ಅಮೆರಿಕಾ ರಾಜಕೀಯದಲ್ಲಿ ಕನ್ನಡಿಗನ ಛಾಪು : ವಿಶ್ವವೇ ನಿರೀಕ್ಷಿಸುತ್ತಿದ್ದ ಚುನಾವಣೆಯಲ್ಲಿ ಗೆದ್ದ ಬೆಳಗಾವಿ ಮಣ್ಣಿನ ಮಗ

ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕಾ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದೆ. ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿದ್ದ ಬೆಳಗಾವಿ ಮಣ್ಣಿನ ಮಗ, ಡೆಮಾಕ್ರಟಿಕ್ ಪಕ್ಷದ ಶ್ರೀನಿವಾಸ್ ಥಾಣೇದಾರ್ ಗೆದ್ದಿದ್ದಾರೆ.

Written by - Krishna N K | Last Updated : Nov 8, 2024, 05:57 PM IST
    • ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕಾ ಚುನಾವಣೆ
    • ನಿನ್ನೆಯಷ್ಟೇ ನಡೆದ ಅಮೆರಿಕಾರದ ಚುನಾವಣೆಗೂ ಬೆಳಗಾವಿ ನಂಟಿದೆ
    • ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಬೆಳಗಾವಿ ಮಣ್ಣಿನ ಮಗ
ಅಮೆರಿಕಾ ರಾಜಕೀಯದಲ್ಲಿ ಕನ್ನಡಿಗನ ಛಾಪು : ವಿಶ್ವವೇ ನಿರೀಕ್ಷಿಸುತ್ತಿದ್ದ ಚುನಾವಣೆಯಲ್ಲಿ ಗೆದ್ದ ಬೆಳಗಾವಿ ಮಣ್ಣಿನ ಮಗ title=

ಬೆಳಗಾವಿ: ರಾಜ್ಯ, ರಾಷ್ಟ್ರ, ವಿದೇಶದಲ್ಲಿ ಕೆಲವು ವಿಶೇಷ ಘಟನಾವಳಿಗಳು ನಡೆದರೆ, ಅದರಲ್ಲಿ ಬೆಳಗಾವಿಯ ಹೆಜ್ಜೆ ಗುರುತುಗಳು ಇದ್ದೆ ಇರುತ್ತವೆ. ಅವು ಸಿಹಿ-ಕಹಿಗಳ ನೆನಪುಗಳ ಹೂರಣವು ಆಗಿರುತ್ತವೆ. ನಿನ್ನೆಯಷ್ಟೇ ನಡೆದ ಅಮೆರಿಕಾರದ ಚುನಾವಣೆಗೂ ಬೆಳಗಾವಿ ನಂಟಿದೆ. ಈ ನಂಟಿನ ಗಂಟನ್ನು ಜೀ ಕನ್ನಡ ನ್ಯೂಸ್  ವಿಶೇಷ ವರದಿ ಬಿಚ್ಚಿಡುತ್ತಿದೆ. 

ಹೌದು, ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕಾ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಾರ್ಟಿ ಭರ್ಜರಿ ಗೆಲುವು ಸಾಧಿಸಿದೆ. ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿದ್ದ ಬೆಳಗಾವಿ ಮಣ್ಣಿನ ಮಗ, ಡೆಮಾಕ್ರಟಿಕ್ ಪಕ್ಷದ ಶ್ರೀನಿವಾಸ್ ಥಾಣೇದಾರ್ ಗೆದ್ದಿದ್ದಾರೆ. ಈ ಮೂಲಕ ಅಮೆರಿಕಾ ರಾಜಕೀಯದಲ್ಲಿ ಕನ್ನಡ ನಾಡಿನ ಛಾಪು ಮೂಡಿಸಿದ್ದಾರೆ. ಸಾಹಿತಿ, ವಿಜ್ಞಾನಿ ಹಾಗೂ ಅಮೆರಿಕದ ಪ್ರಖ್ಯಾತ ಉದ್ಯಮಿಯಾಗಿರುವ ಶ್ರೀನಿವಾಸ ಥಾಣೇದಾರ ಬೆಳಗಾವಿ ಮೂಲದವರು ಎಂಬುವುದು ಹೆಮ್ಮೆಯ ಸಂಗತಿ.

ಇದನ್ನೂ ಓದಿ:ವಾಲ್ಮೀಕಿ ಹಗರಣದಲ್ಲಿ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಾಯ ಆರೋಪ : ಇಡಿ ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದು 

ಶ್ರೀನಿವಾಸ ಥಾಣೇದಾರ್ ಹಿನ್ನೆಲೆ: ಚಿಕ್ಕೋಡಿಯಲ್ಲಿ 1955ರ ಫೆ.22ರಂದು ಶ್ರೀನಿವಾಸ್ ಜನಿಸಿದ್ದಾರೆ. ಅವರ ತಂದೆ ಬೆಳಗಾವಿ ಕೋರ್ಟ್ ನಲ್ಲಿ ನೌಕರಿ ಮಾಡುತ್ತಿದ್ದರು. ಹಾಗಾಗಿ, ಬೆಳಗಾವಿ ನಗರದ ಶಹಾಪುರದ ಮೀರಾಪುರ ಗಲ್ಲಿಯಲ್ಲಿ ವಾಸವಿದ್ದ ಶ್ರೀನಿವಾಸ ಪ್ರಾಥಮಿಕ ‌ಹಾಗೂ ಪ್ರೌಢಶಿಕ್ಷಣವನ್ನ ಇಲ್ಲಿನ‌ ಚಿಂತಾಮಣರಾವ್ ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಪಿಯುಸಿ ಬೆಳಗಾವಿ ಕಾಲೇಜೊಂದರಲ್ಲಿ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲದಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. 

1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀನಿವಾಸ, 1979ರಲ್ಲಿ ಅಮೆರಿಕಕ್ಕೆ ತೆರಳಿದ್ದರು. 1982ರಲ್ಲಿ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಅಲ್ಲೇ ಪಿಹೆಚ್‌ಡಿ ಪದವಿ ಗಳಿಸಿದ್ದಾರೆ. 1982ರಿಂದ 1984ರವೆಗೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು. 1984ರಿಂದ 1990ರವರೆಗೆ ಪಾಲಿಮರ್ ಸಿಂಥೆಸಿಸ್ ಕೆಮಿಸ್ಟ್ ಹಾಗೂ ಪ್ರಾಜೆಕ್ಟ್ ಲೀಡರ್‌ ಆಗಿ ಪೆಟ್ರೊಲೈಟ್ ಕಾರ್ಪೊರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ಸ್ವಂತ ಉದ್ಯಮ ಆರಂಭಿಸಿದ್ದರು.

ಇದನ್ನೂ ಓದಿ:ಗೃಹಲಕ್ಷ್ಮೀ ಯೋಜನೆ ಹಣದಿಂದ ಹೊಲಿಗೆ ಯಂತ್ರ ಖರೀದಿಸಿದ ಮಹಿಳೆ

ಶೇ.68.6ರಷ್ಟು ಮತಗಳನ್ನು ಪಡೆದು ಗೆದ್ದಿರುವ ಶ್ರೀನಿವಾಸ್ ಥಾಣೇದಾರ್ ಮಿಚಿಗನ್ ರಾಜ್ಯದಿಂದ ಎರಡನೇ ಬಾರಿ ಅಮೆರಿಕಾ ಸಂಸತ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅವರು ಕಲಿತ ಚಿಂತಾಮಣರಾವ್ ಶಾಲೆಯ ಈಗಿನ ಶಿಕ್ಷಕರು, ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಜೀ ಕನ್ನಡ ನ್ಯೂಸ್ ಜೊತೆಗೆ ಮಾತನಾಡಿದ ಇಂಗ್ಲೀಷ ಶಿಕ್ಷಕ ಅಷ್ಟಗಿ, ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ ಇಂದು ಅಮೆರಿಕಾ ಚುನಾವಣೆಯಲ್ಲಿ ಗೆದ್ದಿದ್ದು ನಮಗೆ ಹೆಮ್ಮೆ ಮತ್ತು ಖುಷಿಯ ವಿಚಾರ. ಬೆಳಗಾವಿಗೆ ಬಂದಾಗ ಹಿಂದೆ ಒಮ್ಮೆ ಶಾಲೆಗೆ ಅವರು ಭೇಟಿ ನೀಡಿದ್ದರು. ಇನ್ನು ಚಿಂತಾಮಣರಾವ್ ಶಾಲೆಯಲ್ಲಿ ಕಲಿತ ಅನೇಕರು ಶಾಸಕ, ವಿಜ್ಞಾನಿ ಸೇರಿ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಮೀರಾಪುರ ಗಲ್ಲಿಯಲ್ಲಿ ಶ್ರೀನಿವಾಸ ಥಾಣೇದಾರ್ ಅವರ ಸ್ವಂತ ಮನೆಯಿತ್ತು. ಅವರು ಮುಂಬೈಗೆ ನೆಲೆಸಿದ ಬಳಿಕ ಈ ಮನೆಯನ್ನು ಮಾರಾಟ ಮಾಡಿದ್ದು, ಸದ್ಯ ಈ ಜಾಗದಲ್ಲಿ ಅಪಾರ್ಟಮೆಂಟ್ ತಲೆ ಎತ್ತಿದೆ. ಇನ್ನು ಶ್ರೀನಿವಾಸ್ ಅವರ ಜೊತೆ ಶಾಲೆಯಲ್ಲಿ ಸಿನಿಯರ್ ಆಗಿದ್ದ ಉಲ್ಲಾಸ ಮೆಹಂದ ಮಾತನಾಡಿ, ಶ್ರೀನಿವಾಸ ಶಾಲೆಯಲ್ಲಿ ತುಂಬಾ ಜಾಣನಾಗಿದ್ದ, ಅವರದ್ದು ಮಧ್ಯಮ ವರ್ಗದ ಕುಟುಂಬ ಆಗಿತ್ತು. ನಾವು ಜೊತೆಗೆ ಆಟ ಆಡಿದ್ದೇವು. ಇಷ್ಟು ದೊಡ್ಡ ಹುದ್ದೆ ಏರುತ್ತಾರೆ ಅಂತಾ ಅಂದುಕೊಂಡಿರಲಿಲ್ಲ. ಆದರೆ, ಈಗ ದೊಡ್ಡ ಸಾಧನೆ ಮಾಡಿದ್ದು ಕೇಳಿ ತುಂಬಾ ಸಂತೋಷ ಆಗಿದೆ ಎಂದರು.

ಒಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತ ಬೆಳಗಾವಿಯ ಹೆಮ್ಮೆಯ ಸುಪುತ್ರ ಇಂದು ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾದಲ್ಲಿ ಅಧಿಕಾರ ಚಲಾಯಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News