ಬೆಂಗಳೂರು: ಶನಿವಾರದಂದು ಡಾ. ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೃದಯಾಘಾತದಿಂದ ಕೊನೆಯುಸಿರೆಳೆದ ಹಿನ್ನೆಲೆಯಲ್ಲಿ ಈಗ ಮಠದ 20ನೇ ಪೀಠಾಧಿಪತಿಯಾಗಿ ಶ್ರೀ ಮ.ನಿ.ಪ್ರ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಮಹಾಸ್ವಾಮಿ ಅವರು ಆಯ್ಕೆ ಮಾಡಲಾಗಿದೆ.
15 ವರ್ಷಗಳ ಹಿಂದೆ ಶ್ರೀಗಳು ಬರೆದಿದ್ದ ವಿಲ್ ನಲ್ಲಿ ತಮ್ಮ ಬಳಿಕ ಮಠದ ಉತ್ತರಾಧಿಕಾರಿಯಾಗಿ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಮಹಾಸ್ವಾಮೀಜಿ ಅವರನ್ನೇ ನೇಮಿಸಬೇಕೆಂದು ಬರೆದಿದ್ದರು ಈ ಹಿನ್ನಲೆಯಲ್ಲಿ ಈಗ ಅವರನ್ನು ಈಗ ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ.
ಎಲ್ಲ ಮಠಾಧೀಶರು ಹಾಗೂ ಸಮಾಜದ ವಿವಿಧ ಗಣ್ಯರು ಪತ್ರಿಕಾಗೋಷ್ಠಿ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.