ಕಾಂಗ್ರೆಸ್ ಸರ್ಕಾರ ಕೊಲೆಗಡುಕರನ್ನು ಶಿಕ್ಷಿಸುವ ಬದಲು ರಕ್ಷಣೆ ನೀಡುತ್ತಿತ್ತು: ಬಿಜೆಪಿ ಆರೋಪ

ಕಾಶ್ಮೀರಿ ಪಂಡಿತರು ಹಾಗೂ‌ ಹಿಂದೂಗಳನ್ನು ನಾಗರಿಕ ಸಮಾಜ ತಲೆತಗ್ಗಿಸುವ ರೀತಿ ಬಲವಂತವಾಗಿ ಹೊರದಬ್ಬುತ್ತಿದ್ದಾಗ ಕಾಂಗ್ರೆಸ್ ಪಕ್ಷದ ನಾಯಕರು ತಾಲಿಬಾನ್ ಮನಸ್ಥಿತಿಯ ಸಂಘಟನೆಗಳ ಜತೆಗೆ ನೆಂಟಸ್ಥಿಕೆ ನಡೆಸುತ್ತಿದ್ದರು ಎಂದು ಬಿಜೆಪಿ ಆರೋಪಿಸಿದೆ.

Written by - Zee Kannada News Desk | Last Updated : Sep 29, 2021, 03:56 PM IST
  • ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ತಾಲಿಬಾನಿ ಮನಸ್ಥಿತಿಯ ಮತಾಂಧರು ಹಿಂದೂಗಳ ಹತ್ಯೆ‌ ಮಾಡಿದ್ದರು
  • ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯ ತಾಲಿಬಾನಿಗಳ ತೆಕ್ಕೆಗೆ ಜಾರಲಾರಂಭಿಸಿತ್ತು
  • ತಾಲಿಬಾನ್‌ ಮನಸ್ಥಿತಿಗಳಿಗೆ ಕಾಂಗ್ರೆಸ್ ತವರುಮನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ಬಿಜೆಪಿ
ಕಾಂಗ್ರೆಸ್ ಸರ್ಕಾರ ಕೊಲೆಗಡುಕರನ್ನು ಶಿಕ್ಷಿಸುವ ಬದಲು ರಕ್ಷಣೆ ನೀಡುತ್ತಿತ್ತು: ಬಿಜೆಪಿ ಆರೋಪ  title=
ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ (Photo Courtesy: @Zee News)

ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress Government) ಕೊಲೆಗಡುಕರನ್ನು ಶಿಕ್ಷಿಸುವ ಬದಲು ರಕ್ಷಣೆ ನೀಡುತ್ತಿತ್ತು ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ. #ಕಾಂಗ್ರೆಸ್‌ತಾಲಿಬಾನ್ ಹ್ಯಾಶ್ ಟ್ಯಾಗ್ ಬಳಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವಿದ್ದಾಗ ತಾಲಿಬಾನಿ(Taliban) ಮನಸ್ಥಿತಿಯ ಮತಾಂಧರು ಹಿಂದೂಗಳ ಹತ್ಯೆ‌ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಕೊಲೆಗಡುಕರನ್ನು ಶಿಕ್ಷಿಸುವ ಬದಲು ರಕ್ಷಣೆ ನೀಡುತ್ತಿತ್ತು, ಮತಾಂಧ ಸಂಘಟನೆಗಳ ಕೇಸ್‌ ಹಿಂಪಡೆಯುತ್ತಿತ್ತು. ತಾಲಿಬಾನ್‌ ಮನಸ್ಥಿತಿಗಳಿಗೆ ಕಾಂಗ್ರೆಸ್ ತವರುಮನೆ’ ಎಂದು ಬಿಜೆಪಿ ಕುಟುಕಿದೆ.

ಇದನ್ನೂ ಓದಿ: ಇದು ರೈತರ ಹೋರಾಟವಲ್ಲ, ದೇಶದ್ರೋಹಿಗಳ ಹೋರಾಟ: ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

‘ಸಿದ್ದರಾಮಯ್ಯ(Siddaramaiah)ಅವರ ಸರ್ಕಾರದ ಅವಧಿಯಲ್ಲಿ ರಾಜ್ಯ ತಾಲಿಬಾನಿಗಳ ತೆಕ್ಕೆಗೆ ಜಾರಲಾರಂಭಿಸಿತ್ತು. ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ನಡೆಯಿತು. ಕಾಂಗ್ರೆಸ್ ಸರ್ಕಾರದ‌ ನಾಯಕರು ಹಿಂದೂಗಳ ಕೊಲೆ, ಮಾನಹಾನಿಗೆ ಅಘೋಷಿತ ಫತ್ವಾ ಹೊರಡಿಸಿದ್ದರು. ಆಗ ಗೃಹ ಇಲಾಖೆಯನ್ನು ಎಲ್ಲಿ ಅಡವಿಡಲಾಗಿತ್ತು ಕಾಂಗ್ರೆಸ್?’ ಎಂದು ಬಿಜೆಪಿ ಪ್ರಶ್ನಿಸಿದೆ.

‘ಕಾಶ್ಮೀರಿ ಪಂಡಿತರು(Kashmiri Pandits) ಹಾಗೂ‌ ಹಿಂದೂಗಳನ್ನು ನಾಗರಿಕ ಸಮಾಜ ತಲೆತಗ್ಗಿಸುವ ರೀತಿ ಬಲವಂತವಾಗಿ ಹೊರದಬ್ಬುತ್ತಿದ್ದಾಗ ಕಾಂಗ್ರೆಸ್ ಪಕ್ಷದ ನಾಯಕರು ತಾಲಿಬಾನ್ ಮನಸ್ಥಿತಿಯ ಸಂಘಟನೆಗಳ ಜತೆಗೆ ನೆಂಟಸ್ಥಿಕೆ ನಡೆಸುತ್ತಿದ್ದರು. ಈಗ ಹೇಳಿ ಕಾಂಗ್ರೆಸ್ ನಾಯಕರೇ ತಾಲಿಬಾನ್ ಇರುವುದೆಲ್ಲಿ?. ದೇಶದಲ್ಲಿ ನಡೆದ ಮೂಲಭೂತವಾದಿ, ಭಯೋತ್ಪಾದಕ ಕೃತ್ಯಗಳನ್ನು ಕಾಂಗ್ರೆಸ್ ಪಕ್ಷ ಖಂಡಿಸುವುದಿಲ್ಲ. ಕಾಂಗ್ರೆಸ್‌ ಪಕ್ಷ ಉಗ್ರರ, ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಹೊಂದಿದೆ. ದೇಶದ ಹೊರಗೆ ಧರ್ಮಾಂಧರು ತಾಲಿಬಾನಿಗಳನ್ನು ಸೃಷ್ಟಿಸಿದರು, ದೇಶದ ಒಳಗೆ ತಾಲಿಬಾನಿ ಮನಸ್ಥಿತಿಗಳನ್ನು ಕಾಂಗ್ರೆಸ್‌ ಸೃಷ್ಟಿಸಿತು’ ಅಂತಾ ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ಟೋಬರ್ 11 ರವರೆಗೆ ರಾತ್ರಿ ಕರ್ಪ್ಯೂ ವಿಸ್ತರಣೆ

‘ತಾಲೀಬಾನ್‌ ಆಡಳಿತದಲ್ಲಿ ನ್ಯಾಯಾಂಗಕ್ಕೆ ಬೆಲೆಯಿಲ್ಲ. ಇಂದಿರಾ ಗಾಂಧಿ ಆಡಳಿತದ ಕಾಂಗ್ರೆಸ್‌(Congess)ಅವಧಿಯಲ್ಲೂ ನ್ಯಾಯಾಂಗಕ್ಕೆ ಬೆಲೆಯಿರಲಿಲ್ಲ.ಇಬ್ಬರ ನಡುವೆ ಸಾಮ್ಯತೆ ಇದೆ, ಇಬ್ಬರದೂ ಒಂದೇ ಮನಸ್ಥಿತಿ. ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಇಂದಿರಾಗಾಂಧಿಯೇ ತಾಲೀಬಾನಿಗಳಿಗೆ ಪ್ರೇರಣೆ’ ಅಂತಾ ಬಿಜೆಪಿ ಟೀಕಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News