆಲಸ ಮಾಡುವವರು! ನಾವೂ "ಬಿಟ್ಟಿ ಭಾಗ್ಯ"ದ ಫಲಾನುಭವಿಗಳಾಗುವುದು ತಪ್ಪಲಿದೆ ಎಂಬ ಆತಂಕದಲ್ಲಿ ಈ ರೋಧನೆಯೇ ಬಿಜೆಪಿಗೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: Foxconn: ಜುಲೈ 1ರ ವೇಳೆಗೆ ಫಾಕ್ಸ್ ಕಾನ್ ಕಂಪನಿಗೆ ಪೂರ್ತಿ ಭೂಮಿ ಹಸ್ತಾಂತರ - ಸಚಿವ ಎಂ.ಬಿ.ಪಾಟೀಲ್
‘ರೈತರಿಗೆ ಬಡ್ಡಿರಹಿತ ಸಾಲವನ್ನು 10 ಲಕ್ಷದವರೆಗೂ ಏರಿಕೆ ಮಾಡುವ ಬಗ್ಗೆ, ಕೃಷಿ ಭಾಗ್ಯ ಯೋಜನೆಯನ್ನು ಮರುಜಾರಿ ಮಾಡುವ ಬಗ್ಗೆ ಕೃಷಿ ಸಚಿವರು ಮಾತಾಡಿದ್ದಾರೆ. ರೈತಸ್ನೇಹಿ ವಾತಾವರಣ ನಿರ್ಮಿಸಲು, ರೈತರ ಆತ್ಮವಿಶ್ವಾಸ, ಆದಾಯ ಹೆಚ್ಚಿಸಲು ನಮ್ಮ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ’ ಎಂದು ಕಾಂಗ್ರೆಸ್ ಹೇಳಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.