close

News WrapGet Handpicked Stories from our editors directly to your mailbox

ಮೈಸೂರು ದಸರಾ 2019: ಯುವ ದಸರಾ ಉದ್ಘಾಟನೆಗೆ ಪಿ.ವಿ.ಸಿಂಧುಗೆ ಅಧಿಕೃತ ಆಹ್ವಾನ

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಷ್ಯಂತ್ ಅವರು ಸಿ.ವಿ.ಸಿಂಧು ಅವರನ್ನು ಭೇಟಿಯಾಗಿ ಆಹ್ವಾನ ನೀಡಿದರು.

Updated: Sep 14, 2019 , 05:05 PM IST
ಮೈಸೂರು ದಸರಾ 2019: ಯುವ ದಸರಾ ಉದ್ಘಾಟನೆಗೆ ಪಿ.ವಿ.ಸಿಂಧುಗೆ ಅಧಿಕೃತ ಆಹ್ವಾನ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಯುವ ದಸರಾ ಉದ್ಘಾಟನೆಗೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರಿಗೆ ಸಂಸದ ಪ್ರತಾಪ್ ಸಿಂಹ ಅವರಿ ರಾಜ್ಯ ಸರ್ಕಾರದ ಪರವಾಗಿ ಶನಿವಾರ ಅಧಿಕೃತ ಆಹ್ವಾನ ನೀಡಿದರು.

ನಾಲ್ಕು ದಿನಗಳ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪತ್ರ ಮುಖೇನ ಪಿ.ವಿ.ಸಿಂಧು ಅವರನ್ನು ಯುವ ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ಬೆನ್ನಲ್ಲೇ ಶನಿವಾರ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಷ್ಯಂತ್ ಅವರು ಸಿ.ವಿ.ಸಿಂಧು ಅವರನ್ನು ಭೇಟಿಯಾಗಿ ಆಹ್ವಾನ ನೀಡಿದರು.

ಇತ್ತೀಚೆಗೆ ನಡೆದ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪಿ.ವಿ. ಸಿಂಧು ಅವರು ಅಕ್ಟೋಬರ್ 1ರಂದು ನಡೆಯಲಿರುವ ಯುವ ದಸರಾ 2019ರ ಉದ್ಘಾಟನೆಗೆ ಆಗಮಿಸಲಿದ್ದಾರೆ.