ತಮ್ಮನ್ನು ಮಾರಿಕೊಂಡ ಅನರ್ಹ ಶಾಸಕರಿಗೆ ಜನರು ಬುದ್ಧಿಕಲಿಸಬೇಕು: ಡಾ.ಜಿ. ಪರಮೇಶ್ವರ

ಬಿಜೆಪಿಯ ತತ್ವ ಸಿದ್ಧಾಂತ ಈ ದೇಶಕ್ಕೆ ಮಾರಕ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಪ್ರತಿಪಾದಿಸಿದ್ದಾರೆ.‌ ಆದರೆ ಬಿಜೆಪಿ ಒಡೆದು ಆಳುವ ಕೆಲಸ ಮಾಡುತ್ತಿದೆ. ಜಾತಿ ಧರ್ಮ ಒಡೆಯುವ ಪಕ್ಷ ನಮಗೆ ಬೇಡ ಎಂದರು.

Last Updated : Nov 26, 2019, 08:07 AM IST
ತಮ್ಮನ್ನು ಮಾರಿಕೊಂಡ ಅನರ್ಹ ಶಾಸಕರಿಗೆ ಜನರು ಬುದ್ಧಿಕಲಿಸಬೇಕು: ಡಾ.ಜಿ. ಪರಮೇಶ್ವರ title=

ಹುಣಸೂರು: ಜನಾದೇಶ ದಿಕ್ಕರಿಸಿ ಬಿಜೆಪಿಗೆ ತಮ್ಮನ್ನು ಮಾರಿಕೊಂಡ ಅನರ್ಹ ಶಾಸಕರನ್ನು ಉಪಚುನಾವಣೆಯಲ್ಲಿ ಜನರು ಸೋಲಿಸುವ ಮೂಲಕ ತಿರಸ್ಕರಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ(Dr. G Parameshwara) ಹೇಳಿದರು.

ಹುಣಸೂರು ವಿಧಾನಸಭಾ ಕ್ಷೇತ್ರ(Hunsur assembly constituency)ದ ಬನ್ನಿಕುಪ್ಪೆ ಗ್ರಾಮದಲ್ಲಿ ಪ್ರಚಾರ ನಡೆಸಿ, ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಪಕ್ಷವನ್ನು ತೊರೆದ ಅನರ್ಹರಿಗೆ ಬುದ್ದಿ ಕಲಿಸಬೇಕಿದೆ. ತನ್ನನ್ನು ತಾನು ಮಾರಿಕೊಂಡು, ರಾಷ್ಟ್ರೀಯ ಪಕ್ಷದ ಸಿದ್ದಾಂತಗಳನ್ನು ಗಾಳಿಗೆ ತೋರಿ ಹೋದವರನ್ನು ಗೆಲ್ಲಿಸಬೇಕಾ? ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಬಿಟ್ಟು ಹೋದ 18 ಜನರ ಪೈಕಿ 16 ಜನರನ್ನು ಅಲ್ಲಿನ ಜನ ಸೋಲಿಸಿದ್ದಾರೆ. ಹರಿಯಾಣದಲ್ಲಿ  ಕೂಡ ಸೋಲಿಸಿದ್ದಾರೆ. ಜನರು ಸಹ ಯೋಚಿಸಬೇಕು. ಪಕ್ಷಾಂತರಿಗಳನ್ನು ಗೆಲ್ಲಿಸಬಾರದು ಎಂದು ಹೇಳಿದರು.
 
ಬಿಜೆಪಿಯ ತತ್ವ ಸಿದ್ಧಾಂತ ಈ ದೇಶಕ್ಕೆ ಮಾರಕ. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಾನತೆ ಪ್ರತಿಪಾದಿಸಿದ್ದಾರೆ.‌ ಆದರೆ ಬಿಜೆಪಿ ಒಡೆದು ಆಳುವ ಕೆಲಸ ಮಾಡುತ್ತಿದೆ. ಜಾತಿ ಧರ್ಮ ಒಡೆಯುವ ಪಕ್ಷ ನಮಗೆ ಬೇಡ ಎಂದರು.

ವಿಶ್ವನಾಥ್(Vishwanath) ಅವರನ್ನು ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರನ್ನಾಗಿ ಮಾಡಿತ್ತು. ಆದರೆ ಅವರು ಪಕ್ಷವನ್ನು ಬಿಟ್ಟು ಜನಾದೇಶ ದಿಕ್ಕರಿಸಿದರು. ವಿಶ್ವನಾಥ್ ನನ್ನೊಂದಿಗೆ ಒಳ್ಳೆ ಸಂಬಂಧ ಹೊಂದಿದ್ದರು.‌ ಸರಕಾರ ಬೀಳಿಸುವ ಮೂರು ದಿನದ ಮುಂಚೆ ನಮ್ಮ ಮನೆಗೂ ಬಂದಿದ್ದರು. ಆದರೆ ಬಿಜೆಪಿ ಅವರು ಹಣ ನೀಡಿ ಅವರನ್ನು ಖರೀದಿಸಿದ್ದಾರೆ. ಬಿಜೆಪಿಗೆ ಹೋದ ಅನರ್ಹ ಶಾಸಕರನ್ನು ಹಣ ಕೊಟ್ಟು ಕೊಂಡು ಕೊಂಡಿರುವುದು ಬಹಿರಂಗದ ಗುಟ್ಟಾಗಿದೆ. ವಿಶ್ವನಾಥ್ ನಾನು ನಿವೃತ್ತಿ ಹೊಂದುವೆ ಎನ್ನುವ ಮಾತುಗಳು ಹೇಳಿದ್ದರು. ಆದರೆ ಅವರೇ ನಿಂತಿದ್ದಾರೆ. ಹುಣಸೂರು ಕ್ಷೇತ್ರದ ಜನ ವಿಶ್ವನಾಥ್ ಅವರನ್ನು ಕೆಲವೆಡೆ ಊರಿಗೆ ಬಿಟ್ಟುಕೊಳ್ಳುತ್ತಿಲ್ಲ.‌ ಅವರನ್ನು ಈ ಚುನಾವಣೆಯಲ್ಲಿ ಸಂಪೂರ್ಣ ತಿರಸ್ಕರಿಸಬೇಕು ಎಂದರು.

ನಮ್ಮನ್ನು ಕೇಳದೆ ರಾಜೀನಾಮೆ ನೀಡಿದ್ದೇಕೆ? ಅನರ್ಹರಿಗೆ ಮತದಾರರ ಪ್ರಶ್ನೆ

 ಕಾಂಗ್ರೆಸ್ ಅಭ್ಯರ್ಥಿ ಮಂಜು ಕ್ರಿಯಾಶೀಲ ವ್ಯಕ್ತಿ. ಅವರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.  ಸಾಮಾಜಿಕ ನ್ಯಾಯದಲ್ಲಿ ಅವರು ನಂಬಿಕೆ ಹೊಂದಿದ್ದಾರೆ. ಇಂಥವರನ್ನು ನಾವು ಗೆಲ್ಲಿಸಬೇಕು. ಕರ್ನಾಟಕದಲ್ಲಿ ನಾವು ಸರಕಾರ ರಚಿಸಿದ್ದ ವೇಳೆ ೧.೫ ಲಕ್ಷ‌ ಕೋಟಿ ಹೂಡಿಕೆ ಬಂದಿತ್ತು.‌ಆದರೆ ಈಗ ೬೦ ಸಾವಿರ ಕೋಟಿ ಬಂದಿದೆ ಅಷ್ಟೆ. ಹೆಚ್ಚು ದಿನ ಈ ಸರಕಾರ ಉಳಿಯುವುದಿಲ್ಲ. ಮುಂದೆ ಪೂರ್ಣ ಪ್ರಮಾಣದ ಚುನಾವಣೆ ಬಂದಾಗ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರಲಿದೆ ಎಂದು ಭವಿಷ್ಯ ನುಡಿದರು..

ಇದಕ್ಕೂ ಮುನ್ನ ನಂಜುಂಡೇಶ್ವರ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ಅವರು ಪೂಜೆ ಸಲ್ಲಿಸಿದರು.

Trending News