ಅರಸೀಕೆರೆಯಲ್ಲಿ ಸ್ವಾಮೀಜಿಗಳ ರಾಶಿ ರಾಶಿ ಪಾದುಕೆ, ದಂಡ : ಎಲ್ಲಿಂದ ಬಂತು ಎನ್ನುವುದೇ ವಿಚಿತ್ರ

ಮಠದ ಸ್ವಾಮೀಜಿಗಳು ಧರಿಸುವ ಹನ್ನೆರಡು ಜೊತೆ ಪಾದುಕೆಗಳು ಹಾಗೂ ಕೈಯಲ್ಲಿ ಹಿಡಿಯುವ ದಂಡಗಳನ್ನು ಜೋಡಿಸಿ ಇಡಲಾಗಿದೆ. ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಬಳಿ ರೈತರ ಜಮೀನಿನ ಪಕ್ಕದಲ್ಲಿರುವ ಹುಲ್ಲುಹಾಸಿನ ಜಾಗದಲ್ಲಿ ಈ ದೃಶ್ಯ ಕಂಡು ಬಂದಿದೆ.    

Written by - Ranjitha R K | Last Updated : Oct 6, 2023, 11:49 AM IST
  • ಜೋಡಿಸಿ ಇಟ್ಟಿರುವ ಪಾದುಕೆ- ದಂಡ
  • ಯಾರದ್ದು ಈ ಪಾದುಕೆ- ದಂಡ
  • ಆತಂಕದಲ್ಲಿ ಹೊನ್ನಶೆಟ್ಟಿಹಳ್ಳಿ ಜನತೆ
ಅರಸೀಕೆರೆಯಲ್ಲಿ ಸ್ವಾಮೀಜಿಗಳ ರಾಶಿ ರಾಶಿ ಪಾದುಕೆ, ದಂಡ : ಎಲ್ಲಿಂದ ಬಂತು ಎನ್ನುವುದೇ ವಿಚಿತ್ರ   title=

ಹಾಸನ  : ಅರಸೀಕೆರೆ ತಾಲೂಕಿನ, ಹೊನ್ನಶೆಟ್ಟಿಹಳ್ಳಿ ಗ್ರಾಮದ ಬಳಿ ಸಾಧುಸಂತರು ಹಾಗೂ  ಸ್ವಾಮೀಜಿಗಳು ಧರಿಸುವ ಮರದ ಪಾದುಕೆ ಹಾಗೂ ದಂಡಗಳು ಪತ್ತೆಯಾಗಿವೆ. ಇಷ್ಟೊಂದು ಸಂಖ್ಯೆಯಲ್ಲಿ ಪಾದುಕೆಗಳು ಒಂದೆಡೆ ಸಿಕ್ಕಿರುವುದು ಪೊಲೀಸರಿಗೂ ದೊಡ್ಡ ತಲೆ ನೋವಾಗಿದೆ. ದೋಷ ಪರಿಹಾರ, ಮಾಟ-ಮಂತ್ರ, ಸಿನಿಮಾ ಅಥವಾ ಧಾರಾವಾಹಿ ಚಿತ್ರೀಕರಣಕ್ಕಾಗಿ ಹೀಗೆ ಮಾಡಿರಬಹುದೇನೋ ಎನ್ನುವ ಶಂಕೆ ಕೂಡಾ ಒಂದೆಡೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

ಜೋಡಿಸಿ  ಇಟ್ಟಿರುವ ಪಾದುಕೆ- ದಂಡ : 
ಇಲ್ಲಿ  ಮಠದ ಸ್ವಾಮೀಜಿಗಳು ಧರಿಸುವ ಹನ್ನೆರಡು ಜೊತೆ ಪಾದುಕೆಗಳು ಹಾಗೂ ಕೈಯಲ್ಲಿ ಹಿಡಿಯುವ ದಂಡಗಳನ್ನು ಜೋಡಿಸಿ ಇಡಲಾಗಿದೆ. ಅರಸೀಕೆರೆ ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಬಳಿ ರೈತರ ಜಮೀನಿನ ಪಕ್ಕದಲ್ಲಿರುವ ಹುಲ್ಲುಹಾಸಿನ ಜಾಗದಲ್ಲಿ ಈ ದೃಶ್ಯ ಕಂಡು ಬಂದಿದೆ.  ರೈತರೊಬ್ಬರು ತಮ್ಮ ಜಮೀನಿನ ಬಳಿ ಹೋದ ವೇಳೆ ಪಾದುಕೆ ಹಾಗೂ ದಂಡಗಳನ್ನು ಈ ರೀತಿಯಾಗಿ ಜೋಡಿಸಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಇದಾದ ಬಳಿಕ ಯಾರಾದರೂ ಸ್ವಾಮೀಜಿಗಳು ಇಲ್ಲಿ ಬಂದಿದ್ದಾರೆಯೇ ಎಂದು ಸುತ್ತಲೂ ಹುಡುಕಾಟ ಕೂಡಾ ನಡೆಸಲಾಗಿದೆ.

ಇದನ್ನೂ ಓದಿ : Cauvery Water Dispute: 10 ಸಾವಿರ ಕ್ಯೂಸೆಕ್ಸ್ ಒಳಹರಿವು ಇದೆ ಎಂದು ಏಕೆ ಹೇಳ್ಬೇಕಿತ್ತು?- ಬೊಮ್ಮಾಯಿ

ಯಾರದ್ದು ಈ ಪಾದುಕೆ- ದಂಡ ? : 
ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ಮಾಟ-ಮಂತ್ರ, ವಾಮಾಚಾರ, ದೋಷ ಪರಿಹಾರಕ್ಕಾಗಿ ಈ ರೀತಿ ಮಾಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು. ಆದರೆ ಪಾದುಕೆಗಳಿಗೆ ಯಾವುದೇ ಪೂಜೆ, ಪುನಸ್ಕಾರ ಮಾಡಿಲ್ಲ. ಅಲ್ಲದೇ ವಾಮಾಚಾರ, ಮಾಟ-ಮಂತ್ರಕ್ಕೆ ಬಳಸುವ ಯಾವುದೇ ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿಲ್ಲ. ಹಾಗಾಗಿ ಯಾರಾದರು ಸ್ವಾಮಿಗಳ ತಂಡ‌ ಬಂದು ಬಿಟ್ಟು ಹೋಗಿದ್ದಾರೋ ಅಥವಾ ಯಾವುದಾದರೂ ಪೂಜೆಗಾಗಿ ಹೀಗೆ ಮಾಡಲಾಗಿದೆಯೋ, ಸಿನಿಮಾ, ಧಾರಾವಾಹಿ, ಕಿರುಚಿತ್ರ, ರೀಲ್ಸ್ ಮಾಡಲು ಈ ರೀತಿ ಹೊಸ ಪಾದುಕೆ ಹಾಗೂ ದಂಡಗಳನ್ನು ತಂದು ಒಂದೆ ಜೋಡಿಸಲಾಗಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ಈ ಘಟನೆ ಬಗ್ಗೆ ಯಾರೊಬ್ಬರು ದೂರು ನೀಡದ ಕಾರಣ ಸ್ಥಳಕ್ಕೆ ಬಂದ ಪೊಲೀಸರು ಪಾದುಕೆ ಹಾಗೂ ದಂಡಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. 

ಆತಂಕದಲ್ಲಿ ಜನತೆ : 
ಹೊನ್ನಶೆಟ್ಟಿಹಳ್ಳಿ ಗ್ರಾಮದ ಸುತ್ತಮುತ್ತ ಯಾವುದೇ ಮಠಗಳಿಲ್ಲ. ಆದರೂ ಒಂದೇ ಕಡೆ ಸ್ವಾಮೀಜಿಗಳು ಧರಿಸುವ ಪಾದುಕೆಗಳು ಹಾಗೂ ದಂಡಗಳು ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಇಷ್ಟೊಂದು ಪಾದುಕೆ ಹಾಗೂ ದಂಡಗಳನ್ನು ಜೋಡಿಸಿ ಇಟ್ಟಿರುವುದನ್ನು ಕಂಡು ಹೊನ್ನಶೆಟ್ಟಿಹಳ್ಳಿ ಗ್ರಾಮಸ್ಥರು ಬೆಚ್ಚಿ ಬಿದ್ದಿರುವುದಂತು ಸುಳ್ಳಲ್ಲ.

ಇದನ್ನೂ ಓದಿ : Veerendra Patil Wife Passes Away: ಮಾಜಿ ಸಿಎಂ ವೀರೇಂದ್ರ ಪಾಟೀಲ್ ಪತ್ನಿ ಶಾರದಾ ಪಾಟೀಲ್ ನಿಧನ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News