ಹೋಳಿ ಆಡುವ ನೆಪದಲ್ಲಿ ವಸೂಲಿ ಧಂದೆ: ಹಣ ಕೊಡದಿದ್ರೆ ಹಲ್ಲೆ

ಹೋಳಿ (Holi) ಆಡುವ ನೆಪದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ (Highway) ವಾಹನ ಸವಾರರನ್ನು ತಡೆದು ಕೆಲ ಖದೀಮರು ವಸೂಲಿ ದಂಧೆಗೆ ಇಳಿದಿದ್ದಾರೆ. 

Written by - MANU KUMAR ARYA | Edited by - Chetana Devarmani | Last Updated : Mar 18, 2022, 05:06 PM IST
  • ಹೋಳಿ ಆಡುವ ನೆಪದಲ್ಲಿ ವಸೂಲಿ ಧಂದೆ
  • ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಘಟನೆ
  • ವಾಹನ ಸವಾರರನ್ನು ತಡೆದು ವಸೂಲಿ ದಂಧೆ
ಹೋಳಿ ಆಡುವ ನೆಪದಲ್ಲಿ ವಸೂಲಿ ಧಂದೆ: ಹಣ ಕೊಡದಿದ್ರೆ ಹಲ್ಲೆ title=
ಹೋಳಿ

ಬೆಳಗಾವಿ: ಹೋಳಿ (Holi) ಆಡುವ ನೆಪದಲ್ಲಿ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ (Highway) ವಾಹನ ಸವಾರರನ್ನು ತಡೆದು ಕೆಲ ಖದೀಮರು ವಸೂಲಿ ದಂಧೆಗೆ ಇಳಿದಿದ್ದಾರೆ. 

ಇದನ್ನೂ ಓದಿ:ಇಟಲಿ ಮೂಲದವರನ್ನು ಮೆಚ್ಚಿಸುವುದಕ್ಕೆ ಈ ಸದಾರಮೆ ನಾಟಕವೇ?’

ಹೆದ್ದಾರಿಯ ಮೇಲೆ ಮರದ ದಿಂಬುಗಳನ್ನ ಅಳವಡಿಸಿ ಹಣ ವಸೂಲಿ ಮಾಡಿದ್ದಾರೆ ಕಿಡಿಗೇಡಿಗಳು. 20ಕ್ಕೂ ಹೆಚ್ಚು ಜನರು ಸೇರಿ ಹಣ ವಸೂಲಿ ಮಾಡಿರುವ ದೃಶ್ಯವನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ (Viral Video) ಹರಿಬಿಡಲಾಗಿದೆ.

Collecting Money in the name of Holi in Belagavi

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಕ್ಕೋಡಿ ರೋಡ್ ರೈಲು ನಿಲ್ದಾಣದ (Railway Station) ಬಳಿ ಈ ಘಟನೆ ನಡೆದಿದೆ. ಹಣ ಕೊಟ್ಟರೆ ಮಾತ್ರ ವಾಹನ ಸವಾರರಿಗೆ ಮುಂದೆ ಸಾಗಲು ಬಿಡಲಾಗುತ್ತಿತ್ತು. ಹಣ ನೀಡದೆ ಹೋದರೆ ಸವಾರರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದರಂತೆ.

ಇನ್ನು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿನ್ನಡೆ: ಮೋಟಮ್ಮಗೆ ಡಿಕೆಶಿ ಅವಮಾನ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News