ಗ್ರಹಣ ನಿಮಿತ್ತ ರಾಜ್ಯದ ಯಾವ ದೇವಾಲಯದಲ್ಲಿ ಏನು ವಿಶೇಷ ? ಇಲ್ಲಿದೆ ಸಂಪೂರ್ಣ ವರದಿ

ಇಂದು ಕೇತು ಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳ‌ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಯಾವಾಗ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ? ದೇವಸ್ಥಾನಗಳಲ್ಲಿ ಏನೆಲ್ಲ ವಿಶೇಷ ಪೂಜೆಗಳಿವೆ? ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.   

Written by - Ranjitha R K | Last Updated : Oct 25, 2022, 09:38 AM IST
  • ದೇಶಾದ್ಯಂತ ಬೆಳಕಿನ ಹಬ್ಬದ ಸಡಗರ
  • 7 ವರ್ಷಗಳ ಬಳಿಕ ದೀಪವಾಳಿ ದಿನ ಗ್ರಹಣ
  • ಗ್ರಹಣ ಕಾಲದಲ್ಲಿ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ
ಗ್ರಹಣ ನಿಮಿತ್ತ ರಾಜ್ಯದ ಯಾವ ದೇವಾಲಯದಲ್ಲಿ ಏನು ವಿಶೇಷ ? ಇಲ್ಲಿದೆ ಸಂಪೂರ್ಣ ವರದಿ  title=
Suryagrahana pooja in temple (file photo)

ಬೆಂಗಳೂರು : ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಮನೆ ಮಾಡಿದೆ. ಆದರೆ ಈ ಬಾರಿ ದೀಪಾವಳಿಗೆ ಗ್ರಹಣದ ಕಾರ್ಮೋಡ ಆವರಿಸಿದೆ. 27 ವರ್ಷಗಳ ಬಳಿಕ ದೀಪವಾಳಿ ದಿನ ಗ್ರಹಣ ಗೋಚರಿಸುತ್ತಿದೆ ಎಂದು ಹೇಳಲಾಗಿದೆ. ಗ್ರಹಣ ಎನ್ನುವುದು ವಿಜ್ಞಾನ ಮತ್ತು ಜ್ಯೋತಿಷ್ಯ ಎರಡರಲ್ಲೂ ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಹಣ ಕಾಲದಲ್ಲಿ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಈ ಸಮಯದಲ್ಲಿ ಯಾವುದೇ ರೀತಿಯ ಪೂಜೆ, ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. 

ಇಂದು ಕೇತು ಗ್ರಸ್ತ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ದೇವಸ್ಥಾನಗಳ‌ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ. ಗ್ರಹಣ ಇರುವ ಕಾರಣ ದೇವಸ್ಥಾನಗಳು ಯಾವ ಸಮಯದಲ್ಲಿ ತೆರೆದಿರುತ್ತದೆ? ಯಾವಾಗ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ? ದೇವಸ್ಥಾನಗಳಲ್ಲಿ ಏನೆಲ್ಲ ವಿಶೇಷ ಪೂಜೆಗಳಿವೆ? ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : ಭಾರತದ ಈ ನಗರದಿಂದ ಪ್ರಾರಂಭವಾಗುತ್ತದೆ ಸೂರ್ಯಗ್ರಹಣ.! ವೀಕ್ಷಿಸುವಾಗ ನೆನಪಿನಲ್ಲಿರಲಿ ಈ ಅಂಶಗಳು

ಬೆಂಗಳೂರಿನ ಪ್ರಮುಖ ದೇವಸ್ಥಾನಗಳ‌ ವಿಶೇಷತೆ ಏನು..?
ಕಾಡುಮಲ್ಲೇಶ್ವರ ದೇವಸ್ಥಾನ- ಮಲ್ಲೇಶ್ವರ : ಸೂರ್ಯಗ್ರಹಣ ನಿಮಿತ್ತ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ದೇವಸ್ಥಾನಡ ಬಾಗಿಲು ತೆರೆದಿರುತ್ತದೆ. 10 ಯಿಂದ ದೇವಸ್ಥಾನ  ಬಾಗಿಲು ಮುಚ್ಚಲಾಗುವುದು. ಶಿವನಿಗೆ ದರ್ಬಾಬಂಧನ ಮಾಡಿ ದೇವಸ್ಥಾನ  ಬಾಗಿಲು   ಹಾಕಲಾಗುವುದು. ಸೂರ್ಯಗ್ರಹಣದ ನಂತರ ಸಂಜೆ 6 ಗಂಟೆಯಿಂದ ದೇವಸ್ಥಾನದ ಶುದ್ದಿ ಕಾರ್ಯ  ನಡೆಯಲಿದೆ. ಸಂಜೆ 7 ಗಂಟೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ  ಅವಕಾಶ ಮಾಡಿಕೊಡಲಾಗುವುದು. 

ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ - ಮಲ್ಲೇಶ್ವರ : ಗ್ರಹಣದ ಪ್ರಯುಕ್ತ ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ ಆರಂಭವಾಗಿದ್ದು,  ಬೆಳಗ್ಗೆ 8 ಗಂಟೆಗೆ ಲಕ್ಷ್ಮೀ ನರಸಿಂಹ ಸ್ವಾಮಿ ಮಹಾಮಂಗಳಾರತಿ ನೆರೆವೇರಿಸಲಾಗಿದೆ. ಬೆಳಿಗ್ಗೆ 10 ಗಂಟೆ ದೇವಸ್ಥಾನಡ ಬಾಗಿಲು ಮುಚ್ಚಲಾಗುವುದು. ಸಂಜೆ ಗ್ರಹಣ ಕೊನೆಯಾದ ನಂತರ  ಶುದ್ದಿ ಕಾರ್ಯ ಆರಂಭಿಸಿ, 7.30 ಕ್ಕೆ ಭಕ್ತಾಧಿಗಳಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಮಾತ್ರವಲ್ಲ, ಗ್ರಹಣ ಮುಗಿದ ನಂತರ 26 ರಂದು ಗ್ರಹಣ ನಿಮಿತ್ತ ಬೆಳಗ್ಗೆ 10 ಗಂಟೆಗೆ ಗ್ರಹಣ ಶಾಂತಿ ಹೋಮ ನಡೆಯಲಿದೆ. ಹೋಮದಲ್ಲಿ ಗ್ರಹಣ ದೋಷವಿರುವವರು ಶಾಂತಿ ಮಾಡಿಸಬಹುದು. 

ಇದನ್ನೂ ಓದಿ : ಸೂರ್ಯ ಗ್ರಹಣದಲ್ಲಿ ಆಹಾರದಲ್ಲಿ ಹಾಕಲು ತುಳಸಿ ಕೀಳುವುದು 'ಮಹಾ ಪಾಪ'

ಗವಿಗಂಗಾಧರ ದೇವಸ್ಥಾನ - ಚಾಮರಾಜಪೇಟೆ : ಬೆಳಗ್ಗೆ 6 ಗಂಟೆಯಿಂದ  8 ಗಂಟೆಯವರೆಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 8.30ಕ್ಕೆ ದರ್ಬಾಬಂಧನ ಮಾಡಿ ದೇವಸ್ಥಾನದ ಬಾಗಿಲು ಹಾಕಲಾಗಿದೆ. ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ದೋಷವಿರುವ ನಕ್ಷತ್ರದವರಿಗೆ ದೋಷಪರಿಹಾರ ಹೋಮ ನಡೆಯಲಿದೆ. ಗ್ರಹಣ ಮೋಕ್ಷಕಾಲದ ನಂತರ 6.45ರಿಂದ ದೇವಸ್ಥಾನ ಶುದ್ದಿ ಕಾರ್ಯ ಆರಂಭವಾಗಲಿದೆ. ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆಯವರಗೆ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶವಿದೆ. 

ಬಂಡಿ ಮಹಾಕಾಳಿ ದೇವಸ್ಥಾನ- ಚಾಮರಾಜಪೇಟೆ : ಅಮಾವಾಸ್ಯೆ ದಿನ  ಬಾಗಿಲು ತೆರೆದಿರುವ ನಗರದ ಏಕೈಕ ದೇವಸ್ಥಾನ ಇದು. ಎಂದಿನಂತೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 10 ಯವರೆಗೆ ದೇವಸ್ಥಾನದ ಬಾಗಿಲು ತೆರೆದಿರಲಿದೆ. ಮಧ್ಯಾಹ್ನ 2 ಗಂಟೆಯ ನಂತರ  ಗಣಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಲಿದೆ. ಗ್ರಹಣದ ನಂತರ ದೇವಸ್ಥಾನ ಹಾಗೂ ದೇವರಿಗೆ ದರ್ಬೆಯಿಂದ ನೀರನ್ನ ಪ್ರೋಕ್ಷಣೆ ಮಾಡಿ ಹೋಮ ನಡೆಸಲಾಗುವುದು. ನಂತರ ದೇವರಿಗೆ ಕಳಾಷಾಭಿಷೇಕ ಮಾಡಿ, ಪಂಚಾಮೃತಭಿಷೇಕ ನೆರವೇರಿಸಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ದೇವಿಯ ದರ್ಶನಕ್ಕೆ ಬಂದ ಭಕ್ತಾಧಿಗಳಿಗೆ ಅಭಿಷೇಕದ ನೀರಿನ ಪ್ರೋಕ್ಷಣೆಯನ್ನು ಕೂಡಾ ಮಾಡಲಾಗುವುದು. 

ಇದನ್ನೂ ಓದಿ : Surya Grahan 2022: ಒಂದೇ ಮಾಸದಲ್ಲಿ 2 ಗ್ರಹಣ, ಮಹಾಭಾರತ ಯುದ್ಧದಂತಹ ಸ್ಥಿತಿ ನಿರ್ಮಾಣ...ಎಚ್ಚರ!

ಗಾಳಿ ಆಂಜನೇಯ ದೇವಸ್ಥಾನ- ಮೈಸೂರು ರಸ್ತೆ : ಬೆಳಗ್ಗೆ 6 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದಿದ್ದು, ಮಧ್ಯಾಹ್ನ 12 ಗಂಟೆಗೆ  ಬಾಗಿಲು ಮುಚ್ಚಲಿದೆ.  ಸಂಜೆ 6 ಗಂಟೆಯ ನಂತರ  ದೇವಸ್ಥಾನ ಶುದ್ದಿಕಾರ್ಯ ಆರಂಭವಾಗಲಿದೆ. 7 ಗಂಟೆ ಬಳಿಕ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. 

ಬನಶಂಕರಿ ಅಮ್ಮನವರ ದೇವಸ್ಥಾನ- ಬನಶಂಕರಿ : ಬೆಳಗ್ಗೆ ಎಂದಿನಂತೆ ದೇವಸ್ಥಾನದಲ್ಲಿ ಪೂಜಾ ಕಾರ್ಯ ಆರಂಭವಾಗಿದೆ. ಬೆಳಗ್ಗೆ 10 ಗಂಟೆಗೆ ದೇವಸ್ಥಾನಡ ಬಾಗಿಲು ಹಾಕಲಾಗುವುದು. ಗ್ರಹಣ ನಿಮಿತ್ತ ದೇವಸ್ಥಾನದಲ್ಲಿ ಅನ್ನದಾಸೋಹ ಇರುವುದಿಲ್ಲ. ಗ್ರಹಣ ಮುಗಿದ ಬಳಿಕ ದೇವಸ್ಥಾನ ಶುದ್ದಿಕಾರ್ಯ ಆರಂಭವಾಗಲಿದ್ದು, ಸಂಜೆ 7.30 ರ ನಂತರ ದೇವರ ದರ್ಶನಕ್ಕ ಅನುವು ಮಾಡಿಕೊಳ್ಳಲಾಗುವುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News