ಬೆಂಗಳೂರು : ಗೌರಿ ಗಣೇಶ ಹಬ್ಬದ ಹಿನ್ನೆಲೆ ಕೆಎಸ್ಆರ್ಟಿಸಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ನಿಗಮ ತಿಳಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ 500 ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ ಮೆಜೆಸ್ಟಿಕ್ ಸೇರಿ ನಗರದ ವಿವಿಧ ಬಸ್ ನಿಲ್ದಾಣಗಳಿಂದ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ 29 ಮತ್ತು 30ರಂದು ಹೆಚ್ಚುವರಿ ಬಸ್ ಗಳು ಪ್ರಯಾಣಿಕರ ಅನುಕೂಲಕ್ಕೆ ಲಭ್ಯ ಇವೆ. ಪ್ರಯಾಣಿಕರು ಬೆಂಗಳೂರಿಗೆ ವಾಪಸ್ ಬರಲು ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಕೂಡ ಮಾಡಲಾಗಿದೆ.
ಇದನ್ನೂ ಓದಿ : 'ಈದ್ಗಾ ಮೈದಾನವು ಆಟದ ಮೈದಾನವಾಗಿ ಮಾತ್ರ ಬಳಸಲು ಹೈಕೋರ್ಟ್ ಆದೇಶ'
ಮೆಜೆಸ್ಟಿಕ್, ಮೈಸೂರು ರಸ್ತೆ, ಸ್ಯಾಟಲೈಟ್, ಶಾಂತಿನಗರ, ಗೊರಗುಂಟೆಪಾಳ್ಯ ಭಾಗದಲ್ಲಿ ಬಸ್ ಗಳು ಪ್ರಯಾಣಿಕರಿಗೆ ಸಿಗಲಿವೆ. ಅಲ್ಲದೆ, ಧರ್ಮಸ್ಥಳ, ಶಿವಮೊಗ್ಗ, ಹಾಸನ, ಮಂಗಳೂರು, ಚಿಕ್ಕಮಗಳೂರು ಬಸ್ ಗಳು ಇದರಲ್ಲಿ ಸೇರಿವೆ. ಉತ್ತರ ಕರ್ನಾಟಕ ಭಾಗದ ಎಲ್ಲಾ ಕಡೆ ಬಸ್ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ಆರ್ಟಿಸಿಯಿಂದ ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ ಪ್ರಾಯಾಣಿಕರಿಗೆ ಶೇ.5 ರಷ್ಟು ರಿಯಾಯಿತಿ ಕೂಡ ನೀಡಲಾಗಿದೆ. ಬರುವ ಮತ್ತು ಹೋಗುವ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ ಶೇ.10 ರಷ್ಟು ರಿಯಾಯಿತಿ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ https://ksrtc.in/oprs-web/ ವೆಬ್ ಸೈಟ್ ಅಲ್ಲಿ ಪರಿಶೀಲಿಸಬಹುದು ಎಂದು ಕೆಎಸ್ಆರ್ಟಿಸಿ ನಿಗಮ ತಿಳಿಸಿದೆ.
ಇದನ್ನೂ ಓದಿ : Bangalore Police : ನಾಗ್ಪುರದಿಂದ ಬೆಂಗಳೂರಿಗೆ ಕಂಟ್ರಿಮೇಡ್ ಪಿಸ್ತೂಲ್ ಡೆಲಿವರಿ ನೀಡಲು ಬಂದ್ದಿದ್ದ ಡೀಲರ್ ಅಂದರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.