ಆರ್ ಅಶೋಕ್ -ಸುಧಾಕರ್ ನಡುವೆ ಮುನಿಸು ? ಓವರ್ ಆಕ್ಟಿಂಗ್ ಮಾಡಬಾರದು ಎಂದ ಕಂದಾಯ ಸಚಿವ .!

ಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಮಾಡಬಾರದು. ಅತಿ ಹೆಚ್ಚು ಓವರ್ ಆಕ್ಟಿಂಗ್ ಮಾಡದೆ ಸಾರ್ವಜನಿಕರೊಂದಿಗೆ ಫ್ರೆಂಡ್ಲಿ ಆಗಿ ನಿಲುವು ಕೈಗೊಳ್ಳಬೇಕು, ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.    

Written by - Prashobh Devanahalli | Edited by - Ranjitha R K | Last Updated : Dec 26, 2022, 11:42 AM IST
  • COVID-19 ಆತಂಕ ರಾಜ್ಯದಲ್ಲಿ ಹೆಚ್ಚಾಗಿದೆ
  • ಕೋವಿಡ್ ವಿಚಾರದಲ್ಲಿ ಓವರ್ ಆಕ್ಟಿಂಗ್ ಬೇಡ ಅಶೋಕ್ ಹೇಳಿಕೆ
  • ಸುಧಾಕರ್ ಹೆಸರೆತ್ತದೆಯೇ ಟಾಂಗ್
ಆರ್ ಅಶೋಕ್ -ಸುಧಾಕರ್ ನಡುವೆ ಮುನಿಸು ?  ಓವರ್ ಆಕ್ಟಿಂಗ್ ಮಾಡಬಾರದು ಎಂದ ಕಂದಾಯ ಸಚಿವ .! title=

ಬೆಳಗಾವಿ : COVID-19 ಆತಂಕ ರಾಜ್ಯದಲ್ಲಿ ಹೆಚ್ಚಾಗಿದೆ. ಸುವರ್ಣ ಸೌಧದಲ್ಲಿ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಯಾರು ಕೂಡಾ ಓವರ್ ಆಕ್ಟಿಂಗ್ ಮಾಡಬಾರದು ಎಂದು ಸಚಿವ ಆರ್ ಅಶೋಕ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರ ಹೆಸರನ್ನು ಎತ್ತದೇ  ಅಶೋಕ್ ಈ ಮಾತನ್ನು ಆಡಿದ್ದಾರೆ. 

ಕಂದಾಯ ಸಚಿವ ಆರ್ ಅಶೋಕ್ ಅಧಿವೇಶನಕ್ಕೂ ಮುನ್ನ ಮಾತನಾಡಿ, ಕೋವಿಡ್ ನಿಯಂತ್ರಣದ ಬಗ್ಗೆ ಓವರ್ ಆಕ್ಟಿಂಗ್ ಮಾಡಬಾರದು. ಅತಿ ಹೆಚ್ಚು ಓವರ್ ಆಕ್ಟಿಂಗ್ ಮಾಡದೆ ಸಾರ್ವಜನಿಕರೊಂದಿಗೆ ಫ್ರೆಂಡ್ಲಿ ಆಗಿ ನಿಲುವು ಕೈಗೊಳ್ಳಬೇಕು, ಎಂದು ಹೇಳಿದರು. ಇದಕ್ಕೆ ಯಾರು ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಅಶೋಕ್, ಉತ್ತರ ಕೊಡದೆ ತಡವರಿಸಿದರು. ಕೊನೆಗೆ ನಾನೇ ಓವರ್ ಆಕ್ಟಿಂಗ್ ಮಾಡುತ್ತಿದ್ದೇನೆ ಎಂದು ಜಾರಿಕೊಂಡರು.

ಇದನ್ನೂ ಓದಿ : ತೋಟದ ಮನೆಗಳ ಸಮೀಪವೇ ಮರಿ ಹಾಕಿದ ಚಿರತೆ: ಕ್ಯಾಮರಾ ಅಳವಡಿಸಿದ ಅರಣ್ಯ ಇಲಾಖೆ

ಕೋವಿಡ್ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಸಭೆ:
ಮತ್ತೊಂದೆಡೆ, ಕೋವಿಡ್ ನಿಯಂತ್ರಣ ಕುರಿತು ಸಭೆಯನ್ನು ಇಂದು ಕರೆಯಲಾಗಿದ್ದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕೂಡಾ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಯಲಿದೆ.

ಆಕ್ಸಿಜನ್ ಘಟಕ, ಔಷಧ ದಾಸ್ತಾನು ಬಗ್ಗೆಯೂ ಸಭೆಯಲ್ಲಿ ಚರ್ಚೆ  ನಡೆಯಲಿದೆ. ಹೊಸ ವರ್ಷಕ್ಕೆ ಮಾರ್ಗಸೂಚಿ ನಿಗದಿ ಮಾಡುವ ಬಗ್ಗೆಯೂ ಚರ್ಚೆ  ನಡೆಯಲಿದೆ ಎಂದು ಅಶೋಕ್ ತಿಳಿಸಿದರು.

ಇದನ್ನೂ ಓದಿ : Cabinet meeting : ತುರ್ತು ಸಚಿವ ಸಂಪುಟ ಸಭೆ : ಪಂಚಮಸಾಲಿ - ಒಕ್ಕಲಿಗ ಮೀಸಲಾತಿ ಬಗ್ಗೆ ಮಹತ್ವದ ತೀರ್ಮಾನ

ಯಾರೂ ಪ್ಯಾನಿಕ್ ಆಗುವ ಅಗತ್ಯ ಇಲ್ಲ, ವ್ಯಾಪಾರ, ಶಿಕ್ಷಣ, ಕೈಗಾರಿಕೆಗೆ ತೊಂದರೆ ಆಗಲ್ಲ. ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಯಾರೂ ಭಯ ಬೀಳುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಇನ್ನು ಸಿಎಂ ಜೊತೆ ಚರ್ಚೆ ನಡೆಸಿ ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುದು ಎಂದು ಅಶೋಕ್ ಆಶ್ವಾಸನೆ ನೀಡಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News