ಮಹಾಮಸ್ತಕಾಭಿಷೇಕಕ್ಕೂ ಮುನ್ನ ಬಾಹುಬಲಿ ಮೂರ್ತಿ ವಿಘ್ನ

ಕ್ರಿ.ಶ. 982ರಲ್ಲಿ ಚಾವುಂಡರಾಯ ಕೆತ್ತಿರುವ ಬಾಹುಬಲಿ ಮೂರ್ತಿ.

Last Updated : Nov 18, 2017, 05:56 PM IST
ಮಹಾಮಸ್ತಕಾಭಿಷೇಕಕ್ಕೂ ಮುನ್ನ ಬಾಹುಬಲಿ ಮೂರ್ತಿ ವಿಘ್ನ title=

ಹಾಸನ: ಜಗತ್ಪ್ರಸಿದ್ದ 58 ಅಡಿ ಎತ್ತರದ ಶ್ರವಣಬೆಳಗೋಳದ ಬಾಹುಬಲಿ ಮೂರ್ತಿಗೆ   ಮಹಾಮಸ್ತಕಾಭಿಷೇಕಕ್ಕೂ ಮೊದಲೇ ವಿಘ್ನ ಉಂಟಾಗಿದೆ. ಮೂರ್ತಿಯ ಎಡಗಾಲು ಮತ್ತು ಎದೆಯ ಭಾಗದಲ್ಲಿ ಚಕ್ಕೆ ಎದ್ದಿದೆ ಎಂದು ತಿಳಿದು ಬಂದಿದೆ. 

ಹಾಸನ ಜಿಲ್ಲೆಯ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಪ್ರತಿಮೆಯ ಎಡಗಾಲು ಮತ್ತು ಎದೆಯ ಭಾಗಿ ಚಕ್ಕೆ ಎದ್ದಿದೆ. 58 ಅಡಿ ಎತ್ತರದ ಏಕಶಿಲಾ ಮೂರ್ತಿಯಲ್ಲಿ ಎಡಗಾಲು ಸಂಪೂರ್ಣ ಕಿತ್ತು ಹೋಗಿದೆ ಮತ್ತು ಎದೆಯ ಭಾಗದಲ್ಲಿಯೂ ಕಲ್ಲಿನ ಚಕ್ಕೆ ಎದ್ದಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮೂರ್ತಿಯ ಸಂರಕ್ಷಣೆ ಹೊತ್ತಿರುವ ಕೇಂದ್ರ ಪುರಾತತ್ವ ಇಲಾಖೆಯು ಆತಂಕ ಪಡುವ ಅಗತ್ಯವಿಲ್ಲ ಮಹಾ ಮಸ್ತಕಾಭಿಷೇಕದ ಹೊತ್ತಿಗೆ ಎಲ್ಲವೂ ಸರಿಯಾಗಲಿದೆ, ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದೆ.

ಕ್ರಿ.ಶ. 982ರಲ್ಲಿ ಚಾವುಂಡರಾಯ ಏಕಶಿಲಾ ಬಾಹುಬಲಿ ಮೂರ್ತಿಯನ್ನು ಕೆತ್ತಿದ್ದನು. ಇದು ಜಗತ್ಪ್ರಸಿದ್ಧ ಮೂರ್ತಿಯೂ ಹೌದು.

2018ರ ಫೆಬ್ರವರಿ 7 ರಿಂದ 27 ರವರೆಗೆ ಬಾಹುಬಲಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಮಹಾಮಸ್ತಕಾಭಿಷೇಕಕ್ಕೆ ದೇಶ-ವಿದೇಶಗಳಿಂದ ಜನರು ಆಗಮಿಸಲಿದ್ದಾರೆ.

Trending News