ಮಾನಸಿಕ ಅಸ್ವಸ್ಥ ಮಹಿಳೆಯ ಕುಟುಂಬಸ್ಥರ ಪತ್ತೆಗೆ ಸಹಕರಿಸಲು ಮನವಿ

ಜಿಲ್ಲೆಯ ಮುತ್ತಗಲ್ಲ ಹೈವೇ ರೋಡಿನಲ್ಲಿ ತೀವ್ರ ಸ್ವರೂಪದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ (Sakhi) ಒನ್ ಸ್ಟಾಪ್ ಸೆಂಟರ್ ತಂಡ ಮತ್ತು ಏರ್ಸ್ 112 ತುರ್ತು ವಾಹನದ ಅಧಿಕಾರಿಗಳಾದ ನೀಲಪ್ಪ ರವರ ಸಹಕಾರದಲ್ಲಿ ಸಂರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ  ದಾಖಲಿಸಲಾಗಿದೆ.

Written by - Zee Kannada News Desk | Last Updated : Mar 26, 2022, 12:25 AM IST
  • ಪ್ರಸ್ತುತ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯಲ್ಲಿ ಇರುತ್ತಾರೆ.
 ಮಾನಸಿಕ ಅಸ್ವಸ್ಥ ಮಹಿಳೆಯ ಕುಟುಂಬಸ್ಥರ ಪತ್ತೆಗೆ ಸಹಕರಿಸಲು ಮನವಿ title=
Photo Courtesy: Facebook

ಕೊಪ್ಪಳ: ಜಿಲ್ಲೆಯ ಮುತ್ತಗಲ್ಲ ಹೈವೇ ರೋಡಿನಲ್ಲಿ ತೀವ್ರ ಸ್ವರೂಪದ ಮಾನಸಿಕ ಅಸ್ವಸ್ಥತೆ ಮಹಿಳೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಖಿ (Sakhi) ಒನ್ ಸ್ಟಾಪ್ ಸೆಂಟರ್ ತಂಡ ಮತ್ತು ಏರ್ಸ್ 112 ತುರ್ತು ವಾಹನದ ಅಧಿಕಾರಿಗಳಾದ ನೀಲಪ್ಪ ರವರ ಸಹಕಾರದಲ್ಲಿ ಸಂರಕ್ಷಣೆ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ  ದಾಖಲಿಸಲಾಗಿದೆ.

ಇದನ್ನೂ ಓದಿ: IPL 2022: ಎಂ.ಎಸ್.ಧೋನಿ CSK ನಾಯಕತ್ವ ತೊರೆಯಲು ಕಾರಣವೇನು..? 

ಮಹಿಳೆಯು ಮಾನಸಿಕ ಅಸ್ವಸ್ಥತೆಯ ಬೈಪೋಲಾರ್ ನ್ಯೂನ್ಯತೆಯಿಂದಾಗಿ ತಮ್ಮ ಕುಟುಂಬಸ್ಥರಿಂದ ದೂರವಾಗಿರಬಹುದಾಗಿದ್ದು, ಪ್ರಸ್ತುತ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಯಲ್ಲಿ ಇರುತ್ತಾರೆ.

ಇದನ್ನೂ ಓದಿ: ನಾನು 10 ಮಹಿಳೆಯರ ಜೊತೆ ದೈಹಿಕ ಸಂಪರ್ಕ ಹೊಂದಿದ್ದೆ ಎಂದ ಈ ನಟ...!

ಅಸ್ವಸ್ಥ ಮಹಿಳೆಯು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ತುರುವಿಹಾಳ ಗ್ರಾಮದ ವಿಳಾಸವನ್ನು ಹೇಳುತ್ತಿದ್ದು, ಹೆಸರು ರೇಣಮ್ಮ ಗಂಡ ಹನುಮಂತಪ್ಪ ಭಜಂತ್ರಿ, ತಾಯಿ ಅಂಬಮ್ಮ, ವಯಸ್ಸು ಅಂದಾಜು 46, ಕನ್ನಡ ಭಾಷೆ ಮಾತನಾಡುತ್ತಿದ್ದು, ಮತ್ತು 5.4ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಹೊಂದಿರುತ್ತಾರೆ. ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ವಾರಸುದಾರರಿದ್ದಲ್ಲಿ, ಸಖಿ- ಆಡಳಿತಾಧಿಕಾರಿಗಳು, ಸಖಿ ಒನ್ ಸ್ಟಾಪ್ ಸೆಂಟರ್ (Sakhi centre), ಜಿಲ್ಲಾ ಆಸ್ಪತ್ರೆ, ಕೊಪ್ಪಳ ಅಥವಾ ಇ-ಮೇಲ್ ವಿಳಾಸ:sakhikpl@gmail.com ಅಥವಾ ದೂ.ಸಂ. 8217646873, 08539–225941 ಕ್ಕೆ ಸಂಪರ್ಕಿಸಬಹುದು ಎಂದು ಸಖಿ-ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News