ಶಿಕ್ಷಕರಿಗಾಗಿ ಖಾಸಗಿ ಶಾಲೆಗಳು ಪರದಾಟ! ಹೊರರಾಜ್ಯಗಳ‌ ಶಿಕ್ಷಕರ ಮೊರೆ ಹೋದ ಆಡಳಿತ ಮಂಡಳಿ?

ಶಿಕ್ಷಕರ ವೃತ್ತಿ ಅನ್ನೋದು ಪವಿತ್ರ ಕೆಲಸ. ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ, ಕೆಲಸ ಮಾಡ್ತಿರುವವರು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನ ನೆನೆಸಿಕೊಳ್ಳುತ್ತಾರೆ. ಆದರೆ ಕೋವಿಡ್ ಮಹಾಮಾರಿ ಯಾವಾಗ ರಾಜ್ಯಕ್ಕೆ ಕಾಲಿಟ್ಟಿತೋ ಆಗ ಶಿಕ್ಷಕರ ಬದುಕು ಬವಣೆಯಾಯಿತು. 

Written by - Manjunath Hosahalli | Edited by - Chetana Devarmani | Last Updated : Apr 17, 2022, 05:31 PM IST
  • ಶಿಕ್ಷಕರಿಗಾಗಿ ಖಾಸಗಿ ಶಾಲೆಗಳು ಪರದಾಟ!
  • ಹೊರರಾಜ್ಯಗಳ‌ ಶಿಕ್ಷಕರ ಮೊರೆ ಹೋದ ಆಡಳಿತ ಮಂಡಳಿ?
ಶಿಕ್ಷಕರಿಗಾಗಿ ಖಾಸಗಿ ಶಾಲೆಗಳು ಪರದಾಟ! ಹೊರರಾಜ್ಯಗಳ‌ ಶಿಕ್ಷಕರ ಮೊರೆ ಹೋದ ಆಡಳಿತ ಮಂಡಳಿ? title=
ಖಾಸಗಿ ಶಾಲೆ

ಬೆಂಗಳೂರು: ಕೋವಿಡ್ ಕಾರಣ ಕೆಲವೆಡೆ ಶಿಕ್ಷಕರಿಗೆ ಅರ್ಧ ಸ್ಯಾಲರಿ ನೀಡಿದರೆ.. ಇನ್ನೂ ಕೆಲವೆಡೆ ಕೆಲಸದಿಂದಲೇ ತೆಗೆದು ಹಾಕಿರುವ ಉದಾಹರಣೆಗಳಿವೆ. ಆದರೆ ಇದೀಗ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. 

ಇದನ್ನೂ ಓದಿ:ಜೆಡಿಎಸ್‌ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ಅಧಿಕಾರ ಸ್ವೀಕಾರ

ಶಿಕ್ಷಕರ ವೃತ್ತಿ ಅನ್ನೋದು ಪವಿತ್ರ ಕೆಲಸ. ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ, ಕೆಲಸ ಮಾಡ್ತಿರುವವರು ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನ ನೆನೆಸಿಕೊಳ್ಳುತ್ತಾರೆ. ಆದರೆ ಕೋವಿಡ್ ಮಹಾಮಾರಿ ಯಾವಾಗ ರಾಜ್ಯಕ್ಕೆ ಕಾಲಿಟ್ಟಿತೋ ಆಗ ಶಿಕ್ಷಕರ ಬದುಕು ಬವಣೆಯಾಯಿತು. ಎಷ್ಟೋ ಶಿಕ್ಷಣ ಸಂಸ್ಥೆಗಳು ಮುಚ್ಚಿ ಶಿಕ್ಷಕರು ಬೀದಿ ಪಾಲಾಗಿದ್ದರು. ಅದಷ್ಟೇ ಅಲ್ಲದೇ, ಹಲವು ಶಿಕ್ಷಣ ಸಂಸ್ಥೆಗಳು ಅರ್ಧ ಸ್ಯಾಲರಿ ಹಾಗೂ ಕೋವಿಡ್ ನೆಪವೊಡ್ಡಿ ಪೂರ್ಣಾವಧಿಯಿಂದಲೇ ಕೆಲಸದಿಂದ ವಜಾ ಮಾಡಿದ್ದಾರೆ. ಇದರ ಪರಿಣಾಮ ಇದೀಗ ರಾಜ್ಯದ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಅಭಾವ ಶುರುವಾಗಿದೆ. 

ಆಡಳಿತ ಮಂಡಳಿ ಕರೆ ಮಾಡಿ ಕರೆದ್ರೂ ಕ್ಯಾರೆ ಎನ್ನದ ಶಿಕ್ಷಕರು:

ಕೋವಿಡ್ ನಂತಹ ಕಷ್ಟದ ಪರಿಸ್ಥಿಯಲ್ಲೂ ಶಿಕ್ಷಣಕರು ತಂತ್ರಜ್ಞಾನವನ್ನ ಕಲಿತುಕೊಂಡು ಆನ್‌ಲೈನ್‌ನಲ್ಲಿ ಪಾಠ ಮಾಡಿದ್ದಾರೆ. ಕೆಲ ಖಾಸಗಿ ಮ್ಯಾನೇಜ್ಮೆಂಟ್‌ಗಳು ಆನ್ ಲೈನ್ ಕ್ಲಾಸ್ ನೆಪವೊಡ್ಡಿ ಅರ್ಧ ಸಂಬಳವನ್ನೂ ನೀಡುತ್ತಿದ್ದವು. ಈ ವ್ಯವಸ್ಥೆ ಬೇಸತ್ತ ಖಾಸಗಿ ಶಾಲೆಗಳ ಶಿಕ್ಷಕರು ತಮ್ಮ ವೃತ್ತಿಗೆ ಬ್ರೇಕ್ ಹಾಕಿ, ವಿವಿಧ ವೃತ್ತಿಗಳತ್ತ ಮುಖ ಮಾಡಿದ್ದಾರೆ. ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ರೂ ರಾಜ್ಯದ ಬಹುತೇಕ ಖಾಸಗಿ ಶಾಲೆಗಳಿಗೆ ಪಾಠ ಮಾಡಲು ಶಿಕ್ಷಕರ ಕೊರತೆ ಎದುರಾಗಿದೆ. 

ಶಿಕ್ಷಣ ವೃತ್ತಿಯನ್ನ ತೊರೆದು ತಮ್ಮ ಊರಗಳಲ್ಲಿ ಸೆಟಲ್ಡ್ ಆಗಿರುವ ಕೆಲವು ಮಂದಿ ಶಿಕ್ಷಕರು, ವ್ಯವಸಾಯ, ಸ್ವಂತ ಉದ್ಯೋಗ, ಇತರೆ ಕಂಪನಿಗಳಲ್ಲಿ ನಾನಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕರೆ ಮಾಡಿದ್ರೆ ಬರಲ್ಲ ಅಂತ ನೇರವಾಗಿ ಹೇಳ್ತಿದ್ದಾರಂತೆ. ಇದರ ಪರಿಣಾಮ ರಾಜ್ಯದಲ್ಲಿ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು, ಹೊರ ರಾಜ್ಯಗಳಿಂದ ಶಿಕ್ಷಕರನ್ನ ಕರೆಸಿಕೊಳ್ಳುವ ಪದ್ದತಿಯ ಮೊರೆ ಹೋಗಲು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗಿವೆ.

ಅಂತರ್‌ರಾಜ್ಯ ಶಿಕ್ಷಕರ ಮೊರೆ:

ಬಜೆಟ್ ಶಾಲೆಗಳಿಂದ ಹಿಡಿದು ಹೈಫೈ ಶಾಲೆಗಳ ಪರಿಸ್ಥಿಯೂ ಇದೇ ಆಗಿದೆ. ಈ ಹಿನ್ನೆಲೆ ಮಣಿಪುರ, ತ್ರಿಪುರ, ನಾಗಾಲ್ಯಾಂಡ್, ಕೇರಳ, ಆಂಧ್ರಪ್ರದೇಶ, ಉತ್ತರ ಪ್ರದೇಶದಂತಹ ಭಾಗಗಳಿಂದ ಶಿಕ್ಷಕರರನ್ನ ಕರೆಸಿಕೊಳ್ಳಲಾಗ್ತಿದೆ‌. ಸದ್ಯ ಬಹುತೇಕ ಖಾಸಗಿ ಶಾಲೆಗಳಿಗೆ ಇಂಗ್ಲೀಷ್, ಸಮಾಜ ವಿಜ್ಞಾನ, ಗಣಿತ ವಿಷಯಗಳಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ. ಮತ್ತೆ ಕೋವಿಡ್ ಬಂದು ಅರ್ಧ ಸಂಬಳ ಅಥವಾ ಕೆಲಸಕ್ಕೆ ಕುತ್ತು ತರುವ ಭೀತಿ ಈಗಿರುವ ಹಾಗೂ ವೃತ್ತಿಯನ್ನ ತೊರೆದವರನ್ನ ಕಾಡ್ತಿದೆ. ಈ ಹಿನ್ನೆಲೆ ಶಿಕ್ಷಕ ವೃತ್ತಿಯೇ ಬೇಡ ಅಂತ ಸ್ವಂತ ಊರುಗಳಲ್ಲೇ ಸೆಟಲ್ಡ್ ಆಗ್ತಿದ್ದಾರಂತೆ. 

ಇದನ್ನೂ ಓದಿ:"ಹುಬ್ಬಳ್ಳಿ ಘಟನೆ: ಪ್ರಚೋದನಾತ್ಮಕ ಪೋಸ್ಟ್ ಮಾಡಿದ ತಿಳಿಗೇಡಿ ಯುವಕನಿಗೆ ಕುಮ್ಮಕ್ಕು ಕೊಟ್ಟವರು ಯಾರು?"

ನುರಿತ ಶಿಕ್ಷಕರಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಡುಕಾಟ ನಡೆಸಿದ್ದು, ಪರದಾಡುವ ಸ್ಥಿತಿ ಎದುರಾಗಿದೆ. ಇತ್ತ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದ ಶಿಕ್ಷಕರಿಗೆ ಇದೀಗ ಬೇರೆ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಆದರೂ ಬದುಕು ಹಾಗೂ ಕುಟುಂಬ ನಿರ್ವಹಣೆಗೆ ಸಂಬಳ ಬೇಕೇ ಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಶಿಕ್ಷಣ ವೃತ್ತಿಯನ್ನ ತೊರೆಯೋದು ಅನಿವಾರ್ಯ ಅನ್ನೋದು ಕೆಲ ಶಿಕ್ಷಕರ ಅಭಿಪ್ರಾಯವಾಗಿದೆ.

ಒಟ್ಟಿನಲ್ಲಿ ಇಷ್ಟು ದಿನ ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಶಿಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಆದರೆ ಇದೀಗ ಖಾಸಗಿ ಶಾಲೆಗಳಿಗೂ ಶಿಕ್ಷಕರ ಕೊರತೆಯ ಗಾಳಿ ಬೀಸಿದ್ದು, ಆಡಳಿತ ಮಂಡಳಿಗಳಿಗೆ ದೊಡ್ಡ ಹೊಡೆತವೇ ಬಿದ್ದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News