ರಾಜ್ಯದ ಜನತೆ ಮತ್ತು ಸರ್ಕಾರದ ಸಮಸ್ಯೆ ಪರಿಹಾರಕ್ಕೆ ದೆಹಲಿಯಲ್ಲಿ ಪ್ರತ್ಯೇಕ ಕಾರ್ಯಾಲಯ: ಡಿವಿಎಸ್

ಇನ್ನು 15 ದಿನಗಳಲ್ಲಿ ನನ್ನ ಗೃಹ ಕಚೇರಿಯಲ್ಲೇ ಪ್ರತ್ಯೇಕ ಕಾರ್ಯಾಲಯ ಆರಂಭ- ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

Last Updated : Jun 3, 2019, 04:30 PM IST
ರಾಜ್ಯದ ಜನತೆ ಮತ್ತು ಸರ್ಕಾರದ ಸಮಸ್ಯೆ ಪರಿಹಾರಕ್ಕೆ ದೆಹಲಿಯಲ್ಲಿ ಪ್ರತ್ಯೇಕ ಕಾರ್ಯಾಲಯ: ಡಿವಿಎಸ್ title=
Pic Courtesy: ANI

ಬೆಂಗಳೂರು: ರಾಜ್ಯದ ಜನತೆ ಮತ್ತು ಸರ್ಕಾರದ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತ್ಯೇಕವಾದ ಕಾರ್ಯಾಲಯ ಆರಂಭಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಭರವಸೆ ನೀಡಿದರು.

ಫಿರ್ ಏಕ್ ಬಾರ್ ಮೋದಿ ಸರ್ಕಾರದಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಮೊದಲ ಬಾರಿಗೆ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಡಿ.ವಿ.ಸದಾನಂದಗೌಡರು ಭೇಟಿ ನೀಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಯಾವ ವಿಶ್ವಾಸದಿಂದ ಬಿಜೆಪಿಗೆ ಆಶೀರ್ವಾದ ಮಾಡಿದೀರೋ ಅದಕ್ಕೆ ಯಾವುದೇ ಚ್ಯುತಿಬರದ್ದಂತೆ ನಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಮೋದಿ ಸರ್ಕಾರದಲ್ಲಿ ಈ ಭಾರಿಯೂ ದೇಶ ಮೊದಲು ಎನ್ನುವ ಅಭಿವೃದ್ಧಿ ಕಾರ್ಯಗಳು ಮುಂದುವರೆಯುತ್ತವೆ‌‌. ಮೋದಿ ಸರ್ಕಾರದಲ್ಲಿ ಈ ಭಾರಿಯೂ ದೇಶ ಮೊದಲು ಎನ್ನುವ ಅಭಿವೃದ್ಧಿ ಕಾರ್ಯಗಳು ಮುಂದುವರೆಯುತ್ತವೆ‌‌. ನಾವು 4 ಕೇಂದ್ರ ಸಚಿವರು ಜನರಿಗೆ ಲಭ್ಯವಿರುವಂತೆ ನೋಡಿಕೊಳ್ಳುತ್ತೇವೆ. ರಾಜ್ಯದ ಜನತೆ ಮತ್ತು ಸರ್ಕಾರದ ಸಮಸ್ಯೆ ಪರಿಹಾರಕ್ಕೆ ದೆಹಲಿಯಲ್ಲಿ ಪ್ರತ್ಯೇಕ ಕಾರ್ಯಾಲಯ ಆರಂಭಿಸಲಾಗುವುದು ಎಂದು ತಿಳಿಸಿದರು.

ದೆಹಲಿಯಲ್ಲಿ ಅಧಿಕಾರಿಗಳನ್ನು ನಿಯೋಜಿಸಿ ರಾಜ್ಯದ ಸಮಸ್ಯೆಗೆ ಸ್ಪಂದಿಸುವ ಕಚೇರಿ ಸ್ಥಾಪನೆ ಮಾಡಲಾಗುವುದು. ಇನ್ನು 15 ದಿನಗಳಲ್ಲಿ ನನ್ನ ಗೃಹ ಕಚೇರಿಯಲ್ಲಿಯೇ ಚಿಕ್ಕ ಕಚೇರಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು. 

ತಿಂಗಳಿಗೆ ಒಂದು ದಿನ ನಾಲ್ವರು ಕೇಂದ್ರ ಮಂತ್ರಿಗಳು ಸಭೆ ನಡೆಸುತ್ತೇವೆ. ರಾಜ್ಯ ಮತ್ತು ಕೇಂದ್ರದ ನಡುವಿನ ಕೆಲಸಗಳನ್ನು ಅತ್ಯಂತ ಸುಲಲಿತವಾಗಿ ನಡೆಸಿಕೊಂಡು ಹೋಗುವ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.

Trending News