ಬೆಳಗಾವಿ: ಚಳಿಗಾಲದ ಅಧಿವೇಶನಕ್ಕೆ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸಾವರ್ಕರ್ ಭಾವಚಿತ್ರ ವಿಧಾನಸಭೆಯಲ್ಲಿ ಅಳವಡಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸಾವರ್ಕರ್ ವಿವಾದಾತ್ಮಕ ವ್ಯಕ್ತಿ, ಮಹಾತ್ಮ ಗಾಂಧಿ ಹತ್ಯೆಯಲ್ಲಿ ಇವರು ಇದ್ದರು ಎಂದು ಹೇಳಿದರು.
ಇದನ್ನೂ ಓದಿ: "ಯಾರು ಏನಾದರೂ ಪ್ರತಿಭಟನೆ ಮಾಡಲಿ, ನನ್ನ ಹೆಸರು ಪ್ರಚಾರ ಮಾಡಲಿ"
ವೀರ ಸಾವರ್ಕರ್ ಭಾವಚಿತ್ರ ಅಳವಡಿಕೆ ಬೇಕಿತ್ತಾ?ಈವರೆಗೆ ಹಾಕಿರಲಿಲ್ಲ ; ಈಗ ಯಾಕೆ ಹಾಕಿದ್ರು? ಸಾವರ್ಕರ್ ಅವರದ್ದು ವಿವಾದತ್ಮಕ ವ್ಯಕ್ತಿತ್ವ.ಭಾವಚಿತ್ರ ಅನಾವರಣಕ್ಕೆ ನನಗೆ ಆಹ್ವಾನ ಬಂದಿಲ್ಲ.ಫೋಟೋ ಅಳವಡಿಕೆಗೆ ಎಲ್ಲಾ ನಾಯಕರ ಜೊತೆ ಚರ್ಚೆ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಈವರೆಗೆ ಯಾವುದೇ ಚರ್ಚೆ ಮಾಡಿಲ್ಲ.ಯಾವ ಫೋಟೋ ಇಡಬೇಕು ಇಡಬಾರದು ಎಂಬುದು ಚರ್ಚಿಸಿಲ್ಲ,ಇದು ಬಿಜೆಪಿ ಅಜೆಂಡಾ ಅಲ್ಲದೆ ಮತ್ತೇನಲ್ಲ, ಎಂದು ಸರ್ಕಾರ ವಿರುದ್ಧ ಕೆಂಡ ಕಾರಿದರು.
ಇದನ್ನೂ ಓದಿ: Janardhana Reddy: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ..?
ಸದನದಲ್ಲಿ ಚರ್ಚಿಸಲು ಹಲವಾರು ವಿಚಾರ ಇವೆ,ಭ್ರಷ್ಟಾಚಾರ, ವೋಟರ್ ಲಿಸ್ಟ್ ಹಗರಣ, ನಿರಾವರಿ ಯೋಜನೆಗಳ ಸಮಸ್ಯೆಗಳು, ಹಿಂದುಳಿದ ವರ್ಗ ಹಾಗೂ ಎಸ್ಟಿ ಎಸ್ಸಿ ವಿದ್ಯಾರ್ಥಿಗಳ ವೇತನ ನಿಲ್ಲಿಸಿರುವುದು ವಿಚಾರಗಳು ಇವೆ.ಇದು ರೈತ ವಿರೋಧಿ ಹಾಗೂ ಜನ ವಿರೋಧಿ ಸರ್ಕಾರ, ಸದನದಲ್ಲಿ ಹೋರಾಟ ನಡೆಸುತ್ತೇವೆ, ಎಂದು ತಿಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.