ಗೋಪೂಜೆ ಮೂಲಕ ಅಟಲ್ ಜನ್ಮದಿನಾಚರಣೆ : ಕೊಡವರ ವಿರುದ್ಧ ಹಗುರವಾಗಿ ಮಾತನಾಡದಂತೆ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಎಚ್ಚರಿಕೆ

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ, ಸಂಸದ ಪ್ರತಾಪ್‌ಸಿಂಹ  ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದರು. ಇದಕ್ಕೂ  ಮುನ್ನ ಹಸುಗಳನ್ನು ತೊಳೆದು, ಮೇವು ತಿನ್ನಿಸಿ ಗೋಮಾತೆಗೆ ನಮಿಸಿದರು.

Written by - Zee Kannada News Desk | Last Updated : Dec 25, 2020, 07:00 PM IST
  • ಗೋಪೂಜೆ ಮೂಲಕ ಅಟಲ್ ಜನ್ಮದಿನಾಚರಣೆ
  • ಕೊಡವರ ವಿರುದ್ಧ ಹಗುರ ಮಾತು ಬೇಡ ಎಂದು ಎಚ್ಚರಿಸಿದ ಸಂಸದ ಪ್ರತಾಪ್ ಸಿಂಹ
  • ಕೊಡವರ ವಿರುದ್ಧ ಹಗುರ ಮಾತು ಬೇಡ ಎಂದು ಎಚ್ಚರಿಸಿದ ಸಂಸದ ಪ್ರತಾಪ್ ಸಿಂಹ
ಗೋಪೂಜೆ ಮೂಲಕ ಅಟಲ್ ಜನ್ಮದಿನಾಚರಣೆ  : ಕೊಡವರ ವಿರುದ್ಧ ಹಗುರವಾಗಿ ಮಾತನಾಡದಂತೆ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ  ಎಚ್ಚರಿಕೆ title=
ಕೊಡವರ ವಿರುದ್ಧ ಹಗುರ ಮಾತು ಬೇಡ ಎಂದು ಎಚ್ಚರಿಸಿದ ಸಂಸದ ಪ್ರತಾಪ್ ಸಿಂಹ (file photoe)

ಮೈಸೂರು : ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಹಿನ್ನೆಲೆ, ಸಂಸದ ಪ್ರತಾಪ್‌ಸಿಂಹ  ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದರು. ಇದಕ್ಕೂ  ಮುನ್ನ ಹಸುಗಳನ್ನು ತೊಳೆದು, ಮೇವು ತಿನ್ನಿಸಿ ಗೋಮಾತೆಗೆ ನಮಿಸಿದರು. 

ಮೈಸೂರಿನ ಪಿಂಜರಾಪೋಲ್ ನಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ (Pratap simha) ಭಾಗವಹಿಸಿದ್ದರು. ನಂತರ ಮಾತನಾಡಿದ ಅವರು, ಕೊಡವರು ಗೋಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಪ್ರತಿಕ್ರಿಯಿಸಿದರು. ನೀವು ಗೋಮಾಂಸ ತಿನ್ನುತ್ತೀರಿ ಎಂಬ ಕಾರಣಕ್ಕೆ ಇಡೀ ಕುರುಬ ಸಮಾಜವೇ ಬೀಫ್ ತಿನ್ನುತ್ತದೆ ಎಂದು ಹೇಳಲಾಗುತ್ತದೆಯೇ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ, ಕೊಡವರು ಗೋಮಾತೆಯನ್ನು ಎರಡನೇ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುವಂತೆ ಮಾತನಾಡಬೇಡಿ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ವಿವೇಚನೆಯಿಲ್ಲದೆ ಯಾಕೆ ಮಾತನಾಡುತ್ತಿರೋ  ಅರ್ಥವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ALSO READ : ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಸಿದ್ಧರಾಮಯ್ಯ ಪಟ್ಟು
 

ಇನ್ನು ಮೈಸೂರು  ಪಾಲಿಕೆ ಮೇಯರ್ ಚುನಾವಣೆ ಬಗ್ಗೆಯೂ ಮಾತನಾಡಿದ ಪ್ರತಾಪ್ ಸಿಂಹ, ಈ ಬಾರಿ ಬಿಜೆಪಿಗೆ (BJP) ಮೈಸೂರು ಪಾಲಿಕೆ ಮೇಯರ್ ಸ್ಥಾನ ಬೇಕೆ ಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮೈಸೂರು ಪಾಲಿಕೆಯಲ್ಲಿಯೂ ಬಿಜೆಪಿ ನೇತೃತ್ವದ ಅಧಿಕಾರ ಇದ್ದರೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

ALSO READ : ಸಂಕ್ರಾಂತಿಗೆ ಬಿಎಸ್ ವೈ ಸಂಪುಟದಲ್ಲಿ ಮಹತ್ವದ ಬದಲಾವಣೆ, ಇಬ್ಬರು ಸಚಿವರಿಗೆ ಕೊಕ್​!
 

ಇದೇ ವೇಳೆ, ಕರೋನಾ ವೈರಸ್ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿಬಂದಿದ್ದೇನೆ. ಎಲ್ಲ ಕಡೆ ಕೊರೊನಾ (Covid-19) ರೂಪಾಂತರದ ಬಗ್ಗೆ ಚರ್ಚೆ ಇದೆ. ಆದರೆ, ಜನರನ್ನ ಹೆಚ್ಚು ದಿನ‌ ನಿರ್ಬಂಧ ಮಾಡಲು ಸಾಧ್ಯವಿಲ್ಲ. ಉದ್ಯಮ ಹಾಗೂ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕರೋನಾ ಹರಡದಂತೆ ತಡೆಯಲು ಮಾಸ್ಕ್ ಕಡ್ಡಾಯ ಮಾಡಿ, ಆದರೆ ಮಾಸ್ಕ್ (Mask) ಹೆಸರಿನಲ್ಲಿ ಕಾರು ಬೈಕ್ ನಿಲ್ಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News