ವಿಪಕ್ಷಗಳ ಪಟ್ಟಿಗೆ ಮಣಿದ ಸರ್ಕಾರ: ಪಿಎಸ್ಐ ಅಕ್ರಮ ವಿಚಾರ ಚರ್ಚೆಗೆ ಅಸ್ತು

ಪಿಎಸ್ಐ ನೇಮಕಾತಿ ಅಕ್ರಮ ವಿಚಾರ ನಿಳುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿತ್ತು.  ತನಿಖೆ ಹಂತದಲ್ಲಿ ಈ ಪ್ರಕರಣ ಇದೆ. ಕೋರ್ಟ್ ನಲ್ಲಿ ಕೇಸ್ ಇರುವಾಗ ಚರ್ಚೆ ಮಾಡಲು ಬರಲ್ಲ. ಬೇರೆ ರೂಪದ ಅಡಿಯಲ್ಲಿ ಚರ್ಚೆ ಮಾಡೋಣ ಎಂದು ಸ್ಪೀಕರ್ ತಿರಸ್ಕರಿದ್ದರು.

Written by - Prashobh Devanahalli | Edited by - Yashaswini V | Last Updated : Sep 15, 2022, 03:53 PM IST
  • ಪಿಎಸ್ಐ ನೇಮಕಾತಿ ಅಕ್ರಮ ವಿಚಾರ ನಿಳುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಮನವಿ
  • ಕೋರ್ಟ್ ನಲ್ಲಿ ಕೇಸ್ ಇರುವಾಗ ಚರ್ಚೆ ಮಾಡಲು ಬರಲ್ಲ ಎಂದಿದ್ದ ಸ್ಪೀಕರ್
  • ಸ್ಪೀಕರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷಗಳ ಪಟ್ಟಿಗೆ ಮಣಿದ ಸರ್ಕಾರ: ಪಿಎಸ್ಐ ಅಕ್ರಮ ವಿಚಾರ ಚರ್ಚೆಗೆ ಅಸ್ತು title=
PSI Recruitment

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪಿಎಸ್ಐ ನೇಮಕಾತಿ ಹಗರಣ ವಿಷಯವನ್ನ ನಿಯಮ 60ರ ಅಡಿಯಲ್ಲಿ ಚರ್ಚೆ ನಡೆಸಲು ಮನವಿ ಮಾಡಿದ್ದ ಕಾಂಗ್ರೆಸ್, ಗದ್ದಲದ ನಂತರ ನಿಯಮ‌ 60ರ ಬದಲು ನಿಯಮ‌ 69ರಡಿ ಚರ್ಚೆಗೆ ಕೊಡಲು ಸಮ್ಮತಿಸಿದರು.

ಪಿಎಸ್ಐ ನೇಮಕಾತಿ ಅಕ್ರಮ ವಿಚಾರ ನಿಳುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿತ್ತು.  ತನಿಖೆ ಹಂತದಲ್ಲಿ ಈ ಪ್ರಕರಣ ಇದೆ. ಕೋರ್ಟ್ ನಲ್ಲಿ ಕೇಸ್ ಇರುವಾಗ ಚರ್ಚೆ ಮಾಡಲು ಬರಲ್ಲ. ಬೇರೆ ರೂಪದ ಅಡಿಯಲ್ಲಿ ಚರ್ಚೆ ಮಾಡೋಣ ಎಂದು ಸ್ಪೀಕರ್ ತಿರಸ್ಕರಿದ್ದರು.

ಇದನ್ನೂ ಓದಿ- Karnataka Lokayukta : ಅಧಿಕೃತ ಎಸಿಬಿ ರದ್ದು ಹಿನ್ನೆಲೆ : ಇಂದು ಎಲ್ಲ ಕಡತಗಳು ಲೋಕಾಯುಕ್ತಕ್ಕೆ ವರ್ಗಾವಣೆ

ಸ್ಪೀಕರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಲವು ಪ್ರಕರಣ ಕೋರ್ಟ್ ನಲ್ಲಿ ಇತ್ತು, ಆಗಲೂ ಕೂಡ ಸದನದಲ್ಲಿ ಚರ್ಚೆ ಮಾಡಿದ್ದೇವೆ. ಪತ್ರಿಕೆ ಮತ್ತು ಮಾಧ್ಯಮದದಲ್ಲಿ ಚರ್ಚೆಯಾಗುತ್ತಿದೆ. ಸಾರ್ವಜನಿಕರು ಏಳು ತಿಂಗಳಿಂದ  ಮಾತನಾಡುತ್ತಿದ್ದಾರೆ. ಹೀಗಾಗಿ ಸದನದಲ್ಲಿ ಚರ್ಚೆ ಮಾಡಲೇಬೇಕು ಎಂದು ಅಗ್ರಹಿಸಿದರು.

ಮಧ್ಯಪ್ರವೇಶಿಸಿ ಮಾತಾನ್ನಾಡಿದ ಪ್ರಿಯಾಂಕ್ ಖರ್ಗೆ, ಆಯ್ಕೆ ಪ್ರಕರಣ ಕೇಸ್ ಎಲ್ಲೂ ಇಲ್ಲ. ಒಂದುವರೆ ಡಜನ್ ಪೊಲೀಸ್ ಜೈಲಿಗೆ ಹೋಗಿದ್ದಾರೆ. ಇಂತಹ ಪ್ರಕರಣ ಚರ್ಚೆ ಬೇಡ ಅಂದ್ರೆ ಹೇಗೆ ಎಂದರು.

ಇದನ್ನೂ ಓದಿ- ಬಾಲ ಬಿಚ್ಚೋರಿಗೆ ಬುಲ್ಡೋಜರ್ ದಾಳಿಯ ಎಚ್ಚರಿಕೆ ಕೊಟ್ಟ ಸಿಟಿ ರವಿ..!

ಕೆಲ ನಿಮಿಷಗಳು ಸದನದಲ್ಲಿ ಗದ್ದಲ ಸೃಷ್ಟಿ ಆದ ನಂತರ, ಸ್ಪೀಕರ್ ವಿಪಕ್ಷ  ಮತ್ತು ಸರ್ಕಾರದ ವಾದ ಆಲಿಸಿ, ನಿಯಮ 69 ರ ಅಡಿಯಲ್ಲಿ ಚರ್ಚೆಗೆ ಅವಕಾಶ ನೀಡಿದರು. ಸದ್ಯ ಮಳೆ ಚರ್ಚೆ ನಡೆಯುತ್ತಿದೆ. ಅದೆಲ್ಲ ಮುಗಿದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News