Road Accident: ರಸ್ತೆ ಬದಿಯಲ್ಲಿ ಮಲಗಿದ್ದ ಬಾಲಕಿ ಮೇಲೆ ಬುಲೋರೋ ಹರಿದು ಸಾವು

ತಾಯಿ ಜೊತೆ ರಸ್ತೆ ಬದಿ ಮಲಗಿದ್ದ ಬಾಲಕಿ ಮೇಲೆ ಬುಲೋರೋ ಹರಿದು ಸಾವು: ಸಿಟಿ ಮಾರ್ಕೆಟ್ ನಲ್ಲಿ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

Written by - VISHWANATH HARIHARA | Last Updated : Mar 29, 2022, 10:49 AM IST
  • ಇಂದು ಮುಂಜಾನೆ ನಾಲ್ಕು ಗಂಟೆಗೆ ಈ ದುರ್ಘಟನೆ ನಡೆದಿದೆ.
  • ತಮಿಳುನಾಡು ಮೂಲದ ಶಿವನ್ಯ ಮೃತ ದುರ್ದೈವಿಯಾಗಿದ್ದಾಳೆ.
  • ಮೃತ ಬಾಲಕಿಯ ಕುಟುಂಬಸ್ಥರು ತಮಿಳುನಾಡಿನ ಹಕ್ಕಿಪಿಕ್ಕಿ ಜನಾಂಗದವರಾಗಿದ್ದಾರೆ ಎಂದು ತಿಳಿದುಬಂದಿದೆ.
Road Accident: ರಸ್ತೆ ಬದಿಯಲ್ಲಿ ಮಲಗಿದ್ದ ಬಾಲಕಿ ಮೇಲೆ ಬುಲೋರೋ ಹರಿದು ಸಾವು     title=
Road accident in bengaluru

ಬೆಂಗಳೂರು: ರಸ್ತೆ ಬದಿಯಲ್ಲಿ ಮಲಗಿದ್ದ ಏಳು ವರ್ಷದ ಬಾಲಕಿ ಮೇಲೆ ಬುಲೋರೋ ಹರಿದು ಮೃತಪಟ್ಟಿರುವ ದಾರುಣ ಘಟನೆ ಇಂದು ಬೆಳ್ಳಂ ಬೆಳಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದು ಮುಂಜಾನೆ ನಾಲ್ಕು ಗಂಟೆಗೆ ಈ ದುರ್ಘಟನೆ ನಡೆದಿದ್ದು, ತಮಿಳುನಾಡು (Tamil Nadu) ಮೂಲದ ಶಿವನ್ಯ ಮೃತ ದುರ್ದೈವಿಯಾಗಿದ್ದಾಳೆ. ಮೃತ ಬಾಲಕಿಯ ಕುಟುಂಬಸ್ಥರು ತಮಿಳುನಾಡಿನ ಹಕ್ಕಿಪಿಕ್ಕಿ ಜನಾಂಗದವರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ- Roof Collapse: ಮನೆಯ ತಾರಸಿ ಕುಸಿದು ಇಬ್ಬರ ಸಾವು, 50 ಕ್ಕೂ ಹೆಚ್ಚಿನ ಜನರಿಗೆ ಗಾಯ

ಮೃತ ಮಗು, ಆಕೆಯ ತಾಯಿ ಇಬ್ಬರೂ ಪಿನ್, ಸರ ಸೇರಿ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಹುಸ್ಕೂರು ಜಾತ್ರೆಗೆ ಬಂದಿದ್ದರು. ಬಳಿಕ ಊರಿಗೆ ವಾಪಸ್ ಹೋಗಲು ಬಸ್ ಗಾಗಿ  ಸಿಟಿ ಮಾರ್ಕೆಟ್ (City Market) ಗೆ ಬಂದಿದ್ದರು. 

ನಿನ್ನೆ ರಾತ್ರಿ ಬಸ್ ಸಿಗದೇ ತೆಂಗಿನ ಕಾಯಿ ಮಂಡಿ ಬಳಿಯೇ ಮಕ್ಕಳ ಸಮೇತ ಮಹಿಳೆಯರು ಮಲಗಿದ್ದರು. ಈ ವೇಳೆ ಬುಲೋರೋದಲ್ಲಿ ಹೂ ಹಾಕಿಕೊಂಡು ಬಂದಿದ್ದ ಚಾಲಕ ಅನ್ ಲೋಡ್ ಮಾಡಿ ಹೊರಡಲು ಮುಂದಾಗಿದ್ದು, ರಸ್ತೆ ಬದಿಯಲ್ಲಿ ಮಲಗಿದ್ದವರನ್ನು ಗಮನಿಸಿದೆ ಬುಲೋರೋ ರಿವರ್ಸ್ ತೆಗೆಯುವಾಗ ಬಾಲಕಿ ಮೇಲೆ ಹತ್ತಿಸಿದ್ದಾನೆ.

ಇದನ್ನೂ ಓದಿ- Earthquake In J&K: ಜಮ್ಮು-ಕಾಶ್ಮೀರದಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು

ಬಾಲಕಿ ಜೋರಾಗಿ ಕಿರುಚುತಿದ್ದಂತೆ ವಾಹನ ಬಿಟ್ಟು ಚಾಲಕ  ಪರಾರಿಯಾಗಿದ್ದನು. ಆಸ್ಪತ್ರೆಗೆ ಸಾಗಿಸೋ ಮಾರ್ಗ ಮಧ್ಯೆ ಬಾಲಕಿ ಶಿವನ್ಯ ಮೃತಪಟ್ಟಿದ್ದಾಳೆ. ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರಿ ಠಾಣೆ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News