ಬೆಂಗಳೂರು: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ, ನೇರವಾಗಿ, ಧೈರ್ಯದಿಂದ ಸತ್ಯ ಹೇಳುವುದು ಕಷ್ಟವಾಗಿದೆ.ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದರೆ ಅವರಿಗೆ ಕಹಿಯಾಗಿ ಕಾಣುತ್ತದೆ.ಇದಕ್ಕೆ ಕಾರಣ ಅವರ ವಕ್ರಕಣ್ಣುಗಳು. ಇದಕ್ಕೆ ಹೆದರದೆ ಪ್ರತಿಯೊಬ್ಬ ಪ್ರಜೆಯೂ ಸತ್ಯವನ್ನು ಧೈರ್ಯದಿಂದ ಹೇಳಲು ಮುಂದಾಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇಕಡಾ ಹನ್ನೆರಡರಷ್ಟು ಸಾಕ್ಷರರಿದ್ದರು, ಈಗ ಶೇಕಡಾ 78ರಷ್ಟು ಸಾಕ್ಷರರಾಗಿದ್ದಾರೆ. ಶಿಕ್ಷಣ ಹೆಚ್ಚಿದಷ್ಟೂ ನಮ್ಮಲ್ಲಿ ಮೌಢ್ಯ, ಅಂಧಶ್ರದ್ದೆಗಳೆಲ್ಲ ಹೆಚ್ಚಾಗುತ್ತಿದೆ. ಶಿಕ್ಷಣ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸದೆ ಇರುವುದೆ ಇದಕ್ಕೆ ಕಾರಣ. 5/11#ಪುಸ್ತಕಬಿಡುಗಡೆ pic.twitter.com/2pTlLN8CXA
— Siddaramaiah (@siddaramaiah) December 26, 2021
ಇಂದು ಗಾಂಧಿ ಭವನದಲ್ಲಿ ಸಾಹಿತಿ ಎಸ್.ಜಿ.ಸಿದ್ದರಾಮಯ್ಯನವರ ಆತ್ಮಕಥನವನ್ನು ಬಿಡುಗಡೆಗೊಳಿಸಿ, ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ನೀಡಿದ ಡಾ.ಎಂ.ಎಂ.ಕಲಬುರ್ಗಿ ಪ್ರಗತಿ ಪರ ಚಿಂತಕ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಿದ ನಂತರ ಮಾತನಾಡಿದ ಸಿದ್ಧರಾಮಯ್ಯನವರು "ಕೋಮುವಾದಿಗಳ ಕೈಗೆ ಸಿಕ್ಕಿ ಪ್ರಾಣ ಕಳೆದುಕೊಂಡ ಡಾ.ಎಂ.ಎಂ.ಕಲಬುರ್ಗಿ ಏನು ತಪ್ಪು ಮಾಡಿದ್ದರು? ಸತ್ಯ ಹೇಳಲು, ಸಮಾಜದಲ್ಲಿ ವೈಚಾರಿಕತೆಯನ್ನು ಬೆಳೆಸಲು ಪ್ರಯತ್ನ ಪಟ್ಟಿದ್ದರು. ಗೌರಿ ಲಂಕೇಶ್ ಕೂಡಾ ಇದೇ ರೀತಿ ಸತ್ಯ ಹೇಳಲು ಹೊರಟಿದ್ದರು. ಅವರಿಬ್ಬರನ್ನೂ ಕೋಮುವಾದಿಗಳೇ ಕೊಂದು ಹಾಕಿದರು" ಎಂದು ಹೇಳಿದರು.
ಇದನ್ನೂ ಓದಿ: South Africa vs India, 1st Test: ಕನ್ನಡಿಗ ಕೆ.ಎಲ್.ರಾಹುಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇಕಡಾ ಹನ್ನೆರಡರಷ್ಟು ಸಾಕ್ಷರರಿದ್ದರು, ಈಗ ಶೇಕಡಾ 78ರಷ್ಟು ಸಾಕ್ಷರರಾಗಿದ್ದಾರೆ. ಶಿಕ್ಷಣ ಹೆಚ್ಚಿದಷ್ಟೂ ನಮ್ಮಲ್ಲಿ ಮೌಢ್ಯ, ಅಂಧಶ್ರದ್ದೆಗಳೆಲ್ಲ ಹೆಚ್ಚಾಗುತ್ತಿದೆ. ಶಿಕ್ಷಣ ನಮ್ಮಲ್ಲಿ ವೈಚಾರಿಕತೆಯನ್ನು ಬೆಳೆಸದೆ ಇರುವುದೇ ಇದಕ್ಕೆ ಕಾರಣ.ಸತ್ಯ ಹೇಳುವವರನ್ನು ದೇಶದ್ರೋಹಿಗಳು, ಭಯೋತ್ಪಾದಕರೆಂದು ಆರೋಪಿಸುತ್ತಾರೆ. ಮಹಾತ್ಮ ಗಾಂಧಿಯನ್ನು ಕೊಂದವರನ್ನು ಗುಡಿ ಕಟ್ಟಿ ಪೂಜೆ ಮಾಡುತ್ತಾರೆ. ವಿಚಾರವಂತರೆಲ್ಲರೂ ಇದನ್ನು ವಿರೋಧಿಸದೆ ಹೋದರೆ ಸಂವಿಧಾನವೂ ಉಳಿಯುವುದಿಲ್ಲ, ದೇಶವೂ ಉಳಿಯುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ, ನೇರವಾಗಿ, ಧೈರ್ಯದಿಂದ ಸತ್ಯ ಹೇಳುವುದು ಕಷ್ಟವಾಗಿದೆ. ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸಿದರೆ ಅವರಿಗೆ ಕಹಿಯಾಗಿ ಕಾಣುತ್ತದೆ. ಇದಕ್ಕೆ ಕಾರಣ ಅವರ ವಕ್ರಕಣ್ಣುಗಳು. ಇದಕ್ಕೆ ಹೆದರದೆ ಪ್ರತಿಯೊಬ್ಬ ಪ್ರಜೆಯೂ ಸತ್ಯವನ್ನು ಧೈರ್ಯದಿಂದ ಹೇಳಲು ಮುಂದಾಗಬೇಕು. 3/11
— Siddaramaiah (@siddaramaiah) December 26, 2021
ಬುದ್ದ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್, ವಿವೇಕಾನಂದ ಸೇರಿದಂತೆ ಎಲ್ಲ ಮಹಾಪುರುಷರ ವಿಚಾರಗಳ ಬಗ್ಗೆ ಮಾತನಾಡುತ್ತೇವೆ, ಆದರೆ ಅವುಗಳನ್ನು ಪಾಲನೆ ಮಾಡುವಲ್ಲಿ ಎಡವಿದ್ದೇವೆ. ಇದರಿಂದಾಗಿ ಶಿಕ್ಷಿತರಾದರೂ ವೈಚಾರಿಕತೆಯನ್ನು ಬೆಳೆಸಿಕೊಂಡಿಲ್ಲ.ಸಂಗೀತ ನಿರ್ದೇಶಕ ಹಂಸಲೇಖ ವಾಸ್ತವಿಕ ನೆಲೆಗಟ್ಟಿನ ಮೇಲೆ ಮಾತನಾಡಿದ್ದರು.ಅದಕ್ಕಾಗಿ ಅವರ ಮೇಲೆ ಬಿದ್ದರು. ಅವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿದ್ದಾರೆ.ಅವರು ಹೇಳಿರುವುದು ಯಾವ ಕಾನೂನಿನ ಪ್ರಕಾರ ಅಪರಾಧ? ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: South Africa vs India, 1st Test: ಹರಿಣಗಳ ನಾಡಿನಲ್ಲಿ ಅಬ್ಬರಿಸಿದ ಕನ್ನಡಿಗದ್ವಯರು ..!
ಇತ್ತೀಚೆಗೆ ಬೌದ್ಧ, ಜೈನ, ಲಿಂಗಾಯತ, ಸಿಖ್ ಧರ್ಮಗಳೆಲ್ಲ ಹಿಂದೂ ಧರ್ಮದ ಭಾಗ ಎಂದು ಪ್ರತಿಪಾದನೆ ಮಾಡುತ್ತಿದ್ದಾರೆ. ಈ ಧರ್ಮಗಳು ವೈದಿಕ ಧರ್ಮಕ್ಕೆ ಪರ್ಯಾಯ ಎನ್ನುವುದನ್ನು ಮರೆಮಾಚಲು ಈ ಕುತಂತ್ರ ಮಾಡಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ.
ಬುದ್ದ, ಬಸವಣ್ಣನವರು ವೈದಿಕತೆಯನ್ನು ಒಪ್ಪಿಕೊಂಡವರೇ? ಅವರು ಅಂಧಶ್ರದ್ದೆ, ಗೊಡ್ಡು ಸಂಪ್ರದಾಯಗಳನ್ನು ಬೆಂಬಲಿಸಿದ್ದಾರೆಯೇ? ಬುದ್ದ, ಬಸವಣ್ಣನವರು ಸ್ಥಾಪಿಸಿದ್ದ ಧರ್ಮಗಳು ಹಿಂದೂ ಧರ್ಮದ ಭಾಗ ಎನ್ನುವವರು, ಅವರು ಪ್ರತಿಪಾದಿಸಿದ್ದ ವಿಚಾರಗಳನ್ನು ಒಪ್ಪಿಕೊಳ್ಳುತ್ತಾರೆಯೇ. ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್
ಆತ್ಮಕತೆಗಳು ಸ್ವಯಂ ವೈಭವೀಕರಣ ಆಗಬಾರದು, ಅದು ಆತ್ಮಾವಲೋಕನ ಮಾಡಿಕೊಳ್ಳಬೇಕು.ಸಾಹಿತಿ ಎಸ್.ಜಿ.ಸಿದ್ದರಾಮಯ್ಯನವರ ಆತ್ಮಕಥನದಲ್ಲಿ ಆತ್ಮವಿಮರ್ಶೆಯ ಗುಣಗಳಿವೆ.ಇದು ಕೇವಲ ಅವರ ವೈಯಕ್ತಿಕ ಕಥನವಾಗದೆ ಸಮಾಜದ ಕಥನವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: WATCH:ದೈತ್ಯ ಹಾವಿನೊಂದಿಗೆ ಆಟ, ಭಯಾನಕ ವಿಡಿಯೋ ವೈರಲ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.