close

News WrapGet Handpicked Stories from our editors directly to your mailbox

ಮಾರ್ಚ್ 18ಕ್ಕೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ

ರಾಜ್ಯಾದ್ಯಂತ ನಾನು ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಈ ಬಗ್ಗೆ ಯಾರೂ ಕಿವಿಕೊಡಬೇಡಿ ಎಂದು ಸುಮಲತಾ ಹೇಳಿದರು.

Updated: Mar 11, 2019 , 03:36 PM IST
ಮಾರ್ಚ್ 18ಕ್ಕೆ ನನ್ನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ

ಮಂಡ್ಯ: ರಾಜಕೀಯದ ಬಗ್ಗೆ ತಮ್ಮ ಮುಂದಿನ ನಿರ್ಧಾರವನ್ನು ಮಾರ್ಚ್ 18ರಂದು ಪ್ರಕಟಿಸುವುದಾಗಿ ಸುಮಲತಾ ಅಂಬರೀಶ್ ಹೇಳಿದ್ದಾರೆ. 

ಮಂಡ್ಯದ ಬೆಳ್ಳೂರು ಕ್ರಾಸ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾಗ್ರೆಸ್ ಮುಖಂಡರು ನನ್ನ ಮೇಲೆ ಯಾವುದೇ ಒತ್ತಡ ಹೇರಿಲ್ಲ. ಎಲ್ಲರೂ ಗೌರವದಿಂದಲೇ ನಡೆಸಿಕೊಂಡಿದ್ದಾರೆ. ಆದರೆ, ಮಂಡ್ಯದಿಂದ ಸ್ಪರ್ಧೆ ಕಷ್ಟ, ಬೇರೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೆಲವರು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ಸುಮಲತಾ ಹೇಳಿದರು.

ಅಲ್ಲದೆ, ರಾಜ್ಯಾದ್ಯಂತ ನಾನು ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಕಾರಣ ಬಿಜೆಪಿ ಸೇರುತ್ತಿದ್ದೇನೆ ಎಂಬ ವದಂತಿ ಎಲ್ಲೆಡೆ ಹಬ್ಬಿದೆ. ಈ ಬಗ್ಗೆ ಯಾರೂ ಕಿವಿಕೊಡಬೇಡಿ. ನಾನಾಗಿಯೇ ಯಾವುದೇ ವಿಚಾರವನ್ನು ತಿಳಿಸುವವರೆಗೂ ವದಂತಿಗಳನ್ನು ನಂಬಬೇಡಿ ಎಂದು ಇದೇ ಸಂದರ್ಭದಲ್ಲಿ ಸುಮಲತಾ ಮನವಿ ಮಾಡಿದರು.

ಮುಂದುವರೆದು ಮಾತನಾಡುತ್ತಾ, ಕನ್ನಡ ಚಿತ್ರರಂಗದ ಬೆಂಬಲ ನನಗಿದೆ. ಇದಕ್ಕೆ ಅಂಬರೀಶ್ ಅವರ ಮೇಲೆ ಚಿತ್ರರಂಗ ಇಟ್ಟಿದ್ದ ಪ್ರೀತಿಯೇ ಸಾಕ್ಷಿ. ದರ್ಶನ್ ನನ್ನ ಪರ ಪ್ರಚಾರಕ್ಕೆ ಬರುತ್ತಾರೆ. ಅವರು ನನ್ನ ದೊಡ್ಡ ಮಗ ಇದ್ದಂತೆ ಎಂದು ಹೇಳಿದ ಸುಮಲತಾ ಉಳಿದ ನಟರ ಬಗ್ಗೆ ಪಟ್ಟಿ ನೀಡಲು ನಿರಾಕರಿಸಿದರು.